ರೈತರು ಆರ್ಥಿಕ ಅಭಿವೃದ್ಧಿ ಹೊಂದಲು ವಿಕಸನ ಸಂಸ್ಥೆ ಆಸರೆ
ಕೋಲಾರ,ಅ,೩-ಬಂಗಾರಪೇಟೆ ತಾಲೂಕಿನ ಹಂಚಾಳ ಗೇಟ್‌ನಲ್ಲಿರುವ ಬಂಗಾರನಾಡು ರೈತ ಉತ್ಪಾದಕರ ಕಂಪನಿಯ ೨೦೨೩-೨೪ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಸಂಘದ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ವಿಕಸನ ಸಂಸ್ಥೆಯ ಕೆಂಪಯ್ಯ ಮಾತನಾಡಿ, ಕೋಲಾರ ಜಿಲ್ಲೆಯ ರೈತರು ತುಂಬಾ ಶ್ರಮಜೀವಿಗಳು, ಏನೇ ಕಷ್ಟ ಬಂದರೂ ಹೆದರದೆ ಮುನ್ನುಗ್ಗುವ ಛಲಗಾರರು, ರೈತ ಉತ್ಪಾದಕ ಸಂಸ್ಥೆಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವ ಮೂಲಕ ಕಂಪನಿಯ ಬಲವರ್ಧನೆಗೆ ಮುಂದಾಗಿ ಎಂದರು.
ಅಗ್ರಿಫೆನ್ಸ್ ಗೇಟ್‌ವೇ ಪ್ರೈ.ಲಿನ ಗೀತಾ ಪರಶಿವಮ್ಮ ಮಾತನಾಡಿ, ಎಸ್ಕಾರ್ಟ್ಸ್, ಕುಬೋಟಾ ಆಧುನಿಕ ಕೃಷಿ ಸಂಸ್ಥೆ ಇವರ ವತಿಯಿಂದ ರೈತ ಬಾಂಧವರಿಗೆ ಉಚಿತ ತರಬೇತಿಯನ್ನು ೩ ದಿನಗಳ ಕಾಲ ಹಮ್ಮಿಕೊಳ್ಳಲಾಗುತ್ತಿದೆ ಎಂದು ವಿವರಿಸಿದರು.
ಸಂಸ್ಥೆಯು ಪ್ರತ್ಯೇಕವಾಗಿ ತರಬೇತಿ ಕೇಂದ್ರವಾಗಿದ್ದು, ರೈತರಿಗೆ ಕೃಷಿಯಂತ್ರೀಕರಣ, ಆಧುನಿಕ ಉಪಕರಣಗಳ ಬಳಕೆ ಮತ್ತು ಪ್ರಾತ್ಯಕ್ಷಿತೆ, ಟ್ರಾಕ್ಟರ್ ನಿರ್ವಹಣೆ, ಕೃಷಿ, ತೋಟಗಾರಿಕೆ, ರೇಷ್ಮೆ ಬೆಳೆಗಳ ಸುಧಾರಿತ ಬೇಸಾಯ ಕ್ರಮಗಳ ಬಗ್ಗೆ, ಜೇನುಕೃಷಿ, ಕೈತೋಟ, ತಾರಸಿ ತೋಡದ ನಿರ್ವಹಣೆ ಇತ್ಯಾದಿಗಳ ಬಗ್ಗೆ ತರಬೇತಿ ನೀಡಲಾಗುತ್ತಿದೆ. ತರಗತಿಗಳ ಆಧ್ಯಯನದ ಜೊತೆಗೆ ತಾಕುಗಳ ಪ್ರಾತ್ಯಕ್ಷಿತೆಗಳಿ ಸಹ ಒಳಗೊಂಡಿರುತ್ತದೆ ರೈತರು ಇದರ ಸದುಪಯೋಗಪಡಿಸಿಕೊಳ್ಳಿ ಎಂದರು.
ಸಭೆಯಲ್ಲಿ ಮಾರುಕಟ್ಟೆ ಅಧಿಕಾರಿ ರವೀಂದ್ರ ಚಾವನ್, ಕಂಪನಿಯ ಅಧ್ಯಕ್ಷ ಚನ್ನಪ್ಪ ಪಿ, ನಿರ್ದೇಶಕರುಗಳಾದ ಮುನಿವೆಂಕಟಪ್ಪ, ನಾಗರಾಜು ಎನ್, ಯಶೋಧ ಎನ್, ಲಕ್ಷ್ಮಣ, ವೆಂಕಟರಾಜು, ಸೆಹಗಲ್ ಪೌಂಡೇಶನ್ ಪೀಲ್ಡ್ ಸ್ಪೆಷಲಿಸ್ಟ್ ಗೋಪಾಲಪ್ಪ, ಸಂತೋಷ್‌ಕುಮಾರ್, ಪ್ರಕಾಶ್‌ಬಾಬು ಸೇರಿದಂತೆ ಕಂಪನಿಯ ಷೇರುದಾರರರು ಉಪಸ್ಥಿತರಿದ್ದರು.