ದೈಹಿಕ ಶಿಕ್ಷಕ ಪ್ರಭುಗೌಡ ಮಾಡಗಿ ಅಮಾನತು
ಕಲಬುರಗಿ:ಆ.31:ಹಿಂದುಳಿದ ವರ್ಗದ ಮೊರಾರ್ಜಿ ದೇಸಾಯಿ ವಸತಿ ಶಾಲೆ ದೈಹಿಕ ಶಿಕ್ಷಕ ಪ್ರಭುಗೌಡ ಮಾಡಗಿ ಜೇವರ್ಗಿ ಟೌನ್, ಜೇವರ್ಗಿ ತಾಲ್ಲೂಕು ಕಲಬುರಗಿ ಜಿಲ್ಲೆ ಆದ ಇವರನ್ನು ಜಿಲ್ಲಾಧಿಕಾರಿಗಳು ಕಲಬುರಗಿ ಜಿಲ್ಲೆ ರವರು ಉಲ್ಲೇಖಿತ ಅದೇಶದಲ್ಲಿ ಕರ್ನಾಟಕ ನಾಗರಿಕ ಸೇವಾ ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ ನಿಯಮಗಳು 1957 ರ ನಿಯಮ 10(1) (ಡಿ) ರಂತೆ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ಅಮಾನುಗೊಳಿಸಿರುವ ಆದೇಶವನ್ನು ಸ್ಥೀರಿಕರಣಗೊಳಿಸಲಾಗಿದೆ ಎಂದು ಬೆಂಗಳೂರಿನ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀ ಕಾಂತರಾಜು ಅವರು ತಿಳಿಸಿದ್ದಾರೆ.