ಸಾರ್ವಜನಿಕ ಆಸ್ಪತ್ರೆಗೆ ನಿರಂತರ ವಿದ್ಯುತ್ ಪೂರೈಕೆಗೆ ಒತ್ತಾಯ
ಆಳಂದ: ಆ.31:ಪಟ್ಟಣದಲ್ಲಿನ ಮಟಕಿ ರಸ್ತೆಯಲ್ಲಿನ ತಾಲೂಕು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಗೆ ನಿರಂತರ ವಿದ್ಯುತ್ ಪೂರೈಕೆ ಕೈಗೊಳ್ಳಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಜೆಸ್ಕಾಂ ಅಧಿಕಾರಿಗಳಿಗೆ ಸ್ಥಳೀಯ ಮುಖಂಡರು ಮನವಿ ಸಲ್ಲಿಸಿ ಒತ್ತಾಯಿಸಿದರು.
ಪಟ್ಟಣದ ಜೆಸ್ಕಾಂ ಕಚೇರಿಯಲ್ಲಿ ಶುಕ್ರವಾರ ಜೆಸ್ಕಾಂ ಎಇಇ ಅವರಿಗೆ ಇಲ್ಲಿನ ಎಪಿಜೆ ಅಬ್ದುಲ್ ಕಲಾಂ ಸಾಮಾಜಿಕ ಕಲ್ಯಾಣ ಸಮಿತಿ ಅಧ್ಯಕ್ಷ ಎಂ.ಡಿ. ಫಿರಾಸತ್ ಅನ್ಸಾರಿ ಮತ್ತು ಕಾನೂನು ಸಲಹೆಗಾರ ದಿಲೀಪ ಕ್ಷೀರಸಾಗ ನೇತೃತ್ವದಲ್ಲಿ ಮುಖಂಡರು ಮನವಿ ಸಲ್ಲಿಸಿ ಆಗ್ರಹಿಸಿದರು.
ತಾಲೂಕಿನ ಕೇಂದ್ರ ಬಿಂಧು ಆಗಿರುವ ಈ ಸರ್ಕಾರಿ ದೊಡ್ಡ ಆಸ್ಪತ್ರೆಗೆ ಈಗಿರುವ ವಿದ್ಯುತ್ ಸಂಪರ್ಕ ಪದೇ ಪದೇ ಕಡಿತಗೊಂಡು ರೋಗಿಗಳಿಗೆ ಮತ್ತು ಆಸ್ಪತ್ರೆಯ ಶಸ್ತ್ರ ಚಿಕಿತ್ಸೆ ವಿಭಾಗ, ಎಕ್ಸರೆ, ಐಸಿಯು ಘಟಕದ ಕಾರ್ಯಕಲಾಪಗಳಿಗೆ ತೊಂದರೆ ಎದುರಾಗಿದೆ. ಕೂಡಲೇ ರೋಗಿಗಳ ಹಿತದೃಷ್ಟಿಯಿಂದ ಮತ್ತು ಆಸ್ಪತ್ರೆಯ ಅನುಕೂಲಕ್ಕಾಗಿ ನಿರಂತರ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎಂದು ಮನವಿರಿಕೆ ಮಾಡಿ ಒತ್ತಾಯಿಸಿದರು.
ಸಮಿತಿಯ ಅಧ್ಯಕ್ಷ ಎಂ.ಡಿ. ಫಿರಾಸತ್ ಅನ್ಸಾರಿ, ಕಾನೂನು ಸಲೆಹೆಗಾರ ದಿಲೀಪ ಕ್ಷೀರಸಾಗರ, ನಿಜಾಮ್ ಜಮಾದಾರ, ಅಶ್ಫಾಕ್ ಶೇಖ್, ಅಬ್ದುಲ್ ಖಾದರ್, ಮಸ್ತಾನ್ ಮಲ್ಲಾ, ತಾಥಾಗತ ಮುಲ್ಭಾರತಿ, ಶೇಖ್ ಅಲಿ, ಎಂ.ಡಿ. ಅನ್ವರ್, ಬಿದ್ರೆ, ಸಲೀಂ ಭಾಯ್, ಜಾಕಿರ್ ಅಹಮದ್ ಫಯಾಜ್ ಪಟೇಲ್ ಮತ್ತಿತರು ಉಪಸ್ಥಿತರಿದ್ದರು.