ಛಾಯಾಗ್ರಹಾಕರಿಗೆ ಡೇಟಾ ರೀಕವರಿ, ಆಲ್ಬಮ್ ಡಿಸೈನಿಂಗ್ ತರಬೇತಿ ಕಾರ್ಯಗಾರ
ಸಂಜೆವಾಣಿ ವಾರ್ತೆ
ದಾವಣಗೆರೆ.ಆ.೩೧; ತಾಲೂಕು ಫೋಟೋ ಮತ್ತು ವಿಡಿಯೋಗ್ರಾಫರ್ ಸಂಘದ ವತಿಯಿಂದ 185 ನೇ ವಿಶ್ವ ಛಾಯಾಗ್ರಹಣ ದಿನಾಚರಣೆ ಹಾಗೂ ಸಂಘದ 12ನೇ ವಾರ್ಷಿಕೋತ್ಸವ ಸಮಾರಂಭದ ಅಂಗವಾಗಿ ನಗರದ ಡಾ.ಸದ್ಯೋಜಾತ ಶಿವಾಚಾರ್ಯ ಸ್ವಾಮಿಗಳ ಹಿರೇಮಠದಲ್ಲಿ ಛಾಯಾಗ್ರಾಕರಿಗೂ ಹಾಗೂ ವೃತ್ತಿಬಾಂಧವರಿಗೂ ಡೇಟಾ ರೀಕವರಿ, ಆಲ್ಬಮ್ ಡಿಸೈನಿಂಗ್ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮವನ್ನು ಸಿದ್ಧಿವಿನಾಯಕ ಕಲರ್ ಲ್ಯಾಬ್ ಮಾಲೀಕರಾದ ಅರುಣ್ ಮುದ್ದಳ್ಳಿ ಹಾಗೂ ಕನ್ನಡ ಸಮರ ಸೇನೆ ರಾಜ್ಯ ಅಧ್ಯಕ್ಷರಾದ ಕೋಟ್ಯಾಳ ಸಿದ್ದೇಶ ಉದ್ಘಾಟಿಸಿದರು ಈ ತರಬೇತಿ ಕಾರ್ಯಗಾರದಲ್ಲಿ 300ಕ್ಕೂ ಹೆಚ್ಚು ಛಾಯಾಗ್ರಾಹಕರು ಭಾಗವಹಿಸಿದ್ದರು ಈ ಸಂದರ್ಭದಲ್ಲಿ ಸಂಘದ ಗೌರವಾಧ್ಯಕ್ಷ ಬಿ.ಮಂಜುನಾಥ, ಅಧ್ಯಕ್ಷ ಎಂ.ಮನು ತರಬೇತಿದಾರರಾದ ಬೆಂಗಳೂರಿನ ಪ್ರಶಾಂತ, ಹೊಸಪೇಟೆ ಖಾಜಾಪೀರ್, ಗ್ರಾಮಾಂತರ ವಲಯ ಅಧ್ಯಕ್ಷ ಎಸ್.ರಾಜಶೇಖರ ಕೊಂಡಜ್ಜಿ,ಗೌರವ ಸಲಹೆಗಾರರಾದ ಸಂತೋಷ ದೊಡ್ಮನಿ ಉಪಾಧ್ಯಕ್ಷರಾದ ಡಿ.ರಮೇಶ, ಎಚ್.ಎಸ್.ಸಂಜಯ್,ಪ್ರಧಾನ ಕಾರ್ಯದರ್ಶಿ ಕೆ.ದೇವೇಂದ್ರಪ್ಪ, ಸಂಘಟನಾ ಕಾರ್ಯದರ್ಶಿ ವಿಜಯಕುಮಾರ ಮುಧೋಳ, ಖಜಂಚಿ ಡಿ.ರಂಗನಾಥ, ಕೆ.ಎಂ.ವೆಂಕಟೇಶ, ಸುಮಾ ಸುಮಲಾತ ಗಣೇಶ್, ಅರು, ಪ್ರಸನ್ನ ರಾಜೇಶ ಕೊಟ್ರೇಶ, ಹಂಸ ಲ್ಯಾಬ್ ಬಸವರಾಜು , ಅಂಬರ್ ಕರ್ ಪ್ರದೀಪ್ .ಎಲ್ಇಡಿ ವಾಲ್ ಸಂತೋಷ, ರಾಜಶೇಖರ್ ಚಿನ್ನು , ಕುಮಾರ್ , ವೀರೇಶ್ ನಾಗಣ್ಣ ಇತರರು ಇದ್ದರು