ನೂಲಿ ಚಂದಯ್ಯನವರ ಕಾಯಕನಿಷ್ಠೆ ನಮ್ಮೆಲ್ಲರಿಗೆ ಸ್ಫೂರ್ತಿ : ಶಿವಬಸವ ಸ್ವಾಮೀಜಿ.
ಅಥಣಿ :ಆ.31: 12ನೇ ಶತಮಾನದಲ್ಲಿ ಬಸವಾದಿ ಶರಣರು ನೀಡಿದ ಕಾಯಕ ಮಂತ್ರವನ್ನು ಪ್ರತಿಯೊಬ್ಬರೂ ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ಪರಿಶುದ್ಧ ಮನಸ್ಸಿನಿಂದ ಮಾಡಿದ ಕಾಯಕದ ಸ್ವಲ್ಪ ಭಾಗವನ್ನು ಸಮಾಜಮುಖಿ ಮತ್ತು ಧಾರ್ಮಿಕ ಕಾರ್ಯಗಳಿಗೆ ನೀಡುವ ಮೂಲಕ ಧರ್ಮ ಸಂಪಾದನೆಯ ಮಾರ್ಗದಲ್ಲಿ ಸಾಗಬೇಕು ಎಂದು ಗಚ್ಚಿನಮಠದ ಶಿವ ಸ್ವಾಮೀಜಿ ಹೇಳಿದರು.
ಅವರು ಅಥಣಿ ಪಟ್ಟಣದಲ್ಲಿ ಭಜಂತ್ರಿ ಸಮುದಾಯದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಶಿವಶರಣ ನೂಲಿ ಚಂದಯ್ಯ ಜಯಂತಿ ಅಂಗವಾಗಿ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದರು. ನೂಲಿ ಚಂದಯ್ಯ ಕಾಯಕದ ಮೂಲಕವೇ ಆತ್ಮೊ?ನ್ನತಿ ಕಂಡವರು. ಅವರ ಕಾಯಕನಿಷ್ಠೆ ಮತ್ತು ಪ್ರಾಮಾಣಿಕತೆ ಇಂದಿನ ಯುವ ಜನಾಂಗಕ್ಕೆ ಸ್ಪೂರ್ತಿ ಎಂದು ಹೇಳಿದರು.
ಭಜಂತ್ರಿ ಸಮುದಾಯದ ಯುವ ಮುಖಂಡ ಅನಿಲ ಭಜಂತ್ರಿ ಮಾತನಾಡಿ ಭಜಂತ್ರಿ ಸಮುದಾಯದವರು ಅನೇಕ ರೀತಿಯ ಶ್ರಮದಿಂದ ಜೀವನ ಸಾಗಿಸುವುದನ್ನು ನೋಡಿದ್ದೇವೆ. ಸಮುದಾಯವು ಸಂಗೀತ ವಾದ್ಯಗಳನ್ನು ನುಡಿಸುವುದಕ್ಕೆ ಸೀಮಿತವಾಗದೆ ಕೃಷಿ ಸೇರಿದಂತೆ ಅನೇಕ ಕಠಿಣ ಕೆಲಸಗಳನ್ನು ಮಾಡುತ್ತದೆ. ಶಿವಶರಣ ನೂಲಿ ಚಂದಯ್ಯನವರ ಸಮರ್ಪಣೆಯ ಭವ್ಯ ಪರಂಪರೆಯಿಂದ ಈ ಸಮಾಜಕ್ಕೆ ಫಲ ಸಿಕ್ಕಿದೆ. ಸಮಾಜ ಬಾಂಧವರು ತಮ್ಮ ಮಕ್ಕಳಿಗೆ ಶಿಕ್ಷಣ ಮತ್ತು ಸಂಸ್ಕಾರವನ್ನು ಕಲಿಸುವ ಮೂಲಕ ಬಸವಾದಿ ಶರಣರು ಹಾಕಿಕೊಟ್ಟಿರುವ ಕಾಯಕ ಮಂತ್ರವನ್ನು ರೂಡಿಸಿಕೊಂಡು ಆದರ್ಶ ಬದುಕು ನಡೆಸಬೇಕೆಂದು ಕರೆ ನೀಡಿದರು.
ಈ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಬಸವರಾಜ ರಾಮಣ್ಣಾ ಭಂಜತ್ರಿ ಮಾತನಾಡಿದರು.
ಈ ವೇಳೆ ಶಿದ್ರಾಯ ಭಜಂತ್ರಿ, ಶಶಿಕಾಂತ ಭಜಂತ್ರಿ, ಗೋಪಾಲ ಭಜಂತ್ರಿ, ಶಿವಶಂಕರ ಭಜಂತ್ರಿ, ನಾಗೇಶ, ಮಾರುತಿ ಮಾನೆ, ಪರಸರಾಮ, ವಂಸತ, ರಾಹುಲ, ಸಂಜು, ಕುಮಾರ, ವಿನೋದ, ನಾಗರಾಜ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.