ವಿದ್ಯಾರ್ಥಿಗಳು ಕ್ರೀಡಾ ಮಾನವ ಬೆಳೆಸಿಕೊಳ್ಳಿ ಶಾಸಕ ಬಿಪಿ ಹರೀಶ್
ಸಂಜೆವಾಣಿ ವಾರ್ತೆ
ಹರಿಹರ.ಆ.೩೧;  ತಾಲೂಕು  ಪದವಿಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ ನಡೆಯಿತು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹರಿಹರ ವಿಧಾನಸಭಾ ಕ್ಷೇತ್ರದ  ಶಾಸಕರಾದ  ಬಿ.ಪಿ  ಹರೀಶ್ ರವರು ಧ್ವಜಾರೋಹಣ ನೆರವೇರಿಸಿ ಮಾತನಾಡಿದವರು  ಶಿಸ್ತು, ಕ್ರೀಡಾ ಸ್ಪೂರ್ತಿ, ಸ್ಪರ್ಧಾ ಮನೋಭಾವನೆಯಿಂದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವ ಮೂಲಕ ವಿದ್ಯಾರ್ಥಿಗಳು ಕ್ರೀಡಾ ಸಾಧಕರಾಗಿ ಹೊರಹೊಮ್ಮಬೇಕೆಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.  ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಪುಷ್ಪಲತಾ ಅರಸ್ ರವರು ವಿದ್ಯಾರ್ಥಿಗಳು ಎಳವೆಯಲ್ಲಿಯೇ ಕ್ರೀಡೆಯಲ್ಲಿ ಅಧಮ್ಯ, ಉತ್ಸಾಹ ಚೇತನವನ್ನು ಬೆಳೆಸಿಕೊಳ್ಳುವ ಮೂಲಕ ಭವಿಷ್ಯದ ಕ್ರೀಡಾ ತಾರೆಯರಾಗಿ ಬೆಳಗಬೇಕೆಂದು ವಿದ್ಯಾರ್ಥಿಗಳಿಗೆ ಹಿತವಚನವನ್ನಿತ್ತರು. ಅತಿಥಿ ಗಣ್ಯರನ್ನು ಎನ್‌.ಸಿ.ಸಿ ಗೌರವ ರಕ್ಷೆಯನ್ನು ನೀಡಿ ಬ್ಯಾಂಡ್, ವಾದ್ಯಘೋಶದೊಂದಿಗೆ ಕ್ರೀಡಾಂಗಣದ ವೇದಿಕೆಗೆ ಕರೆತರಲಾಯಿತು. ಹರಿಹರ ತಾಲೂಕಿನ ವಿವಿಧ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ವಿದ್ಯಾರ್ಥಿಗಳ ಆಕರ್ಷಕ ಪಥ ಸಂಚಲನ ಹಾಗೂ ಕ್ರೀಡಾ ಜ್ಯೋತಿಯ ಆಗಮನ ಕ್ರೀಡಾ ಕೂಟಕ್ಕೆ ವಿಶೇಷ ಮೆರುಗನ್ನು ನೀಡಿದವು.  ಹರಿಹರ ತಾಲೂಕು ಕ್ರೀಡಾ ಸಂಚಾಲಕರಾದ ಶ್ರೀ ಮಂಜುನಾಥ ಟಿ ಎಸ್ ಇವರು ಕ್ರೀಡಾಕೂಟಕ್ಕೆ ಆಗಮಿಸಿದ ಅತಿಥಿ ಗಣ್ಯರನ್ನು ಸ್ವಾಗತಿಸಿದರಲ್ಲದೆ, ಕ್ರೀಡಾಕೂಟದಲ್ಲಿ ಭಾಗವಹಿಸುವ ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ದಾವಣಗೆರೆ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಉಪನಿರ್ದೇಶಕರಾದ ಶ್ರೀ ಕರಿಸಿದ್ದಪ್ಪ ಎಸ್.ಜಿ ರವರು  ಪಂದ್ಯಾಟದ ವೇಳೆ ಆಗಮಿಸಿ ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಪ್ರೋತ್ಸಾಹಿಸಿದರು. ಸಭಾ ಕಾರ್ಯಕ್ರಮದ ವೇದಿಕೆಯಲ್ಲಿ  ಸಂತ ಅಲೋಶಿಯಸ್ ವಿದ್ಯಾ ಸಂಸ್ಥೆಯ ನಿರ್ದೇಶಕರಾದ ವಂದನೀಯ ಫಾದರ್ ಎರಿಕ್ ಮಥಾಯಸ್ ಎಸ್ ಜೆ, ಸಂತ
ಅಲೋಶಿಯಸ್ ಇಂಟರ್ನ್ಯಾಷನಲ್ ಶಾಲೆಯ ಪ್ರಾಂಶುಪಾಲರಾದ ಫಾದರ್ ವಿನೋದ್ ಎ ಜೆ ಎಸ್ ಜೆ, ಹರಿಹರ ತಾಲೂಕು ಪ್ರಾಚಾರ್ಯರ ಸಂಘ ಇದರ ಕಾರ್ಯದರ್ಶಿಗಳಾದ ಶ್ರೀಮತಿ ಸುಜಾತ ಟಿ.ಡಿ,   ಶೇಖರಪ್ಪ ಎಸ್.ಜೆ.ಅಧ್ಯಕ್ಷರು ಜಿಲ್ಲಾ ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ ದಾವಣಗೆರೆ ಹಾಗೂ ತಾಲ್ಲೂಕಿನ ಎಲ್ಲಾ  ಪದವಿಪೂರ್ವ ಕಾಲೇಜುಗಳ  ಪ್ರಾಂಶುಪಾಲರು ವೇದಿಕೆಯಲ್ಲಿ ಉಪಸಿತರಿದ್ದರು. ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನ ಕನ್ನಡ ಉಪನ್ಯಾಸಕರಾದ ಶ್ರೀ ಅಬ್ದುಲ್ ರಹಮಾನ್ ಕಾರ್ಯಕ್ರಮ ನಿರೂಪಿಸಿದರು ಹಾಗೂ ಹಿಂದಿ ಉಪನ್ಯಾಸಕಿಯಾದ ಶ್ರೀಮತಿ ಶಮೀಮ್ ಬಾನು ವಂದಿಸಿದರು. ತದನಂತರದಲ್ಲಿ ಎರಡು ದಿನಗಳ ಕಾಲ ನಡೆಯುವ ಕ್ರೀಡಾಕೂಟದ ಪಂದ್ಯಾಟಗಳಿಗೆ  ಶಾಸಕರಾದ  ಬಿ.ಪಿ ಹರೀಶ್  ಗುಂಡು ಎಸೆತದ ಮೂಲಕ ಶುಭಚಾಲನೆಯನ್ನು ನೀಡಿದರು.