ಆರ್ಯವೈಶ್ಯ ಸಂಘಕ್ಕೆ ನೂತನ ಪದಾಧಿಕಾರಿಗಳುಎಲ್ಲಾ ಸಮುದಾಯಗಳ ಪ್ರಗತಿಗೆ ಕಾರ್ಯಯೋಜನೆಗೆ ಬದ್ಧ- ಕೆ ರಾಜೇಂದ್ರ
ಸಂಜೆವಾಣಿ ವಾರ್ತೆ
ಹೊಸಪೇಟೆ ಆ31: ಸಮಾಜದ ಎಲ್ಲಾ ಹಂತದ ಜನರ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ಪ್ರಗತಿಸಾಧಿಸಲು ಸಂಘ ಯೋಜನೆರೂಪಿಸಿ ಸಮಾಜವನ್ನು ಸಂಘಟಿಸುವ ಕಾರ್ಯಯೋಜನೆ ರೂಪಿಸುವುದಾಗಿ ನೂತನ ಅಧ್ಯಕ್ಷ ಕಾಕುಬಾಳ ರಾಜೇಂದ್ರ ಹೇಳಿದರು.
ಹೊಸಪೇಟೆಯ ವಾಸವಿ ಕಲ್ಯಾಣ ಮಂಟಪದಲ್ಲಿ  ನೂನತವಾಗಿ ಆಯ್ಕೆಯಾದ ಆರ್ಯವೈಶ್ಯ ಸಮಾಜದ ಪದಾಧಿಕಾರಿಗಳ ಪದಗ್ರಹಣದ ನಂತರ ನಾಮನಿರ್ದೇಶಿತ ಹಾಗೂ ವಿಶೇಷ ಆಹ್ವಾನಿತರ ಪರಿಚಯಿಸಿ ಮಾತನಾಡಿ ಅವರು ಎಲ್ಲಾ ಸಮಾಜದ ಹಾಗೂ ನಮ್ಮ ಸಮಾಜದ ಆರ್ಥಿಕ ದುರ್ಬಲರ ಶೈಕ್ಷಣಿಕ ಪ್ರಗತಿಗೆ ಉಚಿತವಾಗಿ ತರಬೇತಿ ನೀಡುವುದು ಸೇರಿದಂತೆ ವಾಸವಿ ಅಕಾಡೆಮಿ ಮೂಲಕ ಕೌಶಲ್ಯ ತರಬೇತಿ ನೀಡಲು ಕ್ರಮವಹಿಸಲಾಗುವುದು ದೇವಸ್ಥಾನಕ್ಕೆ ಬರುವ ದಾರಿ ಸರಿಪಡಿಸುವುದು ಹಾಗೂ ವಾಸವಿ ಕಲ್ಯಾಣ ಮಂಟಪದ ನವೀಕರಣ ಸೇರಿದಂತೆ ಸಂಘಟನಾತ್ಮಕವಾಗಿ ಬೆಳಸಲು ಕ್ರಮಕೈಗೊಳ್ಳವುದಾಗಿ ತಿಳಿಸಿದರು.
ನೂತನ ಪದಾಧಿಕಾರಿಗಳು:
ಕಾಕುಬಾಳ ರಾಜೇಂದ್ರ(ಅಧ್ಯಕ್ಷ), ಭೂಪಾಳ ಪ್ರಹ್ಲಾದ್ (ಪ್ರಧಾನ ಕಾರ್ಯದರ್ಶಿ), ಕಾಕುಬಾಳ ಶ್ರೀನಿವಾಸ (ಖಚಾಂಚಿ),  ಅರಳಿಹಳ್ಳಿ ಬದ್ರಿನಾಥ, ಜಿ, ಸಂಜೀವ್ ಶೆಟ್ಟಿ, ಪಿ. ಪಾಂಡುರಂಗ ಶೆಟ್ಟಿ(ಉಪಾಧ್ಯಕ್ಷರು) ಜೆ.ಎಸ್. ರಮೇಶ್ ಗುಪ್ತ,  ಸತ್ಯನಾರಾಯಣ ಶೆಟ್ಟಿ, ಸೌದ್ರಿ ನರೇಂದ್ರ ( ಸಹ ಕಾರ್ಯದರ್ಶಿ) ಮಗದ ನಾಗರಾಜಶೆಟ್ಟಿ(ಸಹ ಖಜಾಂಚಿ) ಹಾಗೂ ಆಡಳಿ ಮಂಡಳಿಯ ನಿರ್ದೇಶಕರುಗಳಾಗಿ ನರಸಿಂಹಮೂರ್ತಿ ಬಟ್ಟೆಪಾಟೆ, ಗೌತಂ ಪತ್ತಿಕೊಂಡ, ಪಿ ಬದ್ರಿನಾರಾಯಣ, ಪಿ  ಶಿವಶಂಕರ್, ಪಿ. ಸಂತೋಷ್, ಹೆಚ್.ಎಸ್. ಪ್ರಕಾಶ್, ಎಸ್. ಸತೀಶ್ ಗುಪ್ತ, ಜೆ.ಎಸ್. ತಿಪ್ಪೆಸ್ವಾಮಿ ಶೆಟ್ಟಿ,  ಪಿ. ಮಂಜುನಾಥ ಪಿ. ವೆಂಕಟೇಶ್ , ಡಿ. ಬದ್ರಿನಾಥ ಶೆಟ್ಟ, ಚಿನ್ನಿ ರಾಂಕುಮಾರ್ ತಲ್ಲಂ ಗಣೇಶ್, ವಿ.ಆರ್. ಪ್ರವೀಣ್, ಮಂಜುನಾಥ ಹಿಟ್ನಾಳ್, ಶ್ರೀನಿವಾಸ ಮಂಚಿಕಟ್ಟಿ,  ವೆಂಕಟೇಶ್ ಬಾಬು ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾದ ಲಿಯಾಖತ್ ಅಲಿ ಘೋಷಿಸಿದರು.  ಹಿರಿಯ ಸದಸ್ಯರಾದ ಭೂಪಾಳ ರಾಘವೇಂದ್ರ ಶೆಟ್ಟಿ ಪ್ರಮಾಣವಚನ ಬೋಧಿಸಿದರು, ಸಮಾಜದ ಹಿರಿಯರು, ಮಾಜಿ ಆಡಳಿತ ಮಂಡಳಿಯ ಸದಸ್ಯರು ಸಭೆಯಲ್ಲಿ ಪಾಲ್ಗೊಂಡಿದ್ದರು.