ಶ್ರೀರಾಮ ಸೇನೆಯ ಜಿಲ್ಲಾ ನೂತನ ಪದಾಧಿಕಾರಿಗಳು ಪದಗ್ರಹಣ
ಕೋಲಾರ,ಅ,೩- ಸೊಳ್ಳೆ ಸಾಯಿಸಿದರೂ ಹೋರಾಟ ಮಾಡುವ ಕಾಲದಲ್ಲಿ ಹಿಂದುತ್ವ, ಹಿಂದು ಸಮುದಾಯದ ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡುವ ವಿಚಾರ ಬಂದಾಗ ಪ್ರತಿಭಟಿಸಿಲು ಯಾರು ಮುಂದೆ ಬರುತ್ತಿಲ್ಲ ಎಂದು ಶ್ರೀರಾಮ ಸೇನೆಯ ಬೆಂಗಳೂರು ಪ್ರಧಾನ ಕಾರ್ಯದರ್ಶಿ ಸುಂದ್ರೇಶ್ ನರಗಲ್ ವಿಷಾದ ವ್ಯಕ್ತಪಡಿಸಿದರು.
ಪತ್ರಕರ್ತರ ಭವನದಲ್ಲಿ ಶ್ರೀರಾಮಸೇನೆ ಕರ್ನಾಟಕ ಕೋಲಾರ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿ, ನಾವೆಲ್ಲಾರೂ ಎಚ್ಚೆತ್ತುಕೊಂಡು ಶ್ರೀರಾಮಸೇನೆ ಸಂಘಟನೆಯನ್ನು ಬಲಿಷ್ಟವಾಗಿ ಕಟ್ಟುವ ಮೂಲಕ ಹಿಂದುತ್ವದ ಪರ ಹಿಂದು ರಾಷ್ಟವನ್ನಾಗಿಸಲು ಪಣ ತೊಡಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗಿದೆ ನಮ್ಮ ಹಿಂದು ಹೆಣ್ಣು ಮಕ್ಕಳು ಆಯ್ಕೆ ಮಾಡಿಕೊಂಡವರು ನೋಡಿದರೆ ವಾಂತಿ ಬರುವ ಹಾಗೆ ಇರುತ್ತದೆ ಅಂತವರನ್ನು ನಂಬಿ ಮನೆ ಮಠ ಬಿಟ್ಟು ಅವರ ಜೊತೆ ಹಿಂದು ಸಮುದಾಯದ ಹೆಣ್ಣು ಮಕ್ಕಳು ಒಪ್ಪಿಕೊಳ್ಳುತ್ತಿರುವುದು ಖಂಡನೀಯವಾದದ್ದು ಅವರನ್ನು ರಕ್ಷಿಸಲು ಮುಂದಾಗುವ ನಮ್ಮನ್ನು ನಂಬಲು ಮುಂದಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಬೆಂಗಳೂರು ನಗರ ಅಧ್ಯಕ್ಷ ಭಾಸ್ಕರ್, ಶ್ರೀರಾಮ ಸೇನೆಯ ಜವಾಬ್ದಾರಿ ಹಾಗೂ ಸಂಘಟನೆ ಕುರಿತು ಮಾತನಾಡಿದರು.
ಶ್ರೀ ರಾಮಸೇನೆಯ ನೂತನ ಜಿಲ್ಲಾಧ್ಯಕ್ಷರಾಗಿ ಚಿನ್ನಪ್ಪಿ, ಕೋಲಾರ ತಾಲ್ಲೂಕು ಅಧ್ಯಕ್ಷರಾಗಿ ನಾಗೇಂದ್ರ ಉಪಾಧ್ಯಕ್ಷರಾಗಿ ಹರೀಶ್, ಸಹಕಾರ್ಯದರ್ಶಿ ಶ್ರೀಕಾಂತ್, ಸಂಘಟನಾ ಕಾರ್ಯದರ್ಶಿಯಾಗಿ ಗೌತಮ್ ಚಂದ್ರಶೇಖರ್, ಜಿಲ್ಲಾ ಸಾಮಾಜಿಕ ಜಾಲಾತಾಣ ಪ್ರಮುಖ್ ಹಿಂದು ಆನಂದ್, ತಾಲ್ಲೂಕು ಸಾಮಾಜಿಕ ಜಾಲಾತಾಣ ಪ್ರಮುಖ್ ಶ್ರೀಕಾಂತ್ ಎಚ್, ಸೇರಿದಂತೆ ಅನೇಖರನ್ನು ಹಲವು ವಿಭಾಗಗಳಿಗೆ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀರಾಮ ಸೇನೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ವಿಭಾಗಿಯ ಅಧ್ಯಕ್ಷ ರಮೇಶ್ ರಾಜ್ ಅರಸ್, ಹಿಂದು ಸಂಘಟನೆಯ ಮುಖಂಡ ಅಡಿಕೆ ನಾಗರಾಜ್, ಸೇರಿದಂತೆ ಹಲವು ಹಿಂದು ಸಮುದಾಯದ ಯುವಕರು ಉಪಸ್ಥಿತರಿದ್ದರು.