ಪ್ರಥಮ ಕಲಬುರಗಿ ಆಶಾ ಕಾರ್ಯಕರ್ತೆಯರ ಜಿಲ್ಲಾ ಸಮ್ಮೇಳನ
ಕಲಬುರಗಿ:ಆ.31:ಆಶಾ ಕಾರ್ಯಕರ್ತೆಯರಿಗೆ ದುಡಿಮೆಗೆ ತಕ್ಕ ಸಂಬಳ ಸಿಗುತ್ತಿಲ್ಲ.ಅವರು ತಮ್ಮ ಬದುಕನ್ನು ಕಷ್ಟ ದಲ್ಲಿಯೆ ಸಾಗಿಸುತ್ತಿದ್ದಾರೆ ಎಂದು AIUTUC ಕಾರ್ಮಿಕ ಸಂಘಟನೆಯ ರಾಜ್ಯ ಸಮಿತಿ ಸದಸ್ಯರಾದ M.ಉಮಾ ದೇವಿ ಅವರು ಹೇಳಿದರು.
ಕಲಬುರಗಿ ಜಿಲ್ಲೆ ಪ್ರಥಮ ಆಶಾ ಸಮ್ಮೇಳನದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡುತ್ತಿದ್ದರು.
15 ವರ್ಷಗಳಿಂದಲೂ ಆಶಾ ಕಾರ್ಯಕರ್ತೆ ಯರು ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು ಅವರನ್ನು ಸರಕಾರಿ ನೌಕರರು ಅಥವಾ ಕಾರ್ಮಿಕರು ಎಂದು ಸಹ ಪರಿಗಣಿಸುತ್ತಿಲ್ಲ.ಹಗಲಿರುಳು ದುಡಿದರು ಇವರಿಗೆ ಕನಿಷ್ಠ ಸೌಲಭ್ಯಗಳನ್ನು ಸರಕಾರ ಒದಗಿಸುತ್ತಿಲ್ಲ.ಸಮಾಜದ ಆರೋಗ್ಯವನ್ನು ಕಾಪಾಡುವ ಇವರನ್ನೆ ಅನಾರೋಗ್ಯದ ಸ್ಥಿತಿಯಲ್ಲಿ ಇಡಲಾಗಿದೆ.ಸರ್ಕಾರ ಇಗಲಾದರು ಕಣ್ಣು ತೆರೆದು ದುಡಿಮೆಗೆ ತಕ್ಕ ಪ್ರತಿಫಲ ನೀಡಬೇಕೆಂದು ಒತ್ತಾಯಿಸಿದರು. ಆಶಾಗಳ ಸಂಘಟಿತ ಹೋರಾಟದಿಂದ ಮಾತ್ರ ಇದು ಸಾಧ್ಯವಿದ್ದು ಈ ನಿಟ್ಟಿನಲ್ಲಿ ಹೋರಾಟ ಬೇಳೆಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಆಶಾ ಜಿಲ್ಲಾ ಸಂಚಾಲಕರಾದ ಶ್ರೀ ವಿ.ಜಿ.ದೇಸಾಯಿ ಅವರು ಮಾತನಾಡಿ ಆಶಾಗಳು ಆರೋಗ್ಯ ಇಲಾಖೆಯ ಬೆನ್ನೆಲುಬು ಆಗಿ ಕೆಲಸ ಮಾಡುತ್ತಿದ್ದಾರೆ. ಆದರೆ ಅವರಿಗೆ ಯಾವುದೇ ಕಾನೂನು ಬದ್ದ ಸೌಲಭ್ಯಗಳನ್ನು ನೀಡದೇ ಕೆಲಸದ ಹೊರೆ ಹೆಚ್ಚಳ ಮಾಡಿ ಅವರ ಬೆನ್ನೆಲುಬನೇ ಮುರಿಯುವ ಕೆಲಸ ನಡೆಯುತ್ತದೆ ಎಂದರು.ಈ ಶೋಷಣೆ ನಿಲ್ಲಬೇಕಾದರೇ ಸಂಘಟಿತವಾದ ಭಾರಿ ಹೋರಾಟವನ್ನೆ ಆಶಾಕಾರ್ಯಕರ್ತೆಯರು ನಡೆಸಬೇಕು ಎಂದು ಕರೆ ನೀಡಿದರು.
AIUTUC ಕಾರ್ಮಿಕ ಸಂಘಟನೆಯ ಜಿಲ್ಲಾ ಕಾರ್ಯದರ್ಶಿಗಳಾದ S.M ಶರ್ಮಾ ಅವರು ಪ್ರಾಸ್ತಾವಿಕ ವಾಗಿ ಮಾತನಾಡಿದರು.ಆಶಾ ಸಂಘಟನಾಕಾರರಾದ ಶಿವಲಿಂಗಮ್ಮ ಅವರು ಸ್ವಾಗತಿಸಿದರು. ವಿಜಯಲಕ್ಷ್ಮಿ ಕಮಲಾಪೂರ ಇವರು ಕಾರ್ಯ ಕ್ರಮ ನಿರ್ವಹಿಸಿದರು.,ಆಶಾ ಸಂಘಟನಾಕಾರರಾದ ರಾಘವೇಂದ್ರ M.G,ನಾಗವೇಣಿ,ಮಲ್ಲಮ ಮೊದಲಾವರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಆಶಾ ಕಾರ್ಯಕರ್ತೆಯರ ಹೊಸ ಸಮಿತಿ ಯನ್ನು ಆಯ್ಕೆ ಮಾಡಲಾಯಿತು. ಹಾಗೂ ಸಮ್ಮೇಳನದಲ್ಲಿ ಎರಡು ಗೊತ್ತುವಳಿಯನ್ನು ಪಾಸ್ ಮಾಡಲಾಯಿತು.