ಸೆ. 3 ಹಾಗೂ 4 ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ
ಕಲಬುರಗಿ:ಆ.31:ಕಲಬುರಗಿ ನಗರಕ್ಕೆ ನೀರು ಸರಬರಾಜು ಮಾಡುವ ಸರಡಗಿ ಭೀಮಾ ನದಿಯಿಂದ ನೀರು ಸರಬರಾಜು ಆಗುವ ಮುಖ್ಯ ಕೊಳವೆ ಮಾರ್ಗದಲ್ಲಿ ಅಂದರೆ ಸರಡಗಿ ಮೂಲ ಸ್ಥಾವರದಲ್ಲಿ, ಪರತಹಾಬಾದ ಮತ್ತು ಬಿದ್ದಾಪೂರ ಕಾಲೋನಿಯ ರೇಲ್ವೆ ಕ್ರಾಸ್ ಹತ್ತಿರ ಸೋರಿಕೆ ಕಂಡು ಬಂದಿದ್ದು, ಇದರ ತುರ್ತು ದುರಸ್ತಿ ಕಾರ್ಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಕೊಟನೂರ ಹಾಗೂ ಶೋರಗುಂಬಜ್ ಜಲ ಶುದ್ಧೀಕರಣ ಘಟಕದ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ 2024ರ ಸೆಪ್ಟೆಂಬರ್ 3 ಹಾಗೂ 4 ರಂದು ಎರಡು ದಿನಗಳ ಕಾಲ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕಲಬುರಗಿ ಕೆಯುಡಬ್ಲ್ಯುಎಸ್‍ಎಂಪಿ-ಕೆಯುಐಡಿಎಫ್‍ಸಿ ಯೋಜನಾ ಅನುಷ್ಠಾನ ಘಟಕದ ಕಾರ್ಯಪಾಲಕ ಅಭಿಯಂತರರು ತಿಳಿಸಿದ್ದಾರೆ.
ಕಲಬುರಗಿ ನಗರದ ಬಿದ್ದಾಪೂರ, ರಾಯರಗುಡ್ಡಿ, ವಿಶಾಲ ನಗರ, ಅಂಭಿಕ ನಗರ, ಪಿಂಪ್ಲಿ ಟೆಂಪಲ್, ಪಿ ಆಂಡ್ ಟಿ ಕಾಲೋನಿ, ವಿದ್ಯಾನಗರ, ಯಶವಂತ ನಗರ, ಕರುಣೇಶ್ವರ ನಗರ, ಗಣೇಶ ನಗರ, ಭಾಗ್ಯವಂತಿ ನಗರ, ದೇವಾನಗರ, ತಿಲಕನಗರ, ಬನಶಂಕರಿ ನಗರ, ಹರಿನಗರ, ಗಾಬರೇ ಲೇಔಟ್, ಜೆಂಶೇಟಿ ನಗರ, ಕೃಷ್ಣ ನಗರ, ತಾರಫೈಲ್, ಉದಯ ನಗರ, ಎನ್‍ಜಿಓ ಕಾಲೋನಿ, ಜೇವರ್ಗಿ ಕಾಲೋನಿ, ಮಾಕಾ ಲೇಔಟ್, ಸಂತೋಷ ಕಾಲೋನಿ, ಪಿಡಬ್ಲ್ಯೂಡಿ ಕಾಲೋನಿ, ಬ್ಯಾಂಕ್ ಕಾಲೋನಿ, ಬಾಲಾಜಿ ನಗರ, ರಹೆಮತ್ ನಗರ, ಸಂಪಿಕೆ ನಗರ, ಬುದ್ಧನಗರ, ರೇವಣಸಿದ್ದೇಶ್ವರ ಕಾಲೋನಿ, ಸಾಯಿ ನಗರ, ಓಜಾ ಲೇಔಟ್, ಸ್ವಾಮಿ ವಿವೇಕಾನಂದ ನಗರ, ಪ್ರಗತಿ ಕಾಲೋನಿ, ಸಿಐಬಿ ಕಾಲೋನಿ, ಶಕ್ತಿ ನಗರ, ಸ್ಟೇಷನ್ ಬಜಾರ, ಐವಾನ್ ಶಾಹಿ, ಯತೀಮ ಖಾನಾ, ಶಾಂತಿ ನಗರ, ವಿಠ್ಠಲನಗರ, ಖುಬಾ ಪ್ಲಾಟ, ಮಿಸಬಾ ನಗರ, ಅಜಮಿರ್ ಕಾಲೋನಿ, ಕರಿಮ ನಗರ, ಗಾಲೀಬ್ ಕಾಲೋನಿ, ಮಹಮ್ಮದ ಚೌಕ್, ಖಾದಿಲ್ ಚೌಕ್, ಶಿವನಗರ, ಶಿದ್ರಮೇಶ್ವರ ಕಾಲೋನಿ, ನಬಿ ಕಾಲೋನಿ, ಶೇಖ ರೋಜಾ, ಕೈಲಾಸ ನಗರ, ಜಿಆರ್ ನಗರ, ಕಸ್ತೂರಿ ನಗರ, ಆಶ್ರಯ ಕಾಲೋನಿ, ಪೂಜಾ ಕಾಲೋನಿ, ಜಾಗೃತಿ ಕಾಲೋನಿ, ಓಂ ನಗರ, ಜಂಜಂ ಕಾಲೋನಿ, ಜುಬೇರ್ ಕಾಲೋನಿ, ಅಜಾದಪೂರ ಕಾಲೋನಿ, ನಾಯ್ಡು ಕಾಲೋನಿ ಹಾಗೂ ಮಿನಿ ಹಮಾಲವಾಡಿ ಹಾಗೂ ಇನ್ನಿತರ ಪ್ರದೇಶಗಳಿಗೆ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದ್ದು, ನಗರದ ಸಾರ್ವಜನಿಕರು ಮಹಾನಗರ ಪಾಲಿಕೆ, ಕೆಯುಐಡಿಎಫ್‍ಸಿ ಹಾಗೂ ಮೆ|| ಎಲ್ ಆಂಡ್ ಟಿ ಕಂಪನಿಗೆ ಸಹಕರಿಸಬೇಕೆಂದು ಅವರು ತಿಳಿಸಿದ್ದಾರೆ.