ಗಣಜಲಖೇಡ: ಜಗದ್ಗುರು ಮೌನೇಶ್ವರ ಜಾತ್ರಾ ಮಹೋತ್ಸವ
ಕಲಬುರಗಿ,ಆ.31-ತಾಲ್ಲೂಕಿನ ಗಣಜಲಖೇಡ ಗ್ರಾಮದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಜಗದ್ಗುರು ಮೌನೇಶ್ವರ ಜಾತ್ರಾ ಮಹೋತ್ಸವವು ನಾಗೇಶ ಮುತ್ಯಾ ವಿಶ್ವಕರ್ಮ ಅವರ ನೇತೃತ್ವದಲ್ಲಿ ನಡೆಯಲಿದೆ.
ಜಾತ್ರಾ ಮಹೋತ್ಸವದ ಅಂಗವಾಗಿ ಸೆ.1 ರಂದು ಬೆಳಿಗ್ಗೆ 6 ಗಂಟೆಗೆ ಸುಕ್ಷೇತ್ರ ಅಷ್ಟಗಾ ಗ್ರಾಮದಿಂದ ಜಗನ್ಮಾತೆ ಕಾಳಿಕಾದೇವಿ ಪಲ್ಲಕ್ಕಿ ಉತ್ಸವ ಪುರವಂತರ ಹಾಗೂ ನಂದಿಕೋಲ ಸೇವೆಯೊಂದಿಗೆ ಜಂಬಗಾ (ಬಿ), ಕುಮಸಿ ಮಾರ್ಗವಾಗಿ ಸಾಯಂಕಾಲ ಗಣಜಲಖೇಡ ಗ್ರಾಮದ ಜಗದ್ಗುರು ಮೌನೇಶ್ವರ ದೇವಸ್ಥಾನ ತಲುಪಲಿದೆ. ನಂತರ ಮಹಾಪ್ರಸಾದ ವಿತರಣೆ ನಡೆಯಲಿದೆ.
ಸೆ.2 ರಂದು ಬೆಳಿಗ್ಗೆ 6 ಗಂಟೆಗೆ ಜಗನ್ಮಾತೆ ಕಾಳಿಕಾದೇವಿ ಹಾಗೂ ಜಗದ್ಗರು ಮೌನೇಶ್ವರರ ಮೂರ್ತಿ ಹಾಗೂ ಬೆಳ್ಳಿ ಪಾದರಕ್ಷೆಗಳಿಗೆ ಮಹಾಭಿಷೇಕ ನಂತರ 9 ಗಂಟೆಗೆ ಜಗನ್ಮಾತೆ ಕಾಳಿಕಾದೇವಿ ಹಾಗೂ ಮೌನೇಶ್ವರರ ಜೋಡ ಪಲ್ಲಕ್ಕಿ ಉತ್ಸವ ನಡೆಯಲಿದೆ.