ನಷ್ಟದಲ್ಲಿನ ಸಕ್ಕರೆ ಕಾರ್ಖಾನೆ ಲೀಜ್:ಶಿವಾನಂದ ಪಾಟೀಲ
ವಿಜಯಪುರ, ಆ.31:ನಷ್ಟದಲ್ಲಿರುವ ಮುಧೋಳದ ರನ್ನ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು 30 ವರ್ಷದ ಲೀಸ್ ಗೆ ಹರಾಜು ಮಾಡಲಾಗುತ್ತದೆ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಹೇಳಿದರು.
ಶನಿವಾರ ಸುದ್ದಿಗಾರರ ಮಾತನಾಡಿದ ಅವರು,
ನಷ್ಟದಲ್ಲಿದ್ದ ಸಕ್ಕರೆ ಕಾರ್ಖಾನೆಗಳನ್ನು ಈಗಾಗಲೇ ಲೀಸ್ ನೀಡಲಾಗಿದ್ದು ಲಾಭದಲ್ಲಿವೆ
ಈ ಬಾರಿ ರಾಜ್ಯದ ಎಲ್ಲ ಸಕ್ಕರೆ ಕಾರ್ಖಾನೆಗಳ ಬಾಕಿ ಹಣ ಶೇ. 99 ರಷ್ಟು ಪಾವತಿ ಮಾಡಲಾಗಿದೆ ಎಂದು ತಿಳಿಸಿದರು.
ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಒಡೆತನದ ಸಕ್ಕರೆ ಕಾರ್ಖಾನೆ ಸಮಸ್ಯೆ ವಿಚಾರ ಪತ್ರಕರ್ತರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು,
ಆ ಕುರಿತು ಮಾಲಿನ್ಯ ನಿಯಂತ್ರಣ ಮಂಡಳಿ ನೋಡಿಕೊಳ್ಳುತ್ತದೆ. ಅದಕ್ಕೂ ನನಗೂ ಸಂಬಂಧವಿಲ್ಲ ಎಂದು ಹೇಳಿದರು.
ಸಿಎಂ ಸಿದ್ದರಾಮಯ್ಯ ವಿರುದ್ದ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ ರಾಜ್ಯಪಾಲರ ನಡೆ ಖಂಡನೀಯ. ಇಂದು ರಾಜಭವನ ಚಲೋ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಿತ್ತು. ಆದರೆ ಇಂದು ಡಿಸಿಸಿ ಬ್ಯಾಂಕ್ ಸರ್ವ ಸಾಮಾನ್ಯ ಸಭೆ ಇದೆ.
ಆರ್ ಬಿ ಐ ನಿಯಮಗಳ ಪ್ರಕಾರ ಜಿಬಿ ನಡೆಸಬೇಕಿದೆ
ಹಾಗಾಗಿ ನಾನು ಅನುಮತಿ ಮೇರೆಗೆ ರಾಜಭವನ ಚಲೋದಲ್ಲಿ ಭಾಗಿಯಾಗಿಲ್ಲ ಎಂದು ತಿಳಿಸಿದರು.
ಸಿಎಂ ವಿರುದ್ದ ಪ್ರಾಸಿಕ್ಯೂಶನ್ ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ಸರಿಯಿಲ್ಲ.
ರಾಜಭವನವನ್ನು ಬಿಜೆಪಿ ದುರುಪಯೋಗ ಮಾಡಿಕೊಂಡಿದೆ.
ಸಿಎಂ ಅವರ ಪ್ರಕರಣಕ್ಕೂ ಮುನ್ನ ಸಾಕಷ್ಟು ಇವೆ. ತುರ್ತಾಗಿ ಆ ಪ್ರಕರಣಗಳ ಕುರಿತು ತೀರ್ಮಾನ ಆಗಬೇಕು.ಯಾರು ಮೊದಲು ತಪ್ಪು ಮಾಡಿದ್ದಾರೆಯೋ ಅವರಿಗೆ ಮೊದಲು ಶಿಕ್ಷೆಯಾಗಲಿ ಎಂದರು.
ರಾಜ್ಯಪಾಲರು ಅದೆಲ್ಲ ಬಿಟ್ಟು 2024 ರ ಕೇಸ್ ಕುರಿತು ಅನುಮತಿ ನೀಡಿದ್ದಾರೆ. ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ವಾಗ್ದಾಳಿ ನಡೆಸಿದರು.
ಬಿಜೆಪಿ ಆಪರೇಷನ್ ಕಮಲ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು,
ಬಿಜೆಪಿ ಎಂದೂ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿಲ್ಲ.
ಆಪರೇಷನ್ ಕಮಲ ಹೊಸತೇನಲ್ಲ. ಈಗ ಮತ್ತೆ
ಆಪರೇಷನ್ ಕಮಲ ಮಾಡುವ ಪ್ರಯತ್ನ ನಡೆದಿದೆ ಎಂದು ಹೇಳಿದರು.