ಅಧಿಕಾರಿಗಳಿಂದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪರೀಕ್ಷೆ
ಕಲಬುರಗಿ,ಆ.31-ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರ ಸೂಚನೆ ಮತ್ತು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ ಆಯುಕ್ತರ ಆದೇಶದ ಮೇರೆಗೆ ಜಿಲ್ಲೆಯಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ವತಿಯಿಂದ ಜಿಲ್ಲಾ ಅಂಕಿತ ಅಧಿಕಾರಿ ಡಾ.ರತ್ನಾಕರ ತೋರಣ ಅವರ ಮಾರ್ಗದರ್ಶನದಲ್ಲಿ ಜಿಲ್ಲೆಯಾದ್ಯಂತ ಬೀದಿ ಬದಿಯ ವ್ಯಾಪಾರಿಗಳು, ಹೋಟೆಲ್‍ಗಳು, ರೆಸ್ಟೋರೆಂಟಗಳು ಮತ್ತು ಬೇಕರಿಗಳು ಸೇರಿದಂತೆ ಒಟ್ಟು=53 ಅಂಗಡಿಗಳನ್ನು ಆಹಾರ ಸುರಕ್ಷತಾಧಿಕಾರಿಗಳು ಪರಿಶೀಲಿಸಿ ಮಾಡಿ 9500 ರೂ. ದಂಡ ವಿಧಿಸಿದ್ದಾರೆ.
ಬೀದಿ ಬದಿ ವ್ಯಾಪರ, ಹೋಟೆಲ್, ರೆಸ್ಟೋರೆಂಟ್ ಮತ್ತು ಬೇಕರಿಗಳಲ್ಲಿನ ಆಹಾರ ಸುರಕ್ಷಣೆ ಮತ್ತು ಗುಣಮಟ್ಟದ ಬಗ್ಗೆ ತಪಾಸಣೆ ನಡೆಸುವುದರ ಜೊತೆಗೆ ಅಂಗಡಿಗಳ ಮಾಲೀಕರಿಗೆ ಸುಧಾರಣೆ ನೋಟಿಸ್ ನೀಡಲಾಗಿದೆ. ಈ ವಿಶೇಷ ಆಂದೋಲನವು ಆ.31 ರವರೆಗೆ ಮುಂದುವರೆಯಲಿದ್ದು, ಜಿಲ್ಲೆಯಲ್ಲಿ ಆಹಾರ ಮಳಿಗೆಗಳ ಸ್ವಚ್ಛತೆ ಹಾಗೂ ನೈರ್ಮಲ್ಯತೆ ಬಗ್ಗೆ ತಿಳುವಳಿಕೆ ನೀಡಲಾಗುವುದು. ಕಲಬೇರಕೆ ಆಹಾರ ಮಾದರಿಗಳು, ಮೀನು, ಮಾಂಸ ಹಾಗೂ ಮೊಟ್ಟೆ ಇವುಗಳನ್ನು ವಿಶೇಷವಾಗಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಜಿಲ್ಲಾ ಅಂಕಿತ ಅಧಿಕಾರಿ ಡಾ.ರತ್ನಾಕರ ತೋರಣ ತಿಳಿಸಿದ್ದಾರೆ.