ಸೌಹಾರ್ದ ಭಾರತಕ್ಕಾಗಿ ಸೈಕಲ್ ರ್‍ಯಾಲಿ
ಕೋಲಾರ,ಅ,೩-ಸೌಹಾರ್ದ ಭಾರತಕ್ಕಾಗಿ ಸೈಕಲ್ ರ್‍ಯಾಲಿ, ಕೋಲಾರದಿಂದ ದೀಕ್ಷಾ ಭೂಮಿಗೆ (ಮಹಾರಾಷ್ಟ್ರ) ಕೋಲಾರದ ನಚಿಕೇತನ ನಿಲಯದ ಬುದ್ಧ ಮಂದಿರದಿಂದ ಚಾಲನೆಗೊಂಡಿತು.
ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷ ಗೊಲ್ಲಹಳ್ಳಿ ಶಿವಪ್ರಸಾದ್ ಚಾಲನೆ ನೀಡಿದರು. ಸಮಾಜ ಕಲ್ಯಾಣ ಇಲಾಖೆಯ ಕೋಲಾರ ಜಿಲ್ಲಾ ಜಂಟಿ ನಿರ್ದೇಶಕ ಶ್ರೀನಿವಾಸ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ಆರ್.ಗೀತಾ, ಅವಾರ್ಡ್ಸ್ ಸಂಸ್ಥೆಯ ಅಧ್ಯಕ್ಷ ನರಸಾಪುರ ಎಸ್.ನಾರಾಯಣಸ್ವಾಮಿ, ದ.ಸಂ.ಸ ಹಾರೋಹಳ್ಳಿ ರವಿ, ಕಾಂಗ್ರೆಸ್ ಮುಖಂಡ ತೊರದೇವಂಡಹಳ್ಳಿ ನಾಗರಾಜ್, ಚಿನ್ನಾಪುರ ಅಶ್ವಿನ್‌ಕುಮಾರ್ ಇದ್ದರು.
ರ್‍ಯಾಲಿಯ ನೇತೃತ್ವವನ್ನು ಅಂತರರಾಷ್ಟ್ರೀಯ ಕ್ರೀಡಾಪಟು ಬೀರಮಾನಹಳ್ಳಿ ಶ್ರೀನಿವಾಸ್ ವಹಿಸಿದ್ದರು, ಇವರ ಜೊತೆಯಲ್ಲಿ ಹನುಮಂತಪ್ಪ, ಕಾರ್ತೀಕ್, ಬಾಸ್ಕರ್, ಲಕ್ಷ್ಮೀಪ್ರಿಯಾ, ಮಂಜುನಾಥ್ ಬೀರಮಾನಹಳ್ಳಿ ದೀಕ್ಷಾ ಭೂಮಿಗೆ ತೆರಳುತ್ತಿದ್ದಾರೆ.
ರ್‍ಯಾಲಿಯು ಅಕ್ಟೋಬರ್ ೧೨ ರಂದು ನಾಗಪುರದ ದೀಕ್ಷಾ ಭೂಮಿಯಲ್ಲಿ ಸಂಪನ್ನವಾಗಲಿದೆ.