ಆಧ್ಯಾತ್ಮಿಕ ಆರೋಗ್ಯ ಮನುಕುಲಕ್ಕೆ ನೆಮ್ಮದಿ
ಬೀದರ:ಆ.31:ವ್ಯಕ್ತಿ, ಕುಟುಂಬ, ಓಣಿ, ಗ್ರಾಮ, ತಾಲೂಕಾ, ಜಿಲ್ಲೆ, ನಾಡು, ದೇಶಅಭಿವೃದ್ಧಿ ಯಾಗಬೇಕಾದರೆ ಅದಕ್ಕೆ ತನ್ನದೇಯಾದ ಕೆಲವು ಅಳತೆಗೋಲುಗಳಿವೆ, ನಮ್ಮ ಆರ್ಥಿಕ ಸಂಕಷ್ಟಕ್ಕಿಂತ ಆರೋಗ್ಯ ಅತಿ ಮುಖ್ಯ. ಆರೋಗ್ಯ ಸಂಪದ್ಭರಿತವಾಗಿದ್ದರೆ, ಸಮ ಚಿತ್ತದಿಂದ ವ್ಯವಹರಿಸಿ ರಾಷ್ಟ್ರ ನಿರ್ಮಾಣದಲ್ಲಿ ನಾವು ತೊಡಗಿಸಿಕೊಳ್ಳಬಹುದೆಂದು ಚಿಂತಕ ಪೆÇ್ರ. ಸಿದ್ದು ಯಾಪಲಪರವಿ ನುಡಿದರು.
ದೈಹಿಕ ಆರೋಗ್ಯ, ಮಾನಸಿಕ ಆರೋಗ್ಯ, ಭಾವನಾತ್ಮಕ ಆರೋಗ್ಯ ಹಾಗೂ ಆಧ್ಯಾತ್ಮಿಕ ಆರೋಗ್ಯ ಜೀವನಕ್ಕೆ ಬಹು ಮುಖ್ಯವಾಗಿ ಮೌಲ್ಯ ಕೊಡಬಲ್ಲವುಗಳಾಗಿವೆ. ದೈಹಿಕವಾಗಿ ವ್ಯಕ್ತಿ ಏರಿಳಿತ ಕಂಡರೆ ವಿಚಲಿತ ಸಹಜ. ನಮ್ಮ ಆಹಾರ ವ್ಯವಸ್ಥೆಯಲ್ಲಿ ಸ್ವಲ್ಪ ಸುಧಾರಣೆ ಮಾಡಿಕೊಂಡರೆ ಸುಧಾರಣೆ ಸಾಧ್ಯ ಮಾನಸಿಕ ಆರೋಗ್ಯ ಬೇಕಾದ ವಿಷಯಗಳ ಬಗ್ಗೆ ಚಿಂತನೆ ಮಾಡಿ ಅನಧಿಕೃತ ವಿಷಯಕ್ಕೆ ಸಮಯ ಹಾಳು ಮಾಡಿಕೊಂಡರೆ ಮಾನಸಿಕ ಖಿನ್ನತೆ ಸಾಧ್ಯ. ಇನ್ನು ಅನೇಕ ವಿಷಯಗಳು ಒಂದೇ ಕ್ಷಣಕ್ಕೆ ಪರಿಹಾರ ಸಿಗದೆ ಇದ್ದಾಗ ಭಾವೋದ್ವೇಕವಾಗಿ ವ್ಯವಸ್ಥೆ ಹಾಳಾಗುತ್ತದೆ. ಆಧ್ಯಾತ್ಮಿಕ ಆರೋಗ್ಯದಿಂದ ನಮ್ಮೆಲ್ಲ ಭಾವನೆಗಳಿಗೆ ನೆಮ್ಮದಿ ಕೊಡುವುದಾಗಿದೆ. ಆದರೆ ಧಾರ್ಮಿಕ ಕಟ್ಟಳೆ ನಿಯಮಗಳು ಅವಲೋಕಿಸಿ ಮುನ್ನಡೆಯಬೇಕು. ನಮಗೆ ಧಾರ್ಮಿಕ ಭಾವನೆಗಿಂತ ಆಧ್ಯಾತ್ಮಿಕ ವಿಚಾರ ಪ್ರಮುಖವಾಗಿ ಬೇಕು.
ಉಪದೇಶ ಇಲ್ಲಿ ಕೊಡುವವರು ಸಾಕಷ್ಟು ಜನ ಸಿಗುತ್ತಾರೆ. ಅದರ ಅನುಕರುಣೆ ಶೂನ್ಯ. ಇಂಥ ಪರಿಸ್ಥಿತಿಯಲ್ಲಿ ಜಾಗರೂಕತೆಯಿಂದ ಮುನ್ನಡೆಯುವುದೇ ಸೂಕ್ತ. ಅರಿವಿಲ್ಲದ ಶಿಕ್ಷಣ ಹಂಗಿಲ್ಲದ ಬದುಕು ಕೈಗೆಟಕದ ಆಚಾರ ಬದುಕು ರೂಪಿಸಲು ತೊಂದರೆ. ಇದಕ್ಕೆ ಅನೇಕ ಪದವಿ ಬೇಕಿಲ್ಲ, ಅರಿವಿರುವ ಗುಣಾತ್ಮಕ ಶಿಕ್ಷಣದ ಕೊರತೆ ನಮ್ಮ ಆರ್ಥಿಕತೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದಾಯ ಅನುಸಾರ ಕೆಲಸ ಮಾಡಲು ಒಳ್ಳೆ ಆರೋಗ್ಯ ಅನಿವಾರ್ಯ. ಹನ್ನೆರಡನೇ ಶತಮಾನದ ಬಸವಾದಿ ಶರಣರು ನಮಗೆ ಎಲ್ಲವನ್ನು ಕೊಟ್ಟಿದ್ದಾರೆ, ಅದರ ಅನುಭಾವ ಇಂದು ಬೇಕಾಗಿದೆ.
ಉಣಲು ಕಲಿಸಿದಾತ ಬಸವಣ್ಣ, ಉಡಲು ಕಲಿಸಿದಾತ ಬಸವಣ್ಣ, ಇನ್ನ ಮುಂದೆ ಹೋಗಿ ನಮ್ಮೆಲ್ಲರ ಆಹಾರ ಕಿರಿದು ಮಾಡಿಕೊಂಡರೆ ಏನೆಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಬಹುದಾಗಿದೆ. ಶರಣರ ಆಹಾರ ವಿಹಾರದ ಪದ್ಧತಿ ನಾವಿಂದು ಅಳವಡಿಸಿ ಕೊಳ್ಳಬೇಕು, ಪ್ರಸಾದ ಕೆಡಿಸಲಾಗದು. ಅನೇಕ ಸಭೆ ಸಮಾರಂಭಗಳಲ್ಲಿ ಪ್ರಸಾದ ಹಾಳಾಗುತ್ತಿರುವುದು ಕಣ್ಣಿದ್ದು ಕುರುಡರಾಗಿದ್ದೇವೆ. ಇದು ಅನೇಕ ಪರಿಣಾಮ ಬೀರುತ್ತದೆ.
ಆಹಾರದಿಂದ ಅನಾಹುತ ಜಾಸ್ತಿ, ಇದು ಬದುಕಿಗೆ ಸಂಕಷ್ಟ ತರಬಲ್ಲುದಾಗಿದೆ. ಒಂದು ದೇಶದ ಸಮೀಕ್ಷೆ ಅನುಗುಣವಾಗಿ ಯುವಕರು ನಪುಂಸಕತ್ವಕ್ಕೆ ತುತ್ತಾಗುತ್ತಿರುವುದು ಅತ್ಯಂತ ಖೇದಕರ ಸಂಗತಿಯಾಗಿದೆ. ನಮ್ಮ ಬದುಕಿನ ಆಹಾರ ವ್ಯವಸ್ಥೆಯಿಂದ ತಾಮಸ, ಆಯಾಸ, ನಿರಾಸೆ, ಕ್ರೌರ್ಯ ಮನದಲ್ಲಿ ಪ್ರವೇಶಿಸುತ್ತದೆ. ಬದುಕಿನ ಸಂತೃಪ್ತಿಗಾಗಿ ಸುಖಕರ ನಿದ್ರೆ, ಧನಾತ್ಮಕ ವಿಚಾರ ಮಿತವಾದ ಆಹಾರ ಅಳವಡಿಸಿಕೊಳ್ಳಲು ಸಾಂಸ್ಕøತಿಕ ಚಿಂತಕರಾದ ಪೆÇ್ರ. ಸಿದ್ದು ಯಾಪಲಪರವಿ ತಮ್ಮ ಹದಿನಾರನೇ ಜೀವನ ದರ್ಶನ ಪ್ರವಚನ ಮಾಲಿಕೆಯಲ್ಲಿ ವಿದ್ಯಾನಗರದ ಬಸವ ಕೇಂದ್ರದಲ್ಲಿ
ತಮ್ಮ ಅಮೂಲ್ಯವಾದ ವಿಚಾರ ಹಂಚಿಕೊಂಡರು.