ಮೂವರು ಬೈಕ್ ಕಳ್ಳರ ಬಂಧನ:7 ಲಕ್ಷ ಮೌಲ್ಯದ 12 ಬೈಕ್ ವಶ
ಕಲಬುರಗಿ,ಆ.31: ನಗರದ ಅಶೋಕ ನಗರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ
ದ್ವಿಚಕ್ರ ವಾಹನ ಕದಿಯುತ್ತಿದ್ದ ಮೂವರು ಕಳ್ಳರನ್ನು ಪೊಲೀಸರು ಬಂಧಿಸಿ, ಬಂಧಿತರಿಂದ 7 ಲಕ್ಷ ಮೌಲ್ಯದ 12 ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿದೆ.
ಶಿವಶಕ್ತಿ ನಗರದ ನಿವಾಸಿಗಳಾದ ಶಿವರಾಚಯ್ಯ ವೀರಯ್ಯ ಹಿರೇಮಠ( 30 ) ,ಮಲ್ಲಿಕ್ ಅಲಿಯಾಸ್ ಮಲ್ಲಿಕಾರ್ಜುನ ಜೆಟ್ಟೆಪ್ಪಾ ಹೊಲೆನವರ (30), ರಜನಿಕಾಂತ ಜನಪತಿ ಕಲಬುರಗಿ (29 ) ಬಂಧಿತ ಆರೋಪಿಗಳು.
ಉಪಪೆÇಲೀಸ್ ಆಯುಕ್ತರಾದ ಕನಿಕಾ ಸಿಕ್ರಿವಾಲ್, ಪ್ರವೀಣ ಹೆಚ್ ನಾಯಕ್ , ಸಹಾಯಕ ಪೆÇಲೀಸ್ ಆಯುಕ್ತ ಭೂತೇಗೌಡ ಅವರ ಮಾರ್ಗದರ್ಶನದಲ್ಲಿ,
ಅಶೋಕ ನಗರ ಪೆÇಲೀಸ್ ಠಾಣೆ ಪಿಐ ಅರುಣಕುಮಾರ ನೇತೃತ್ವದಲ್ಲಿ ಪಿ ಎಸ್ ಐಗಳಾದ ಶೈಲಜಾ, ಸಲಿಮೋದ್ದಿನ್ ಮತ್ತು ಸಿಬ್ಬಂದಿಯವರಾದ ವೈಜನಾಥ, ಶಿವಲಿಂಗ್, ನೀಲಕಂಠರಾಯ ಪಾಟೀಲ್, ಚಂದ್ರಶೇಖರ ಅವರನ್ನೊಳಗೊಂಡ ತಂಡವು ಕಣ್ಣಿ ಮಾರ್ಕೇಟ್ ಪ್ರದೇಶದಲ್ಲಿ ಬೈಕ್ ಕಳ್ಳರನ್ನು ಬಂಧಿಸಿದ್ದಾರೆ.
ಪ್ರಕರಣದ ಪತ್ತೆ ಕಾರ್ಯದಲ್ಲಿ ಯಶಸ್ವಿಯಾದ ಅಧಿಕಾರಿ ಮತ್ತು ಸಿಬ್ಬಂದಿಯವರನ್ನು ಪೆÇಲೀಸ್ ಆಯುಕ್ತ ಡಾ. ಶರಣಪ್ಪ, ಎಸ್.ಡಿ. ಶ್ಲಾಘಿಸಿದ್ದಾರೆ.