ವಿಜಯನಗರ ಶ್ರೀಕೃಷ್ಣದೇವರಾಯ ವಿವಿಸಿಂಡಿಕೇಟ್ ಗೆ ಅಖಂಡ ಬಳ್ಳಾರಿ ಜಿಲ್ಲೆಯವರ ನೇಮಕಕ್ಕೆ  ಒತ್ತಾಯ
ಸಂಜೆವಾಣಿ ವಾರ್ತೆ)
ಬಳ್ಳಾರಿ ಆ: 31 ವಿಶ್ವವಿದ್ಯಾಲಯದ ಮಾಜಿ ಸೆನೆಟ್  ಹಾಗು ಸಿಂಡಿಕೇಟ್ ಸದಸ್ಯರ ನಿಯೋಗ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಕುಲಸಚಿವ ರುದ್ರೇಶ್ ಅವರನ್ನು ಭೇಟಿಯಾಗಿ ವಿಜಯನಗರ ಶ್ರೀಕೃಷ್ಣದೇವರಾಯ ವಿವಿ ಸಿಂಡಿಕೇಟ್ ಗೆ ಅಖಂಡ ಬಳ್ಳಾರಿ ಜಿಲ್ಲೆಯವರ ನೇಮಕಕ್ಕೆ  ಒತ್ತಾಯಿಸಿ,  ರಾಜ್ಯಪಾಲರು, ಮುಖ್ಯಮಂತ್ರಿಗಳು ಹಾಗೂ ಉನ್ನತ ಶಿಕ್ಷಣ ಸಚಿವರಿಗೆ  ಮನವಿ ಪತ್ರ ಸಲ್ಲಿಸಲಾಗಿದೆ.
ಈ ವಿಶ್ವವಿದ್ಯಾಲಯಕ್ಕೆ ಆರು ಜನ ಸಿಂಡಿಕೇಟ್ ಸದಸ್ಯರನ್ನು ನಾಮಕರಣ ಮಾಡಿದ್ದು ಅದರಲ್ಲಿ ಐದು ಜನರು ಬಳ್ಳಾರಿ ವಿಶ್ವವಿದ್ಯಾಲಯದ ವ್ಯಾಪ್ತಿಯ ಹೊರ ಜಿಲ್ಲೆಯವರಾಗಿದ್ದಾರೆ ಅಖಂಡ ಬಳ್ಳಾರಿ ಜಿಲ್ಲೆಯ ಒಬ್ಬ ವ್ಯಕ್ತಿ ಸಿಂಡಿಕೇಟ್ ಗೆ ನಾಮಕರಣ ಆಗಿದ್ದು ಹಿಂದುಳಿದ 5  ಸದಸ್ಯರನ್ನು ತಕ್ಷಣ ಸರ್ಕಾರ ಬದಲಾವಣೆ ಮಾಡಿ  ಅಖಂಡ ಬಳ್ಳಾರಿ ಜಿಲ್ಲೆಯವರಲ್ಲಿ ಅರ್ಹರನ್ನು ನಾಮಕರಣ ಮಾಡುವಂತೆ ಒತ್ತಾಯ ಮಾಡಿದೆ.
ವಿಶ್ವವಿದ್ಯಾಲಯದ ಆಡಳಿತದಲ್ಲಿ ಸ್ಥಳೀಯರೇ ಇದ್ದರೆ ವಿಶ್ವವಿದ್ಯಾಲಯದ ಅಭಿವೃದ್ಧಿ ಸಾಧ್ಯವೆಂದು ಮನವರಿಕೆ ಮಾಡಿಕೊಡಲಾಯಿತು
ವಿಶ್ವವಿದ್ಯಾಲಯದ ವ್ಯಾಪ್ತಿಗೆ ಒಟ್ಟು 79 ಕಾಲೇಜುಗಳು ಬರುತ್ತಿದ್ದು ಬಳ್ಳಾರಿ ನಗರ ಒಂದರಲ್ಲಿ 19 ಕಾಲೇಜುಗಳು ಕಾರ್ಯನಿರ್ವಹಿಸುತ್ತಿವೆ ಪರಿಸ್ಥಿತಿ ಹೀಗಿದ್ದರೂ ಬಳ್ಳಾರಿ ನಗರದಿಂದಾಗಲಿ ಜಿಲ್ಲೆಯಿಂದ ಹೆಚ್ಚು ಜನ ಸಿಂಡಿಕೇಟ್ ಸದಸ್ಯರು ನೇಮಕ ಆಗದೆ ಇರುವುದು ವಿಷಾದನೀಯ ಕೂಡಲೇ ಸರ್ಕಾರ ನೇಮಕವಾಗಿರುವ ವಿಶ್ವವಿದ್ಯಾಲಯದ ವ್ಯಾಪ್ತಿಯ ಹೊರ  ಜಿಲ್ಲೆಯವರನ್ನು ಅವರ ವ್ಯಾಪ್ತಿಯಲ್ಲಿ ಬರುವ ವಿಶ್ವವಿದ್ಯಾಲಯಗಳಲ್ಲಿ ಸರ್ಕಾರ ಮುಂದುವರಿಸಬಹುದಾಗಿದೆ ಎಂದು ನಿಯೋಗ ತಿಳಿಸಿದೆ.
ನಿಯೋಗದಲ್ಲಿ ಮಾಜಿ ಸೆನೆಟ್ ಹಾಗೂ ಸಿಂಡಿಕೇಟ್ ಸದಸ್ಯರುಗಳಾದ ಕೆ. ಎಂ. ಮಹೇಶ್ವರ ಸ್ವಾಮಿ ಹೆಚ್ ಜಯಪ್ರಕಾಶ್ ಗೌಡ,ಕೆ ತಿಪ್ಪೇಸ್ವಾಮಿ ಮರ್ಚೆಡ್ ಮಲ್ಲಿಕಾರ್ಜುನಗೌಡ ವಿ ಎಸ್ ಪ್ರಭಯ್ಯ ಸಿ ಮಂಜುನಾಥ
ಹಾಗೂ ಜಿಲ್ಲಾ ಕಸಪ ದ ಬಸವರಾಜ್ ಗದಗಿನ್ ಭಾಗವಹಿಸಿದ್ದರು