ಮನುಷ್ಯನಿಗೆ ನಗು ಇರಬೇಕು ಸಾವು ಸಹಿತ ತಪ್ಪುತ್ತೆ:ಮುನಿಂದ್ರ ಶಿವಾಚಾರ್ಯ
ವಾಡಿ:ಆ.31: ಸಮೀಪದ ಹಲಕರ್ಟಿ ಶ್ರೀ ಕಟ್ಟಿಮನಿ ಹಿರೇಮಠ್ ಮಠದಲ್ಲಿ ಶ್ರಾವಣ ಮಾಸದ ಇಷ್ಟ ಲಿಂಗ್ ಪೂಜೆ ಹಾಗು ಶ್ರೀ ಮುನಿಂದ್ರ ಶಿವಾಚಾರ್ಯ ಪಾದ ಪೂಜೆ ಭಕ್ತ ಸಮೂಹ ದಿಂದ ನಡೆಯಿ ತು ಪಾದ ಪೂಜೆ ಉದ್ದೇಸಿ ಮಾತನಾಡಿದ ಶ್ರೀಗಳು ಮನುಷ್ಯ ಜೀವನದಲಿ ನಗು ಇರಬೇಕು ನಗು ಸುಖಿ ಸಂಸಾರ ಯಾವುದೆ ಸಮಸ್ಯ ಇದ್ದರು ನಗುಮುಖ ಇದ್ದರೆ ಸಮಸ್ಯೆ ದೂರ ವಾಗುತ್ತದೆ ಮನುಷ್ಯ ಎದ್ದ ತಕ್ಷಣ ನಗು ಬೇಕು ಮಲಗುವ ಮೊದಲು ನಗು ಬೇಕು ಸಾವು ಬಂದರು ಹೇಳ್ಳೂತ್ತೆ ನಾನು ತಪ್ಪು ವಿಳ್ಳಾಸಕ್ಕೆ ಬಂದಿರ ಬೇಕು ಅಂತ ತಪ್ಪಿಸುತ್ತದೆ ಅದಕ್ಕೆ ಮಠ ಮಂದಿರದಲ್ಲಿ ನಗು ಸಿಗುತ್ತೆ ನೆಮ್ಮದಿ ಸುಖ ಶಾಂತಿ ಸಿಗುತ್ತೆ ಅದಕ್ಕೆ ವರ್ಷಕ್ಕೆ ಶ್ರಾವಣ ಮಾಸದಲ್ಲಿ ಪುರಾಣ ಪ್ರವಚನ ಇರುವುದು ಇದೆ ಉದ್ದೇಶ ಪ್ರವಚನ ಗಾರರು ನಗು ಸುವ ಹೆಚ್ಚು ಮಾಡುತ್ತಾರೆ ಕಾರಣ ಒಂದು ವರ್ಷದ ಸಂಕಟ ಒಂದೆ ತಿಂಗಳ್ಳಿ ಹೋಗುತ್ತೆ ನಗು ಹಣ್ಣದಿಂದ ಬರುವುದ್ದಿಲ್ಲ ಎಂದು ಶ್ರೀ ಗಳು ಹೇಳ್ಳಿದರು
ಶ್ರೀ ಕಟ್ಟಿಮನಿ ಸಂಸ್ಥಾನ ಹಿರೇಮಠದಲ್ಲಿ ಪ್ರತಿ ವರ್ಷದ ಪದ್ಧತಿಯಂತೆ ಈ ವರ್ಷವೂ ಕೂಡ ಅನೇಕ ಕಾರ್ಯಕ್ರಮದಲ್ಲಿ ಒಂದಾದ ಶ್ರಾವಣ ಮಾಸದಲ್ಲಿ ಲೋಕಕಲ್ಯಾಣಕ್ಕಾಗಿ ಇಷ್ಟಲಿಂಗ ಪೂಜಾನುಷ್ಠಾನ ಸಹಿತ ಮಹಾಪಾದ ಪೂಜೆ ಕಾರ್ಯಕ್ರಮ ಜರಗಿತು ಶ್ರಾವಣ ಮಾಸದಲ್ಲಿ ಪ್ರತಿ ದಿನ ಸಂಜೆ 06=00 ಗಂಟೆಯಿಂದ 08=00 ಗಂಟೆಯವರೆಗೆ*
ಪರಮ ಪೂಜ್ಯ ಶ್ರೀ ಷ.ಬ್ರ ಅಭಿನವ ಮುನೀಂದ್ರ ಶಿವಾಚಾರ್ಯ ಮಹಾಸ್ವಾಮಿಗಳವರ ವೈಭವದ ಇಷ್ಟಲಿಂಗ ಪೂಜಾನುಷ್ಠಾನ ಹಾಗೂ ಮಹಾಪಾದಕ್ಕೆ 21 ವಿವಿಧ ಬಗೆಯ ಜಲಗಳಿಂದ ರುದ್ರಾಭಿಷೇಕ ಪೂಜೆ ಮತ್ತು ಬಿಲ್ವಪುಷ್ಪಗಳಿಂದ ವಿಶೇಷ ಅಲಂಕಾರ ನಂತರ ಅನೇಕ ವಿಧವಾದ ಆರತಿಗಳಿಂದ ಮಹಾಮಂಗಳಾರತಿ ಪೂಜೆ ಕಾರ್ಯಕ್ರಮ ಅತೀ ವಿಜೃಂಭಣೆಯಿಂದ ಜರಗಿತು.
ಪೂಜೆ ಮುಗಿದ ನಂತರ ಲಿಂ ಸದ್ಗುರು ಶ್ರೀ ಮುನೀಂದ್ರ ಮಹಾಶಿವಯೋಗಿಗಳವರ ಕರ್ತೃ ಗದ್ದುಗೆಗೆ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಆಗಮಿಸಿದ ಸದ್ಭಕ್ತರಿಗೆ ದಾಸೋಹ ಸೇವೆಯಲ್ಲಿ ಭಾಗವಹಿಸುವರು.
ಪ್ರತಿದಿನ ಶ್ರೀ ವೀರಭದ್ರೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ ಶ್ರಾವಣ ಮಾಸದ ಪ್ರಯುಕ್ತ ಆಯೋಜಿಸಿದ ಕನ್ನಡದ ಕಭೀರ ಶ್ರೀ ಸಂತ ಶಿಶುನಾಳ ಶರೀಫ ಮಹಾಶಿವಯೋಗಿಗಳ ಮಹಾಪುರಾಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದಂತಹ ಭಕ್ತರಿಗೆ ಶುಭಾರ್ಶಿವಚನ ನೀಡುವರು.
ಕಾರ್ಯಕ್ರಮದಲ್ಲಿ
ಶ್ರೀ ಕರಿಗೌಡ್ರು ವಕೀಲರು ಬಬಲಾದಿ ಶರಣಗೌಡ ಬಬಲಾದಿ ಶರಣು ಕಲಗುರ್ತಿ ಚಂದ್ರಕಾಂತ ಸಾಹು ಮೇಲಿನಮನಿ ಬನ್ನಪ್ಪ ಸಾಹು ಮಲ್ಲು ಪೂಜಾರಿ ಪೂಜಾರಿ ಮೊಹಮ್ಮದ್ ಚಿತ್ತಾವಲಿ ರಾಚು ಶಾಸ್ತ್ರಿ ಮಲ್ಲಿಕಾರ್ಜುನ ಹಣ್ಣಕೇರಿ ಭಾಗವಹಿಸಿದ್ದರು.