ಸಿದ್ದರಾಮಯ್ಯ ರಾಜಿನಾಮೆ ನೀಡಲು ಯಾವ ನ್ಯಾಯಾಲಯವೂ ಸೂಚಿಸಿಲ್ಲ- ಬೈರತಿ ಸುರೇಶ್
ಕೋಲಾರ,ಅ,೩-ಸಿದ್ದರಾಮಯ್ಯನವರ ರಾಜಿನಾಮೆ ಕೊಡುವ ಅಗತ್ಯವೇ ಇಲ್ಲ. ರಾಜಿನಾಮೆ ನೀಡಲು ಯಾವ ಕೋರ್ಟ್ ಸಹ ಸೂಚನೆ ನೀಡಿಲ್ಲ. ಈಗಾಗಲೇ ಸಿದ್ದರಾಮಯ್ಯನವರ ಪತ್ನಿ ಪಾರ್ವತಮ್ಮನವರು ತಮ್ಮ ಪತಿಗೆ ನಿವೇಶಗಳಿಂದ ಉಂಟಾಗುತ್ತಿರುವ ಕಿರುಕುಳವನ್ನು ಸಹಿಸಲಾಗದೆ ತಮ್ಮ ಸ್ವಇಚ್ಚೆಯಿಂದ ತಮ್ಮ ಪಾಲಿನ ನ್ಯಾಯಯುತವಾಗಿ ತವರಿನಿಂದ ಬಂದಿದ್ದ ನಿವೇಶಗಳನ್ನು ಮುಡಾ ಅವರಿಗೆ ವಾಪಾಸ್ಸು ಮಾಡಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾದ್ಯಮದವರೊಂದಿಗೆ ಅವರು ಮಾತನಾಡಿ ತಮ್ಮ ಪತಿ ಸಿದ್ದರಾಮಯ್ಯನವರ ಮೇಲೆ ವಿಪಕ್ಷಗಳು ಮಾಡುತ್ತಿರುವ ಸುಳ್ಳು ಆರೋಪಗಳಿಂದ ಬೇಸತ್ತು ನಿವೇಶಗಳನ್ನು ವಾಪಾಸ್ ಮಾಡಿದ್ದಾರೆ. ಮುಡದಲ್ಲಿನ ನಿವೇಶನಗಳಿಗೂ ಸಿದ್ದರಾಮಯ್ಯನವರಿಗೆ ಯಾವೂದೇ ಸಂಬಂಧವಿಲ್ಲ. ಅವರು ಮುಡಾಗೆ ನಿವೇಶನಗಳಿಗೆ ಸಂಬಂಧಿಸಿದಂತೆ ಯಾವೂದೇ ಪತ್ರ ವ್ಯವಹಾರಗಳು ಮಾಡಿಲ್ಲ ಎಂದು ಸ್ವಷ್ಟ ಪಡೆಸಿದರು.
ಈ ಹಿಂದೆಯೇ ನಿವೇಶನಗಳಿಗೆ ಸಂಬಂಧಿಸಿದಂತೆ ತಮಗೆ ಬೇಡಾವೆಂದು ಹೇಳಿದ್ದರು. ನಂತರದಲ್ಲಿ ಈ ಬೆಳವಣಿಗೆಯು ಸಿದ್ದರಾಮಯ್ಯನವರಿಗೆ ಮಾಹಿತಿಯೇ ಇರಲ್ಲಿಲ್ಲ ಎಂದ ಅವರು ನಿವೇಶಗಳನ್ನು ಮುಡಾ ವಾಪಾಸ್ ಪಡೆದು ಕೊಳ್ಳಲು ಕಾನೂನಿನಲ್ಲಿ ಅವಕಾಶವಿದೆ. ಇದು ಮುಡಾಗೆ ಲಾಭ ತರುವ ವಿಚಾರವಾಗಿದೆ ಎಂದರು.
ಈಗಾ ಸಿದ್ದರಾಮಯ್ಯನವರ ಮೇಲಿನ ಅರೋಪಗಳ ವಿರುದ್ದ ಕಾನೂನಿನತ್ಮಾಕವಾಗಿ ಹೋರಾಟ ಮಾಡುತ್ತೇವೆ. ಈ ನಿವೇಶಗಳೇನು ಸಿದ್ದರಾಮಯ್ಯನವರ ಹೆಸರಿನಲ್ಲಿ ಇಲ್ಲ ಅವರ ಪತ್ನಿ ಹೆಸರಿನಲ್ಲಿದೆ. ಇದೆಲ್ಲಾ ನಮ್ಮ ಆಡಳಿತದಲ್ಲಿ ಅಗಿಲ್ಲ. ಇದೆಲ್ಲಾವನ್ನು ನ್ಯಾಯಾಲಯದಲ್ಲಿ ಅಗತ್ಯವಾದ ದಾಖಲೆಗಳನ್ನು ಹೋರಾಟ ಮಾಡುತ್ತೇವೆ ಎಂದ ಅವರು ಬಸವರಾಜ್ ಯತ್ನಳ್ ಅರೋಪಗಳಿಗೆ ಯಾವೂದೇ ಮಾನ್ಯತೆ ಇಲ್ಲ ಎಂದರು.
ನಗರದ ಕಾಂಗ್ರೇಸ್ ಸಂಘಟನಾ ಸಮಾವೇಶದಲ್ಲಿ ಎರಡು ಗುಂಪುಗಳ ಭಿನ್ನಾಭಿಪ್ರಾಯದ ಗಲಾಟೆಗಳು ಗಮನಕ್ಕೆ ಬಂದಿದೆ ಅಂದು ನಾನು ಸಮಾವೇಶದಲ್ಲಿ ಭಾಗವಹಿಸರಲಿಲ್ಲ ಸಣ್ಣ ಪುಟ್ಟ ವಿಚಾರಗಳ ಬಗ್ಗೆ ಭಿನ್ನಪ್ರಾಯ ಸಹಜ ಒಂದು ಕುಟುಂಬದ ವಿಚಾರವಾಗಿದೆ ಹೊರತು ಬೇರೇನೂ ಇಲ್ಲ. ಏನೇ ದೂರುಗಳು ಇದ್ದರೂ ಸಹ ಅದನ್ನು ನಾವು ಬಗೆ ಹರಿಸಿ ಕೊಳ್ಳುತ್ತೇವೆ ಎಂದು ಹೇಳಿದರು.
ನಮ್ಮಲ್ಲಿ ಲೋಕಸಭೆ, ವಿಧಾನಸಭೆಗಳ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಎ.ಐ.ಸಿ.ಸಿ. ಮತ್ತು ಕೆ.ಪಿ.ಸಿ.ಸಿ ನಿರ್ಧಾರಗಳೇ ಅಂತಿಮ ಇದರಲ್ಲಿ ಯಾವೂದೇ ಭಿನ್ನಮತ ಇರುವುದಿಲ್ಲ ಎಂದು ಪ್ರಶ್ನೆಯೊಂದಕ್ಕೆ ಸ್ವಷ್ಟ ಪಡೆಸಿದರು,
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ಶಾಸಕ ಕೊತ್ತೂರು ಮಂಜುನಾಥ್, ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವೈ,ಶಿವಕುಮಾರ್, ಕುಡಾ ಅಧ್ಯಕ್ಷ ಮಹ್ಮದ್ ಹನೀಫ್, ಹಾಲು ಒಕ್ಕೂಟದ ನಿರ್ದೇಶಕ ಷರೀಪ್, ನಗರದ ಸಭೆ ಅಧ್ಯಕ್ಷೆ ಲಕ್ಮೀದೇವಮ್ಮ. ಉಪಾಧ್ಯಕ್ಷ ಸಂಗೀತಾ ಮುಂತಾದವರು ಇದ್ದರು.