ಜನಪದ ಕಲೆಗಳಿಗೆ ಶರಣ ಸಂಸ್ಥಾನ ಮಹತ್ವದ ಕೊಡುಗೆ
ಕಲಬುರಗಿ:ಆ.31:ಶರಣಬಸವೇಶ್ವರ ಸಂಸ್ಥಾನ ಜನಪದ ಕಲೆಗಳಿಗೆ ಮಹತ್ವದ ಕೊಡುಗೆಯನ್ನು ನೀಡುತ್ತಿದೆ ಎಂದು ಶರಣಬಸವೇಶ್ವರ ಸಂಯುಕ್ತ ಪ್ರೌಢಶಾಲೆಯ ಉಪನ್ಯಾಸ ಡಾ.ಎನ್.ಮಡಿವಾಳಪ್ಪ ಹೇಳಿದರು.
ಕಲಬುರಗಿಯ ಶರಣಬಸವೇಶ್ವರ ದೇವಸ್ಥಾನದಲ್ಲಿ 30 ದಿನಗಳ ಸಾಂಸ್ಕøತಿಕ ಶಿವಾನುಭವ ಉಪನ್ಯಾಸ ಮಾಲಿಕೆಯಲ್ಲಿ ಶನಿವಾರ ಜನಪದ ಕಲೆಗಳು ಎಂಬ ವಿಷಯ ಕುರಿತು ಮಾತನಾಡಿದರು.
ಜನಪದ ಕಲೆಗಳು ಮನುಷ್ಯನμÉ್ಟೀ ಪ್ರಾಚೀನವಾದವು. ಅನುಕರಣೆಯಿಂದ, ಅರಿತದ್ದನ್ನು ಒಂದೆಡೆ ದಾಖಲಿಸಬೇಕೆಂಬ ಮನುಷ್ಯ ಸಹಜ ಗುಣದಿಂದ ಇಂಥ ಕಲೆಗಳು ಅಸ್ತಿತ್ವಕ್ಕೆ ಬಂದಿವೆ.ಜನಪದ ಕಲೆ ಮತ್ತು ಕಲಾವಿದರು ಗ್ರಾಮೀಣ ಭಾರತದ ತಾಯಿ ಬೇರುಗಳಿದ್ದಂತೆ. ಜನಜೀವನ ಮತ್ತು ಉನ್ನತ ಸಾಂಸ್ಕೃತಿಕ ಪರಂಪರೆ ಬಿಂಬಿಸುವ ಜನಪದ ಕಲೆಗಳು ಗ್ರಾಮೀಣ ಭಾರತದ ಜೀವಾಳವಾಗಿವೆ. ಮೊಹರಂ, ಕರಡೆ ಮಜರು, ಜೋಗತಿ ಕುಣಿತ, ಎಲ್ಲಮ್ಮನ ಕುಣಿತ, ರಿವಾಯತ, ಹೋಳಿ ಕುಣಿತ, ಕಂಸಾಳೆ, ಡೊಳ್ಳು ಕುಣಿತ, ಪೂಜಾ ಕುಣಿತ, ಯಕ್ಷಗಾನ, ವೀರಗಾಸೆ, ತೊಗಲು ಗೊಂಬೆ ಹೀಗೆ ಅನೇಕ ಜನಪದ ಕಲೆಗಳು ನಮ್ಮ ಕರ್ನಾಟದಲ್ಲಿ ನೋಡಬಹುದು.
ಪೂಜ್ಯ ದೊಡ್ಡಪ್ಪ ಅಪ್ಪ ಅವರು ಜನಪದ ಕಲೆಗಳನ್ನು ಸಂಸ್ಥಾನದಲ್ಲಿ ನಡೆಸಿಕೊಂಡು ಬಂದಿದ್ದರು. ಅದರಂತೆ ಪೂಜ್ಯ ಡಾ.ಶರಣಬಸವಪ್ಪ ಅವರು ಇನ್ನೂ ಹೆಚ್ಚಿನ ಮಟ್ಟದಲ್ಲಿ ಜನಪದ ಕಲೆಗಳಿಗೆ, ಕಲಾವಿದರಿಗೆ ಪೆÇ್ರೀತ್ಸಾಹ ನೀಡುತ್ತಾ ಬಂದಿದ್ದಾರೆ. ಜನಪದ ಕಲೆಗಳು ನಿರಂತವಾಗಿ ಜೀವಂತವಾಗಿ ಇರಬೇಕೆಂಬುದು ಪೂಜ್ಯರ ಆಶಯವಾಗಿದೆ. ಹಾಗಾಗಿ ಮಹಾದಾಸೋಹಿ ಶರಣಬಸವೇಶ್ವರ ಜಾತ್ರಾ ಸಂದರ್ಭದಲ್ಲಿ ನಿರಂತರವಾಗಿ ಮೂರು ದಿನಗಳ ಕಾಲ ಅಖಿಲ ಭಾರತ ಶಿವಾನುಭವ ಮಂಟದಲ್ಲಿ ಜನಪದ ಹಾಡುಗಳ ಸಂಗಮೇ ಜರುಗುತ್ತದೆ. ಮೂರು ದಿನ ರಾತ್ರಿ ನಿರಂತರವಾಗಿ ಹಂತಿ ಹಾಡು, ಭಜನೆ ಹಾಡು, ಡೊಳ್ಳಿನ ಹಾಡುಗಳು ಜನರ ಮನ ಸೂಳೆಗೊಳ್ಳುತ್ತವೆ. ನಾಡಿನ ಪ್ರಸಿದ್ಧ ಜನಪದ ಕಲಾವಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ತಮ್ಮ ಕಲಾಸೇವೆಯನ್ನು ಇಲ್ಲಿ ಸಲ್ಲಿಸುತ್ತಾರೆ. ಆ ಕಲಾವಿದರನ್ನು ಪೂಜ್ಯರು ದಾಸೋಹಗೈದು ಸತ್ಕರಿಸಿ ಗೌರವಿಸುತ್ತಾರೆ. ಇಂತಹ ಪರಂಪರೆ ಶರಣಬಸವೇಶ್ವರ ಸಂಸ್ಥಾನದಲ್ಲಿ ಮಾತ್ರ ಸಾಧ್ಯವಾಗಿದೆ. ಅಲ್ಲದೆ ಶ್ರಾವಣ ಮಾಸದಲ್ಲೂ ಸಹ ರಾಜ್ಯದ ಮೂಲೆ ಮೂಲೆಗಳಿಂದ ಜನಪದ ಕಲಾವಿದರು ಶರಣರ ಕುರಿತು ಜನಪದ ಹಾಡುಗಳನ್ನು ಪ್ರಸ್ತುತ ಪಡಿಸುತ್ತಾರೆ. ಸಂಸ್ಥಾನದ ಚೇರಮನ್ ಪೂಜ್ಯ ಡಾ.ದಾಕ್ಷಾಯಣಿ ಅವ್ವ ಅವರು ಮತ್ತು ಕಾರ್ಯದರ್ಶಿ ಬಸವರಾಜ ದೇಶಮುಖ ಅಣ್ಣ ಅವರು ಸಹ ಜನಪದ ಕಲೆಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ ಎಂದು ಹೇಳಿದರು.