ಗಾಂಧಿಜೀವರ ಸ್ವಾತಂತ್ರ್ಯ ಕೊಡುಗೆಯಿಂದ ಭಾರತದಲ್ಲಿ ಶಾಂತಿ ನೆಮ್ಮದಿ ಜೀವನ
ಕೋಲಾರ,ಅ,೩-ರಾಷ್ಟ್ರಪಿತ ಮಹಾತ್ಮಗಾಂಧಿಯವರ ಹೋರಾಟದಿಂದ ಭಾರತಕ್ಕೆ ಬಂದ ಸ್ವಾತಂತ್ರ್ಯದಿಂದಾಗಿ ನಾವಿಂದು ಶಾಂತಿ ನೆಮ್ಮದಿಯ ಬಾಳ್ವೆ ನಡೆಸಲು ಸಾಧ್ಯವಾಗಿದೆ ಎಂಬುವುದನ್ನು ಯಾರು ಮರೆಯುವಂತಿಲ್ಲ. ಅವರು ನೀಡಿದ ಸ್ವಾತಂತ್ರ್ಯದ ಕೊಡುಗೆಯ ಹಿಂದೆ ಗಾಂಧಿಜಿಯವರ ಶಾಂತಿಯುತವಾದ ಆಹಿಂಸತ್ಮಾಕ ಸತ್ಯಾಗ್ರಹದ ಶ್ರಮವನ್ನು ನಾವು ನೆನಪಿಸಿ ಕೊಂಡು ನಮ್ಮ ಮುಂದಿನ ಪೀಳಿಗೆಗೆ ಅರಿವು ಮೂಡಿಸುವಂತಾಬೇಕೆಂದು ಜಿಲ್ಲಾ ಉಸ್ತುವಾರಿ ಹಾಗೂ ನಗರಾಭಿವೃದ್ದಿ ಯೋಜನಾ ಸಚಿವ ಬೈರತಿ ಸುರೇಶ್ ಕರೆನೀಡಿದರು.
ನಗರದ ಗಾಂಧಿವನದಲ್ಲಿನ ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಅವರು ಮಾತನಾಡುತ್ತಾ ಮಹಾತ್ಮಗಾಂಧಿಜೀ ಮಾರ್ಗದರ್ಶನದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ರಚಿಸಿದ ಸಂವಿಧಾನದಿಂದ ಭಾರತವು ವಿಶ್ವದಲ್ಲಿಯೇ ಅತಿ ದೊಡ ಪ್ರಜಾತಂತ್ರ, ಪ್ರಜಾಪ್ರಭುತ್ವದ ದೇಶವಾಗಿ ಹೊರಹೊಮ್ಮಿದೆ. ಸಂವಿಧಾನದಿಂದ ಜಾತ್ಯಾತೀತ ದೇಶದ ವಿಭಿನ್ನ ಸಂಪ್ರಾದಯ ಸಂಸ್ಕೃತಿಗಳ ನಡುವೆ ಏಕತೆ, ಐಕ್ಯತೆ ಹಾಗೂ ಸರ್ವಧರ್ಮಿಯರ ಸಮಾನತೆಯ ಶಾಂತಿಯ ತೋಟವಾಗಿದೆ ಎಂದು ಅಭಿಪ್ರಾಯ ಪಟ್ಟರು.
ಕಾಂಗ್ರೇಸ್‌ನ ಹೃದಯಪೂರ್ವ ಸಮಾರಂಭ ಅಯೋಜಿಸಿದ ಹಿನ್ನಲೆಯಲ್ಲಿ ಕೃತಜ್ಞಾನತೆಯನ್ನು ಸಲ್ಲಿಸಿದ ಸಚಿವರು ಇದೇ ಸಂದರ್ಭದಲ್ಲಿ ಲಾಲ್ ಬಹುದ್ದೂರ್ ಶಾಸ್ತ್ರಿಯವರ ಜನ್ಮದಿನಾಚರಣೆಯು ಒಂದೇ ದಿನ ಅಗಿರುವುದು. ಗಾಂಧಿಯವರ ಜೊತೆಯಲ್ಲಿ ಲಾಲ್ ಬಹುದ್ದೂರ್ ಶಾಸ್ತ್ರಿಯವರು ಸಹ ಹೋರಾಟದಲ್ಲಿ ಕೈ ಜೋಡಿಸಿ ಭಾರತದ ಆಡಳಿತ ನಿರ್ವಹಿಸಿದರು. ಗಾಂಧಿಜೀಯವರನ್ನು ಗೋಡ್ಸೆ ಎಂಬಾತ ಹತ್ಯೆ ಮಾಡಿದಾಗ ಗಾಂಧಿಯ ಬಾಯಲ್ಲಿ ಬಂದ ಕೊನೆಯ ಮಾತು ಹೇ ರಾಮ್ ಎಂಬುವುದಾಗಿತ್ತು ಎಂದು ನೆನಪಿಸಿ ಕೊಂಡರು,
ಇದೇ ಸಂದರ್ಭದಲ್ಲಿ ಸುವರ್ಣ ಸೆಂಟ್ರಲ್ ಶಾಲೆ ಮಕ್ಕಳಿಂದ ಪ್ರಾರ್ಥನೆ, ಸರ್ವಧರ್ಮಿಯ ಗುರುಗಳಿಂದ ಭಗವದ್ವೀತೆ, ಕುರಾನ್, ಬೈಬಲ್ ಪಠಾಣಗಳಾದವು. ಗಾಂಧಿಜಿ ಮತ್ತು ಲಾಲ್ ಬಹುದ್ದೂರ್ ಶಾಸ್ತ್ರಿಯವರ ಭಾವಚಿತ್ರಕ್ಕೆ ಗಣ್ಯರಿಂದ ಪುಷ್ಟ ನಮನ ಸಲ್ಲಿಸಲಾಯಿತು, ಸೇವದಳದಿಂದ ರಾಷ್ಟ್ರಗೀತೆಗಳಾದವು. ಇದೇ ಸಂದರ್ಭಧಲ್ಲಿ ಸಮೀಪದ ಖಾದಿ ಮಾರಾಟ ಮಳಿಗೆಗೆ ಸಚಿವರ ಭೇಟಿ ನೀಡಿದರು,
ಕಾರ್ಯಕ್ರಮದಲ್ಲಿ ಸಂಸದ ಮಲ್ಲೇಶ್ ಬಾಬು. ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಶಾಸಕ ಕೊತ್ತೂರು ಮಂಜುನಾಥ್, ನಗರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಸಂಗೀತಾ ಕೊಡ ಅಧ್ಯಕ್ಷ ಮಹಮ್ಮದ್ ಹನೀಫ್, ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ಲಕ್ಷ್ಮೀನಾರಾಯಣ, ಗ್ರಾರೆಂಟಿ ಅನುಷ್ಠನಾ ಸಮಿತಿ ಅಧ್ಯಕ್ಷ ವೈ ಶಿವಕುಮಾರ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷರಾದ ಸೀಸಂದ್ರ ಗೋಪಾಲ್, ಪ್ರಸಾದ್ ಬಾಬು, ಮುಖಂಡರಾದ ಜಯದೇವ್. ಪ್ರಸನ್ನ ಕುಮಾರ್,ಖಾದ್ರಿಪುರ ಬಾಬು, ಮೈಲಾಂಡಹಳ್ಳಿ ಮುರಳಿ ಮುಂತಾದವರು ಇದ್ದರು,