ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಗೆ ಡಾ.ಅಂಬಾರಾಯ ಅಷ್ಠಗಿ ಯವರಿಂದ ಗೌರವ ಸನ್ಮಾನ
ಕಲಬುರಗಿ:ಆ.31:ಕಲಬುರಗಿ ನಗರಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿಗಳು ಹಾಗೂ ಬೆಳಗಾವಿ ಲೋಕಸಭಾ ಸದಸ್ಯರಾದ ಜಗದೀಶ್ ಶೆಟ್ಟರ್ ಅವರನ್ನು ಕಲಬುರಗಿ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷರಾದ
ಡಾ. ಅಂಬಾರಾಯ ಅಷ್ಠಗಿ ಯವರು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕಲಬುರಗಿ ಬಿಜೆಪಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷರಾದ ಶಿವರಾಜ್ ಪಾಟೀಲ್ ರದ್ದೇವಾಡಗಿ, ವಿಧಾನ ಪರಿಷತ್ ಮಾಜಿ ಸದಸ್ಯ ಅಮರನಾಥ ಪಾಟೀಲ್ ಮಹಾಗಾಂವ್, ಬಿಜೆಪಿ ಮುಖಂಡರಾದ
ಪೆÇ್ರ ಯಶವಂತರಾಯ ಅಷ್ಠಗಿ, ಪ್ರೀತಂ ಪಾಟೀಲ್, ಗೋಪಾಲ್ ಕೃಷ್ಣ ಕುಲಕರ್ಣಿ, ಶಿವ ಅಷ್ಠಗಿ ಶರಣಬಸಪ್ಪ ವಾಲಿ,ರಾಜು ಜೈನ,ಸೇರಿದಂತೆ ಅನೇಕರು ಉಪಸ್ಥಿತರಿದ್ದರು.