ಗಣೇಶ ಮಹಾ ಮಂಡಳಿಯಿಂದ ಖಂಡ್ರೆಗೆ ಅವ್ಹಾನ
ಬೀದರ್:ಆ.31: ಅರಣ್ಯ ಜೈವಿಕ ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಮತ್ತು ಗಣೇಶ ಮಹಾ ಮಂಡಳ ಗೌರವಧ್ಯಕ್ಷರಾದ ಈಶ್ವರ ಖಂಡ್ರೆ ಅವರನ್ನು ಬೆಂಗಳೂರಿನ ಅವರ ನಿವಾಸದಲ್ಲಿ ಗಣೇಶ ಮಹಾ ಮಂಡಳ ಪ್ರಧಾನ ಕಾರ್ಯದರ್ಶಿ ಬಾಬು ವಾಲಿ, ಮೆರವಣಿಗೆ ಸಮಿತಿ ಅಧ್ಯಕ್ಷರಾದ ಸೋಮಶೇಖರ ಪಾಟೀಲ ಗಾದಗಿ, ನಗರಸಭೆ ಸದಸ್ಯರು ಹಾಗೂ ಸ್ವಾಗತ ಸಮಿತಿ ಕಾರ್ಯದರ್ಶಿಯಾದ ರಾಜು ಚಿಂತಾಮಣಿ ಸತ್ಕರಿಸಿ ಸೆ. 11 ರಂದು ನಡೆಯುವ ವಿಸರ್ಜನೆಗೆ ಅಮಂತ್ರಿಸಿದರು.
2024 ರ ಗಣೇಶ ಉತ್ಸವವು ಸೆ. 7ರಂದು ಪ್ರತಿಷ್ಠಾಪನೆಗೊಂಡು ಸೆ. 11 ರಂದು ವಿಸರ್ಜನೆ ಇದ್ದು ಇದರ ಪೂರ್ವ ತಯಾರಿಗಾಗಿ ಸೆ. 5ರಂದು ಗಣೇಶ ಮಹಾ ಮಂಡಳಿ ಗೌರವಧ್ಯಕ್ಷರಾದ ಈಶ್ವರ ಖಂಡ್ರೆಯವರ ನೇತೃತ್ವದಲ್ಲಿ ಗಣೇಶ ಮಹಾ ಮಂಡಳಿಯ ಪ್ರಮುಖರೊಂದಿಗೆ ಸಭೆ ನಡೆಯಲಿದ್ದು, ಈ ವರ್ಷದ 5 ದಿನಗಳ ಗಣೇಶ ಉತ್ಸವ ಸಡಗರ ಸಂಭ್ರಮದಿಂದ ಆಚರಿಸುವ ಕುರಿತು ಉಸ್ತುವಾರಿ ಸಚಿವರು ಮಾರ್ಗದರ್ಶನ ಮಾಡಿದರು ಎಂದು ಗಣೇಶ ಮಹಾ ಮಂಡಳಿಯ ಪ್ರಧಾನ ಕಾರ್ಯದರ್ಶಿ ಬಾಬು ವಾಲಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.