ಅಣ್ಣಾಭಾವು ಸಾಠೆ ಅವರ 104 ನೆ ಜಯಂತಿ
ಭಾಲ್ಕಿ:ಆ.31: ಮಹಾರಾಷ್ಟ್ರದ ಪುಟ್ಟ ಹಳ್ಳಿಯಲ್ಲಿ ಜನಿಸಿದ ಅಣ್ಣಾಭಾವು ಸಾಠೆÉ ಅಂದಿನ ಅಸಮಾನತೆ ಜಾತಿ ವ್ಯವಸ್ಥೆ ಸಂದರ್ಭದಲ್ಲಿ ಕೇವಲ 4 ವರ್ಷ ಶಾಲೆ ಕಲಿತು 100 ಕ್ಕೂ ಅಧಿಕ ಕೃತಿಗಳನ್ನು ರಚಿಸಿದ್ದರು ಎಂದು ಬೀರಿ (ಬಿ) ಗ್ರಾಮದಲ್ಲಿ ಅಣ್ಣಾಭಾವು ಸಾಠೆ ಅವರ 104 ನೆ ಜಯಂತಿ ಕಾರ್ಯಕ್ರಮವನ್ನು ಮಾದಿಗ ಸಮಾಜದ ಮುಖಂಡರಾದ ಶಾಮಣ್ಣ ಬಂಬುಳಗಿ ರವರು ಉದ್ಘಾಟಿಸಿ ಮಾತನಾಡಿದರು.
ಮಹಾರಾಷ್ಟ್ರದಲ್ಲಿ ಸಾಠೆ ಅವರ ಹೆಸರಿನಲ್ಲಿ ಅಭಿವೃದ್ಧಿ ನಿಗಮ ಹಾಗೂ ಅಧ್ಯಯನ ಪೀಠ ಸ್ಥಾಪಿಸಲಾಗಿದೆ ಎಂದು ಬೀದರ ಜಿಲ್ಲಾ ಕಾಂಗ್ರೆಸ್ ಎಸ್.ಸಿ.ಘಟಕದ ಉಪಾಧ್ಯಕ್ಷರಾದ ಸಂಜೀವಕುಮಾರ ಲಂಜವಾಡೆರವರು ಹೇಳಿದರು.
ವಿಶೇಷ ಉಪನ್ಯಾಸಕರಾಗಿ ಆಗಮಿಸಿದ ಬೀದರ ಅಕ್ಕಮಹಾದೇವಿ ಕಾಲೇಜಿನ ಉಪನ್ಯಾಸಕರಾದ ಶಿವಶರಣಪ್ಪ ಹುಗ್ಗಿಪಾಟೀಲರವರು ಮಾತನಾಡಿ ದಲಿತರು ಮತ್ತು ಕಾರ್ಮಿಕರ ಜೀವನ ಅನುಭವಗಳನ್ನು ವೃದ್ಧಿಸಲು ಸಾಠೆ ತಮ್ಮ ಕಥೆಗಳನ್ನು ಬಳಸಿದರು. 1958 ರಲ್ಲಿ ಮುಂಬೈಯಲ್ಲಿ ತಾವು ಸ್ಥಾಪಿಸಿದ ಮೊದಲ ದಲಿತ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಭಾಷಣದಲ್ಲಿ ಭೂಮಿಯು ಹಾವಿನ ತಲೆಯ ಮೇಲೆ ಅಲ್ಲಾ ದಲಿತ ಹಾಗೂ ಕಾರ್ಮಿಕ ವರ್ಗದವರ ತಲೆಯ ಮೇಲೆ ಸಮತೋಲಿತವಾಗಿದೆ ಎಂದು ಒತ್ತಿ ಒತ್ತಿ ಹೇಳಿದರು.
ಸ್ವಾತಂತ್ರ್ಯದ ಬಳಿಕ ಮರಾಠಿ ಭಾಷಿಕರು ಹೆಚ್ಚಿರುವ ಪ್ರದೇಶಗಳನ್ನು ಸೇರಿಸಿ ಮಹಾರಾಷ್ಟ್ರ ರಾಜ್ಯ ಉದಯವಾಗಲು ಸಾಠೆ ಅವರ ಪಾತ್ರ ಮುಖ್ಯ ಇದೆ ಎಂದು ಮಾದರ ಚನ್ನಯ್ಯ ಹೋರಾಟ ಸಮಿತಿ ರಾಜ್ಯಾಧ್ಯಕ್ಷರಾದ ರಮೆಶ ಕಟ್ಟಿತೂಗಾಂವ ಹೇಳಿದರು.
ಕಾರ್ಯಕ್ರಮದಲ್ಲಿ ಬೀರಿ(ಬಿ) ಗ್ರಾಮ ಪಂಚಾಯತಿಯ ಉಪಾಧ್ಯಕ್ಷರಾದ ಮೇಘಾ ಮಾಧವರಾವ್ ಹಾಗೂ ಶ್ರೀಮಂತ ಸೂರ್ಯವಂಶಿ, ಪುಟ್ಟರಾಜ ನೇಳಗೆ, ಸುಧಾಕರ ಕಿಸಕಿಂದಾ, ಎಂ.ಪಿ.ರಾಜಕುಮಾರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಆಯೋಜಕರಾದ ದಯಾಸಾಗರ, ಪ್ರವೀಣ, ಸ್ಟಿವನ್, ವಿಕಾಸ, ವಿಶಾಲ, ದಯಾಸಾಗರ ಶಿವಾಜಿ, ಪೌಲ್ರಾಜ, ಪಶುಪತಿ, ಜೀವನ, ಈಶ್ವರ, ಜಾನ್ಸನ್, ಚಂದ್ರಕಾಂತ, ಕಾಶಿನಾಥ, ಧೊಂಡಿರಾಮ್, ಪ್ರಭು ಸಿಂಘೆ, ಪ್ರಭು ಹಲಗೆ ಮುಂತಾದವರು ಇದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕರಾದ ಹಣಮಂತ ಕಾರಾಮುಂಗೆ ಸ್ವಾಗತ ರಾಬಿನ್ ಮಾಳಗೆ ವಂದನಾರ್ಪಣೆಯನ್ನು ಪ್ರಜ್ವಲ್ ಹಲಗೆ ನಡೆಸಿಕೊಟ್ಟರು.