ರೋಟರಿಯಿಂದ ರಸ್ತೆ ವಿಭಜಕ ಮಧ್ಯೆ ಸಸಿ ನೆಡುವಿಕೆ
ಬೀದರ್: ಆ.31:ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯು ಇಲ್ಲಿಯ ಮನ್ನಳ್ಳಿ ರಸ್ತೆಯಲ್ಲಿನ ಕುಂಬಾರವಾಡ ಕಮಾನ್ ಸಮೀಪದಿಂದ ಭವಾನಿ ಮಂದಿರದ ವರೆಗೆ 220 ಸಸಿಗಳನ್ನು ನೆಟ್ಟು ಗಮನ ಸೆಳೆದಿದೆ.
ಕ್ಲಬ್ ಪದಾಧಿಕಾರಿಗಳು ವಿಭಜಕ ಮಧ್ಯೆ ಈಚೆಗೆ ಮೂರು ಅಡಿ ಆಳದ ತಗ್ಗು ತೋಡಿಸಿ ಸಿಲ್ವರ್ ಓಕ್ ಸಸಿಗಳನ್ನು ನೆಟ್ಟರು.
ನಗರ ಸುಂದರೀಕರಣ ಹಾಗೂ ಪರಿಸರ ಸಂರಕ್ಷಣೆ ಭಾಗವಾಗಿ ಕ್ಲಬ್‍ನಿಂದ ಸಸಿಗಳನ್ನು ನೆಡಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಶಿವಕುಮಾರ ಪಾಖಾಲ್ ತಿಳಿಸಿದರು.
ಹನಿ ನೀರಾವರಿ ಪದ್ಧತಿ ಮೂಲಕ ಸಸಿಗಳಿಗೆ ನೀರುಣಿಸಲು ನಗರಸಭೆ ಸಹಕಾರದೊಂದಿಗೆ ವಿಭಜಕ ಮಧ್ಯೆ ಪೈಪ್‍ಲೈನ್ ಅಳವಡಿಸಲಾಗುತ್ತಿದೆ ಎಂದು ಹೇಳಿದರು.
ಕ್ಲಬ್ ಸಸಿಗಳ ಸಂಪೂರ್ಣ ಪೆÇೀಷಣೆ ಮಾಡಲಿದೆ. ಮುಂದಿನ ದಿನಗಳಲ್ಲಿ ವಿಭಜಕ ಮಧ್ಯೆ ಹೂವಿನ ಸಸಿ ನೆಡುವುದು ಸೇರಿ ವಿವಿಧ ಕಾರ್ಯಗಳನ್ನು ಕೈಗೊಳ್ಳುವ ಉದ್ದೇಶ ಇದೆ ಎಂದು ತಿಳಿಸಿದರು.
ಪರಿಸರ ಸಂರಕ್ಷಿಸದಿದ್ದರೆ ಮಾನವನಿಗೆ ಉಳಿಗಾಲ ಇಲ್ಲ. ಹೀಗಾಗಿ ಪ್ರತಿಯೊಬ್ಬರೂ ಸಸಿ ನೆಟ್ಟು ಬೆಳೆಸಲು ಮುಂದಾಗಬೇಕು ಎಂದು ಹೇಳಿದರು.
ಅಂತರರಾಷ್ಟ್ರೀಯ ರೋಟರಿ ಜಿಲ್ಲೆ 3160 ಗವರ್ನರ್ ಡಾ. ಸಾಧು ಗೋಪಾಲಕೃಷ್ಣ, ನಿಕಟಪೂರ್ವ ಗವರ್ನರ್ ಪ್ರಭು, ಪ್ರಧಾನ ಕಾರ್ಯದರ್ಶಿ ಝಾಕೀರ್ ಅಹಮ್ಮದ್, ಕಲ್ಯಾಣ ಝೋನ್ ಸಹಾಯಕ ಗವರ್ನರ್ ಸೂರ್ಯಕಾಂತ ರಾಮಶೆಟ್ಟಿ, ಸಾಮಾಜಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಎ.ಬಿ. ಪಾಟೀಲ, ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ಕಾರ್ಯದರ್ಶಿ ಪ್ರಭು ತಟ್ಟಪಟ್ಟಿ, ರೋಟೆರಿಯನಗಳಾದ ಡಾ. ಜಯಸಿಂಹ, ಡಾ. ರಘು ಕೃಷ್ಣಮೂರ್ತಿ, ಶಿವಕುಮಾರ ಪಾಟೀಲ, ಕಾಮಶೆಟ್ಟಿ ಚಿಕ್ಕಬಸೆ, ಸತೀಶಕುಮಾರ ಸ್ವಾಮಿ, ನಿತಿನ್ ಕರ್ಪೂರ, ಸುಮೀತ್ ಸಿಂದೋಲ್, ಎಂಜಿನಿಯರ್ ಸುಮೀತ್ ಪುಣ್ಯಶೆಟ್ಟಿ, ಸಾಹಿತಿ ರಮೇಶ ಮಠಪತಿ, ಜೈ ಹನುಮಾನ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ರಮೇಶ ಇಟಗಿಕರ್, ಉಪಾಧ್ಯಕ್ಷ ಎಂ.ಜಿ. ದೇಶಪಾಂಡೆ, ಕಾರ್ಯದರ್ಶಿ ಬಾಬುರಾವ್ ಗೊಂಡ, ಖಜಾಂಚಿ ಆರ್.ಎಸ್. ಬಿರಾದಾರ ಇದ್ದರು.