ಕಟ್ಟಡ ಕಾರ್ಮಿಕರಿಗೆ ಆಯುರ್ವೇದ ನ್ಯೂಟ್ರಿಷನ್ ಕಿಟ್ ವಿತರಣೆ
ಚಿತ್ತಾಪೂರ:ಆ.31:ಆಲ್ ಇಂಡಿಯಾ ಯುನೈಟ್ ಟ್ರೇಡ್ ಯೂನಿಯನ್ ಸೆಂಟರ್ ಗೆ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ ಹಾಗೂ ಕಾರ್ಮಿಕ ಇಲಾಖೆಯ ಸಂಯುಕ್ತಶ್ರಯದಲ್ಲಿ ಇಂದು ವಾಡಿ ಪಟ್ಟಣದ ಜಾಭಂವಿರ ಕಾಲೋನಿಯ ಸಮುಧಯ ಭವನದಲ್ಲಿ ನೂರಾರು ಕಟ್ಟಡ ಕಾರ್ಮಿಕರಿಗೆ ಆಯುರ್ವೇದ ನ್ಯೂಟ್ರಿಷನ್ ಕಿಟ್ ವಿತರಣೆ ಮಾಡಲಾಯಿತು.
ಇಡಿ ಕುಟುಂಭದ ಆರೋಗ್ಯ ಮತ್ತು ಯೋಗಕ್ಷೇಮವನ್ನು ಉತ್ತಮ ಗೊಳಿಸಲು ನಮ್ಮ ಆಯುರ್ವೇದ ದ ನ್ಯೂಟ್ರಿಷಿನ್ ಕಿಟ್ ನೊಂದಿಗೆ ಆರೋಗ್ಯದ ಮತ್ತು ಪೆÇೀಷಕರ ಜೀವನಕ್ಕೆ ಮೊದಲನೇ ಆದ್ಯತ್ಯೆ ನೀಡಲಾಗಿದೆ. ಆರೋಗ್ಯದ ಪೆÇೀಷಕತೆಯನ್ನು ಒದಗಿಸಲು, ರೋಗ್ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಈ ನ್ಯೂಟ್ರಿಷನ್ ಕಿಟ್ ಸಹಾಯಕವಾಗಿದೆ ಎಂದು ತಾಲೂಕ ಸಮಾಲೋಚಕ ಆನಂದ ರಾವ್ ರವರು ಆರೋಗ್ಯ್ ಕಿಟ್ ವಿತರಿಸಿದರು. ಕಟ್ಟಡ ಕಾರ್ಮಿಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಶರಣು ಹೇರೂರ್, ಕಾರ್ಮಿಕ ಇಲಾಖೆಯ ತಾಲೂಕ ಸಮಾಲೋಚಕ ಬಸವರಾಜ್ ಕಲಶೇಟ್ಟಿ. ವಾಡಿ ಘಟಕದ ಕಾರ್ಯಧರ್ಶಿ ಚಂದ್ರಕಾಂತ್ ಪಗಲಾಪುರ. ಧನರಾಜ್ ಕರಕಳ್ಳಿ. ಅವಿನಾಶ್ ವಡೆಯರ್. ಭೀಮರಾಯ ಕಡಬುರ್. ಅಬ್ರಹಾಂ. ಕಟ್ಟಡ ಕಾರ್ಮಿಕರಾದ ತಿಪಣ್ಣ ವಿಜಯ್ ನಗರ. ಸರೋಜ. ನಿರ್ಮಲ. ಸುವರ್ಣ. ಸುಜಾತ. ಮಲ್ಲಪ್ಪ. ಕವಿತಾ. ಮಲ್ಲಮ್ಮ. ರಾಜಮ್ಮ. ಜ್ವನ್. ಮೀನಾಕ್ಷಿ. ಉಪಸ್ಥಿತರಿದ್ದರು.