ನಾಳೆಯಿಂದ 21ನೇ ಜಾನುವಾರು ಗಣತಿಕಾರ್ಯ ಶುರು: ಡಾ ಇಂಗಳೆ
ಆಳಂದ:ಆ.31: ತಾಲೂಕಿನಾದ್ಯಂತ ಸೆಪ್ಟೆಂಬರ್ 1 ರಿಂದ ಡಿಸೆಂಬರ್ 31ರವರೆಗೆ ನಡೆಯಲಿರುವ ರಾಷ್ಟ್ರೀಯ ಜಾನುವಾರು ಗಣತಿ ಯಶಸ್ವಿ ಕಾರ್ಯಗತಗೊಳ್ಳಲು ಇಲಾಖೆಯೊಂದಿಗೆ ಸಂಬಂಧಿತ ಸಾರ್ವಜನಿಕರು ಸಹಕರಿಸಬೇಕು ಎಂದು ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಯಲ್ಲಪ್ಪ ಇಂಗಳೆ ಅವರು ಇಂದಿಲ್ಲಿ ಮನವಿ ಮಾಡಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ನಡೆದ ಪಶು ಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಕೆಡಿಪಿ ಮತ್ತು 21ನೇ ಜಾನುವಾರ ಗಣತಿ ಕಾರ್ಯದ ಕುರಿತು ಸಿಬ್ಬಂದಿಗಳಿಗೆ ಹಮ್ಮಿಕೊಂಡ ತರಬೇತಿಯಲ್ಲಿ ಜಾಗೃತಿ ಪೋಸ್ಟರ್‍ಗಳನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಸೆ.1ರಿಂದ ಆರಂಭಗೊಳ್ಳುವ ಈ ಜಾನುವಾರು ಗಣತಿ ಕಾರ್ಯಕ್ಕೆ ಇಲಾಖೆಯಿಂದ ಗ್ರಾಮೀಣ ಭಾಗಕ್ಕೆ 15 ಜನ ಮತ್ತು ಪಟ್ಟಣ ಪ್ರದೇಶಕ್ಕೆ ಇಬ್ಬರು ಜಾನುವಾರು ಗಣಿಕೆದಾರನ್ನಾಗಿ ನೇಮಿಸಿದ್ದು, ಮೂವರನ್ನು ಮೇಲ್ವಿಚಾರರನ್ನಾಗಿ ನೇಮಿಸಲಾಗಿದೆ. ಮಾಹಿತಿ ಸಂಗ್ರಹ ಸ್ಮಾರ್ಟ್ ಫೋನ್ ಚಿಠಿಠಿ ನಲ್ಲಿ ಆigiಣಚಿಟ moಜe ನಲ್ಲಿ ಮಾಡಲಾಗಿದೆ. ಈ ಅವಧಿಯಲ್ಲಿ ನಮ್ಮ ಇಲಾಖೆ ಯ ಎಣಿಕೆದರರು ತಾಲ್ಲೂಕಿನ ಎಲ್ಲಾ ಕುಟುಂಬ ಗಳಿಗೆ ಭೇಟಿ ನೀಡುವರು. ಪ್ರಯುಕ್ತ ಸಾರ್ವಜನಿಕರು ತಮ್ಮ ಪಶು ಸಂಪತ್ತಿನ ನಿಖರವಾಗಿ ಮಾಹಿತಿಯನ್ನು ನೀಡಬೇಕು ಎಂದು ಹೇಳಿದರು.
ಜಾನುವಾರುಗಳ ಗಣತಿ ಪ್ರಕ್ರಿಯೆ ಸಕ್ರಮವಾಗಿ ಜರುಗಲು, ಪ್ರತಿ ಜಾನುವಾರು ಮಾಲಿಕರು ತಮ್ಮ ಜಾನುವಾರುಗಳ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡುವಂತೆ ಮನವಿ ಮಾಡಿದರು. ಈ ಗಣತಿ ದೇಶದ ಪಶುಸಂಪತ್ತಿನ ಸಮಗ್ರ ಮಾಹಿತಿಯನ್ನು ಪಡೆಯಲು ಮತ್ತು ಪಶುಪಾಲನೆ ಸಂಬಂಧಿಸಿದ ಯೋಜನೆಗಳ ಪ್ರಗತಿಯನ್ನು ಅಂದಾಜಿಸಲು ಪ್ರಮುಖವಾದದ್ದಾಗಿದೆ ಎಂದು ಡಾ. ಇಂಗಳೇ ಹೇಳಿದ್ದಾರೆ.
ತಮ್ಮ ಇಲಾಖೆಯ ಸಿಬ್ಬಂದಿಗೆ ಅವರು, ಗಣತಿ ಕಾರ್ಯದಲ್ಲಿ ಸಂಪೂರ್ಣ ನಿಖರತೆ ಮತ್ತು ಸಮರ್ಪಕತೆಯನ್ನು ಕಾಯ್ದುಕೊಳ್ಳಲು ಸೂಚಿಸಿದರು. ಜಾನುವಾರುಗಳ ಮಾಹಿತಿಯನ್ನು ಸರಿಯಾದ ರೀತಿಯಲ್ಲಿ ದಾಖಲಿಸಬೇಕು ಮತ್ತು ಯಾವುದೇ ರೀತಿಯ ತಪ್ಪುಗಳು ಅಥವಾ ಅವ್ಯವಸ್ಥೆಗಳು ತಡೆಯಲ್ಪಡಬೇಕು ಇದೇ ವೇಳೆ ತಾಕೀತು ಮಾಡಿದರು.
ಗ್ರಾಮೀಣ ಪ್ರದೇಶಗಳಲ್ಲಿ ಈ ಗಣತಿ ಯಶಸ್ವಿಯಾಗಿ ನಡೆಯಲು, ಸ್ಥಳೀಯ ಜನಸಾಮಾನ್ಯರ ಸಹಕಾರ ಅತ್ಯವಶ್ಯಕವಿದೆ. ಸಮುದಾಯದ ಪ್ರತಿಯೊಬ್ಬರಿಗೂ, ಈ ಕಾರ್ಯದಲ್ಲಿ ತಾವು ಪಾಲ್ಗೊಳ್ಳುವ ಮೂಲಕ ದೇಶದ ಪಶುಸಂಪತ್ತಿನ ಅಭಿವೃದ್ಧಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು.
ರಾಜ್ಯ ಸರ್ಕಾರಿ ನೌಕರ ಸಂಘದ ಅಧ್ಯಕ್ಷರಾದ ಹಿರಿಯ ಪಶುವೈದ್ಯಾಧಿಕಾರಿ ಡಾ. ಮಹಾಂತೇಶ ಪಾಟೀಲ ಅವರು, ಸರ್ವರು ಕೂಡಿ ಸರ್ಕಾರ ವಹಿಸಿದ್ದ ಈ ಗಣತಿ ಕಾರ್ಯವನ್ನು ಯಶಸ್ವಿಗೊಳಿಸಲು ಕೈಜೋಡಿಸೋಣಾ ಎಂದು ಹೇಳಿದರು.
ತರಬೇತಿದಾರ ಡಾ. ಕೇದಾರನಾಥ ಅವರು ಗಣತಿ ಕಾರ್ಯದ ತರಬೇತಿಯಲ್ಲಿ ವಿವರವಾಗಿ ಸಿಬ್ಬಂದಿಗಳಿಗೆ ಮಾಹಿತಿ ನೀಡಿದರು.
ಮುಖ್ಯ ಪಶುವೈದ್ಯಾಧಿಕಾರಿ ಡಾ. ಶ್ರೀಕಾಂತ ತಟ್ಟಿ, ಪಶು ವೈದ್ಯಾಧಿಕಾರಿ ಡಾ. ಉದಯಕುಮಾರ, ಡಾ. ಪ್ರಶಾಂತ, ಹಿರಿಯ ಪಶು ವೈದ್ಯಕೀಯ ಪರಿವೀಕ್ಷಕರು, ಶಾಂತಕುಮಾರ ಹಿರೇಮಠ, ಧರ್ಮಲಿಂಗ ಸುಣಗಾರ, ಬಸವರಾಜ ಸಪಾಣಿ, ಕಿರಿಯ ಪಶುವೈದ್ಯಕೀಯ ಪರೀಕ್ಷಕ ಮಲ್ಲಿಕಾರ್ಜುನ ಬೀದಿ, ಮೇಘರಾಜ್, ವೀರೇಶ, ಜಗುನಾಥ ಕುಂಬಾರ, ಬಸವರಾಜ ಗಣಾಚಾರ್ಯೆ, ನಾಗಮ್ಮ, ಡಾ. ಗುರುಮಾತಾ, ಡಾ. ದೇವಿಕಾ, ಶಿವಕಾಂತಮ್ಮಾ ಅನೇಕರು ಉಪಸ್ಥಿತರಿದ್ದರು.