ಹಬೋಹಳ್ಳಿ : ನಾಳೆ ವೀರಶೈವ ಲಿಂಗಾಯತ  ಮಹಾಸಭಾ ಕಚೇರಿ ಉದ್ಘಾಟನೆ
ಸಂಜೆವಾಣಿ ವಾರ್ತೆ
 ಹಗರಿಬೊಮ್ಮನಹಳ್ಳಿ, ಅ,31- ಪಟ್ಟಣದ ಹಳೆ ಊರಿನ ಕೋರ್ಟ್ ಎದುರುಗಡೆ ನಾಳೆ ವೀರಶೈವ ಲಿಂಗಾಯಿತ ಮಹಾಸಭಾ ಕಚೇರಿ ಉದ್ಘಾಟನೆ ಯಾಗಲಿದೆ ಎಂದು ವೀರಶೈವ ಮಹಾಸಭಾ ತಾಲೂಕ ಅಧ್ಯಕ್ಷ ಕೊಟ್ರೇಶ ಶೆಟ್ಟರ್ ತಿಳಿಸಿದರು.
 ಪತ್ರಿಕಾಗೋಷ್ಠಿ ನಡೆಸಿ ಅವರು ಮಾತನಾಡಿ ಚುನಾವಣೆಯ ಮುಂಚೆ ನೀಡಿದ ಆಶ್ವಾಸನೆಯಂತೆ ಪಟ್ಟಣದಲ್ಲಿ ಕಚೇರಿ ತೆರೆಯಲಾಗುವುದು. ಸಮಾಜದ ಪ್ರತಿಯೊಬ್ಬರಿಗೂ ಸಂಪರ್ಕ ಕಲ್ಪಿಸುವಂತಹ ಕೆಲಸವಾಗಬೇಕಾಗಿದೆ. ಆ ನಿಟ್ಟಿನಲ್ಲಿ ಕಚೇರಿಗೆ ಬರುವವರು ಕೆಲಸ ಕಾರ್ಯಕ್ಕೆ ಸುಗಮವಾಗುತ್ತದೆ. ಮುಂದಿನ ದಿನಗಳಲ್ಲಿ ತಾಲೂಕು ಮಟ್ಟದ ಸಮಾವೇಶ ಮಾಡಲು ನಿರ್ಧರಿಸಲಾಗಿದೆ. ಎಲ್ಲಾ ಪಂಗಡಗಳನ್ನು ಒಟ್ಟಿಗೆ  ಸೇರಿಸಿ ವೀರಶೈವ ಲಿಂಗಾಯಿತರ ಒಗ್ಗಟ್ಟು ಪ್ರದರ್ಶಿಸಬೇಕು. ಸಮಾಜದ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ವಸತಿ ನಿಲಯ ಕಲ್ಪಿಸಿಸಲು ಪ್ರಯತ್ನಿಸಲಾಗುವುದು. 2024 25 ನೇ ಸಾಲಿನಲ್ಲಿ ಎಸ್ ಎಸ್ ಎಲ್ ಸಿ ಮತ್ತು ಪಿ ಯು  ಸಿ ಪ್ರತಿಭಾವಂತ ಮಕ್ಕಳಿಗೆ  ಪ್ರತಿಭಾ ಪುರಸ್ಕಾರ ಮಾಡುವ ಮೂಲಕ ಗೌರವಿಸವಲಾಗುವುದು. ಪ್ರತಿ ವರ್ಷ ಬಸವ ಜಯಂತಿ ಸಂದರ್ಭದಲ್ಲಿ ಬೆರಳೆಣಿಕೆ ಎಷ್ಟು ಸಮಾಜದ ಮುಖಂಡರು ಇರುತ್ತಾರೆ. ಈ ಬಾರಿ ಸಮಾಜದ ಪ್ರತಿಯೊಬ್ಬರು ಪಾಲ್ಗೊಳ್ಳುವ ಮೂಲಕ ಅದ್ದೂರಿಯಾಗಿ ಬಸವ ಜಯಂತಿ ಆಚರಿಸಲಾಗುವುದು. ಕಚೇರಿಯ ಶಾಶ್ವತ ಕಟ್ಟಡ ಸೇರಿದಂತೆ ರುದ್ರಭೂಮಿ ಸಮಸ್ಯೆ ಇತ್ಯರ್ಥ ಗೊಳಿಸಲಾಗುವುದು. ಸಮಾಜದ ಪ್ರತಿಯೊಬ್ಬರ ಸಹಕಾರ ಬೇಕು ಎಂದರು.
 ಈ ಸಂದರ್ಭದಲ್ಲಿ ಸಮಾಜದ ಪ್ರಧಾನ ಕಾರ್ಯದರ್ಶಿ ಅಕ್ಕಿ ಮಲ್ಲಿಕಾರ್ಜುನ, ಖಜಾಂಚಿ ಟಿ ಹೆಚ್ ಎಂ ವೀರಭದ್ರಯ್ಯ, ಜಿಲ್ಲಾ ಸಮಿತಿಯ ಸದಸ್ಯ ಟಿ ಜಿ ಎಂ  ಕೊಟ್ರೇಶ್, ನಗರ ಘಟಕದ ಅಧ್ಯಕ್ಷ ಹುಡೇದ್  ಗುರು ಬಸವರಾಜ್, ಮಹೇಶ್ವರ್ ಗೌಡ ಎಚ್ ಎಂ ಕೊಟ್ರೇಶ್, ಶ್ರೀಶೈಲ ಸ್ವಾಮಿ, ಸುಭಾಷ್ ಚಂದ್ರ ಶಾಸ್ತ್ರಿ ಇದ್ದರು.