ಮಟಕಾ ನಂಬರ್ ಬರೆದುಕೊಳ್ಳುತ್ತಿದ್ದ ವ್ಯಕ್ತಿ ಬಂಧನ
ಕಲಬುರಗಿ,ಆ.31-ನಗರದ ಖದೀರ್ ಚೌಕ್ ಹತ್ತಿರ ಮಟಕಾ ನಂಬರ್ ಬರೆದುಕೊಳ್ಳಲಾಗುತ್ತಿದೆ ಎಂಬ ಮಾಹಿತಿ ಮೇಲೆ ಆರ್.ಜಿ.ನಗರ ಪೊಲೀಸ್ ಠಾಣೆ ಮುಖ್ಯಪೇದೆ ಸಿಕ್ರೇಶ್ವರ, ಸಿಬ್ಬಂದಿಗಳಾದ ಮಲ್ಲನಗೌಡ, ಉಮೇಶ, ಅರೇಷ, ಮುಜಾಹಿದ್ ಅವರು ದಾಳಿ ನಡೆಸಿ ಖದೀರ್ ಚೌಕ್ ನಿವಾಸಿ ಮಹ್ಮದ್ ಅಶ್ರಫ್ ಅಲಿಯಾಸ್ ಅಶ್ರಫ್ ಝೂಲಾವಾಲೆ (40) ಎಂಬಾತನನ್ನು ಬಂಧಿಸಿ 1890 ರೂ.ನಗದು ಮತ್ತು ಮಟಕಾ ಚೀಟಿ, ಒಂದು ಬಾಲ್ ಪೆನ್ ಜಪ್ತಿ ಮಾಡಿದ್ದಾರೆ. ಆರ್.ಜಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.