ಮಹಾತ್ಮಾ ಗಾಂಧೀಜಿ ಪ್ರತಿಮೆಗೆ ಪುಷ್ಪನಮನ
ಬೀಳಗಿ:ಅ.೩:ತಾಲೂಕಾ ಆಡಳಿತವತಿಯಿಂದ ಹಮ್ಮಿಕೊಂಡ ಮಹಾತ್ಮಾ ಗಾಂಧೀಜಿಯವg Àಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಶಾಸಕ ಜೆ.ಟಿ.ಪಾಟೀಲ ಮಹಾತ್ಮಾಗಾಂಧೀಜೀಯವರ ಕಂಚಿನ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿ ವೃತ್ತದಲ್ಲಿ ಸಸಿ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಗ್ರೇಡ್-೨ ಹಾಗೂ ಪರಭಾರಿ ತಹಶೀಲ್ದಾರ ಆನಂದ ಕೋಲ್ಲಾರ, ತಾಪಂ ಇಒ ಅಭಯಕುಮಾರ ಮೊರಬ, ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ದೇವೀಂದ್ರ ಧನಪಾಲ, ಅಬಕಾರಿ ನೀರಕ್ಷಕ ಅನಿಲ ಹೂಗಾರ, ಬಿಇಓ ಆರ್.ಎಸ್.ಆದಾಪೂರ, ಸಿಪಿಐ ಬಸವರಾಜ ಹಳಬನ್ನವರ, ಬಿಸಿಎಂ ಹಾಗೂ ಸಮಾಜಕಲ್ಯಾಣ, ಸಿಡಿಪಿಓ, ಕೃಷಿ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಅರಣ್ಯ ಅಧಿಕಾರಿಗಳು ಮತ್ತು ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಹಣಮಂತ ಕಾಖಂಡಕಿ, ಸರ್ಕಾರ Àಗ್ಯಾರೇಂಟಿ ಯೋಜನೆ ಜಿಲ್ಲಾಧ್ಯಕ್ಷ ಡಾ, ಸಾಗರ ತೆಕ್ಕೆನ್ನವರ, ತಾಲೂಕಾ ಅಧ್ಯಕ್ಷ ಅಣವೀರಯ್ಯ ಪ್ಯಾಠಿಮಠ, ಪಪಂ ಮಾಜಿ ಅಧ್ಯಕ್ಷ ಅನೀಲ ಗಚ್ಚಿನಮನಿ, ಶಿವಾನಂದ ಮಾದರ, ಸುರೇಂದ್ರ ನಾಯಕ, ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷರು ಯಮನಪ್ಪ ರೋಳ್ಳಿ, ಚಿನ್ನಪ್ಪ ಬಂಡಿವಡ್ಡರ, ಚಿದಾನಂದ ನಂದ್ಯಾಳ ಇದ್ದರು.