ಸೆಪ್ಟೆಂಬರ್ 3 ರಿಂದ 7 ರವರೆಗೆ ಕಲಬುರಗಿ ನಗರದಲ್ಲಿ ಪ್ರತಿದಿನಸಂಜೆ 6 ಗಂಟೆ ಏಕವ್ಯಕ್ತಿ ಮಹಿಳಾ ನಾಟಕೋತ್ಸವ
ಕಲಬುರಗಿ ಆ. 31: ಕಲಬುರಗಿ ರಂಗಾಯಣದ ವತಿಯಿಂದ ಸೆಪ್ಟೆಂಂಬರ್ 3 ರಿಂದ 7 ರ ವರೆಗೆ ಪ್ರತಿದಿನ ಸಾಯಂಕಾಲ 6 ಗಂಟೆಗೆ ಕಲಬುರಗಿಯ ನಗರದ ಡಾ. ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಏಕವ್ಯಕ್ತಿ ಮಹಿಳಾ ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿ ರಂಗಾಯಣದ ನಿರ್ದೇಶಕಿ ಡಾ. ಸುಜಾತಾ ಜಂಗಮಶೆಟ್ಟಿ ತಿಳಿಸಿದರು.
ಶನಿವಾರದಂದು ರಂಗಾಯಣ ಸಭಾಂಗಣದಲ್ಲಿ ಅವರು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿ, ಸೆಪ್ಟೆಂಬರ್ 3 ರಂದು ನಿರಾಕರಣೆ ನಾಟಕ, ಸೆಪ್ಟೆಂಬರ್ 4 ರಂದು ಕಸ್ತೂರಬಾ ನಾಟಕ, ಸೆಪ್ಟೆಂಬರ್ 5 ರಂದು ಕೌದಿ ನಾಟಕ, ಸೆಪ್ಟೆಂಬರ್ 6 ರಂದು ಅನುರಕ್ತೆ ನಾಟಕ ಹಾಗೂ ಸೆಪ್ಟೆಂಬರ್ 7 ರಂದು ಅವಳ ಕಾಗದ ನಾಟಕವು ಐದು ದಿನಗಳ ಕಾಲ ಪ್ರತಿದಿನ ಸಾಯಂಕಾಲ 6 ಗಂಟೆಗೆ ಪ್ರದರ್ಶನಗೊಳ್ಳಲಿವೆ ಎಂದರು.
ಸೆಪ್ಟೆಂಬರ 3 ರಂದು ಮಂಗಳವಾರ ಸಂಜೆ 6 ಗಂಟೆಗೆ ಕಲಬುರಗಿ ನಗರದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಬೆಂಗಳೂರು ರಂಗಕರ್ಮಿಗಳು ಹಾಗೂ ಕವಿಯತ್ರಿ ಡಾ.ಹೆಚ್.ಎಲ್.ಪುಷ್ಪಾ ಅವರು ಏಕವ್ಯಕ್ತಿ: ಮಹಿಳಾ ನಾಟಕೋತ್ಸವವನ್ನು ಉದ್ಘಾಟಿಸುವರು. ಬೆಂಗಳೂರು ಕರ್ನಾಟಕ ಸಾಹಿತ್ಯ ಅಕಾಡಮಿ ಸದಸ್ಯೆ ಡಾ.ಚಂದ್ರಕಲಾ ಬಿದರಿ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಲಿದ್ದಾರೆ ಎಂದರು.
ಕರ್ನಾಟಕದಲ್ಲಿ ಯಾದಗಿರಿ ಮತ್ತು ಈ ಕಡೆ ಭಾಗದ ಹಳ್ಳಿ ಜನರಿಗೆ ಇದರ ಬಗ್ಗೆ ಹೆಚ್ಚು ಮಾಹಿತಿ ಇಲ್ಲ ಅವರಿಗೆಲ್ಲ ಮನೆ ಮನೆಗಳಿಗೆ ಮನ ಮನಗಳಿಗೆ ನಾಟಕದ ರುಚಿ ಮುಟ್ಟಿಸುವ ಜವಾಬ್ದಾರಿ ನಮ್ಮದಾಗಬೇಕು ಎಂದರು.
ನಾಟಕಗಳು ಸಿಟಿಗಳಿಗೆ ಮಾತ್ರ ಸೀಮಿತ ರಂಗಾಯಣ ಹೋಬಳಿಗಳಲ್ಲಿ ಮುಟಿಸುವುದು ನಮ್ಮ ಜವಾಬ್ದಾರಿಯಾಗಿದೆ. ಪ್ರತಿವರ್ಷದಲ್ಲಿ ಮೂರು ನಾಟಕಗಳು ನಮ್ಮ ರಂಗಾಯಣದಿಂದ ಹೊರ ಬರಬೇಕು ಮತ್ತು ಅದನ್ನು ಪ್ರಚಲಿತ ಪ್ರಡಿಸಬೇಕು. ಇದಕ್ಕಾಗಿ ನಾವು ಸರಕಾರದಿಂದ ಒಂದು ಕೋಟಿ ಅನುದಾನವನ್ನು ಕೇಳಿದ್ದೇವೆ ಇದರಲ್ಲಿ ಇಡಿ ರಂಗಾಯಣದ ಚಟುವಟಿಕೆಗಳನ್ನು ಸೇರಿ ಮತ್ತು ಮೂವರು ಟೆಕ್ನಿಷನ್ ಅವರ ಸಂಬಳ ಮತ್ತು 12 ಜನ ಕಲಾವಿದರ ಸಂಬಳ ಹಾಗೂ ಎಲ್ಲ ತರಹದ ವ್ಯವಹಾರಗಳನ್ನು ಮಾಡುವುದು. ಒಂಬತ್ತು ವರ್ಷಗಳ ಹಿಂದಿನ ಸಂಭಾವನೆಯನ್ನು ಮತ್ತು ಹಳೆಯ ಕ್ರೀಯಾ ಯೋಜನೆಯನ್ನು ಅಳವಡಿಸಿಕೊಂಡು ಮುಂದಿನ ಯೋಜನೆಯನ್ನು ಹಾಕಿಕೊಳ್ಳುತ್ತೇವೆ ಎಂದು ಅವರು ಹೇಳಿದರು.
ಈ ಪತ್ರಿಕಾಗೋಷ್ಠಿಯಲ್ಲಿ ರಂಗಾಯಣ ಉಪನಿರ್ದೇಶಕಿ ಜಗದೀಶ್ವರಿ ನಾಸಿ ಉಪಸ್ಥಿತರಿದ್ದರು.