ಸಮುದಾಯ ಆಧಾರಿತ ಆರೋಗ್ಯ ಶಿಬಿರ ಯಶಸ್ವಿ
ಅಫಜಲಪೂರ,ಆ.31-ತಾಲೂಕಿನ ಮಣ್ಣೂರ ಗ್ರಾಮದಲ್ಲಿ ಗ್ರಾಮ ಪಂಚಾಯಿತಿ, ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಅಫಜಲಪುರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಸಂಯುಕ್ತ ಆಶ್ರಯದಲ್ಲಿ ಸಮುದಾಯ ಆಧಾರಿತ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು.
ಶಿಬಿರವನ್ನು ಗ್ರಾಮ ಪಂಚಾಯತಿಯ ಅಧ್ಯಕ್ಷರು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಮಣ್ಣೂರನ ಮುಖ್ಯ ವೈದ್ಯಧಿಕಾರಿಗಳಾದ ಡಾ.ಸಂಜಿವೀನಿ ಜಾಧವ, ಅಫಜಲಪೂರ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ದಂತ ವೈದ್ಯಾಧಿಕಾರಿ ಡಾ.ಮನಾಲಿ ದೇಶಪಾಂಡೆ, ಐಸಿಟಿಸಿ ವಿಭಾಗದ ಆಪ್ತಸಮಾಲೋಚಕರಾದ ರವಿಕುಮಾರ್ ಭುರ್ಲೆ, ಪ್ರಯೋಗ ಶಾಲಾ ತಂತ್ರಜ್ಞನರಾದ ಗೌತಮ್ ಮೈಸಲಗಿ ಮತ್ತು ಎನ್.ಸಿ.ಡಿ ವಿಭಾಗದ ಆಪ್ತ ಸಮಾಲೋಚಕರಾದ ಸುನಿತಾ ಕಂಬಳಿಮಠ, ಶುಶ್ರೂಷಕ ಅಧಿಕಾರಿಗಳಾದ ರಮೇಶ್ ಪಾಟಿಲ್, ಆರೋಗ್ಯ ನೀರಿಕ್ಷಣಾಧಿಕಾರಿಗಳಾದ ವಿಠ್ಠಲ ಬಡಗೆರ ಮತ್ತು ಮಣ್ಣೂರ ಗ್ರಾಮಸ್ಥರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಬಾಯಿ ಆರೋಗ್ಯ ಕುರಿತು, ಹೆಚ್‍ಐವಿ/ ಏಡ್ಸ್ ಟಿಬಿ ರೋಗದ, ಬಿಪಿ, ಶುಗರ್, ಸಾಂಕ್ರಾಮಿಕ ರೋಗಗಳ ಕುರಿತು ಅರಿವು ಮೂಡಿಸುವುದರ ಜೋತೆಗೆ ಸುಮಾರು 77 ಜನರಿಗೆ ಬಿಪಿ, ಶುಗರ್, ಎಚ್ ಐವಿ/ಏಡ್ಸ್, ಸಿಫಿಲಿಸ್ ರಕ್ತ ಪರೀಕ್ಷೆ ಮಾಡಲಾಯಿತು.