ಸಿಸಿ ಕ್ಯಾಮರಾ ಅಳವಡಿಕೆ ಸೂಕ್ತ
ಲಕ್ಷ್ಮೇಶ್ವರ,ಆ31: ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಲಕ್ಷ್ಮೇಶ್ವರ ಪಟ್ಟಣ ಸೇರಿದಂತೆ ಗ್ರಾಮೀಣ ಪ್ರದೇಶಗಳ ಗ್ರಾಮ ಪಂಚಾಯಿತಿಗಳು ಸಿಸಿ ಕ್ಯಾಮೆರಾ ಅಳವಡಿಸುವುದು ಸೂಕ್ತವಾಗಿದೆ.
ಈಗ ಪಟ್ಟಣದಲ್ಲಿ 36 ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಲಾಗಿದ್ದು ಇದರಿಂದಾಗಿ ಪಟ್ಟಣದಲ್ಲಿ ಸಿಸಿ ಕ್ಯಾಮೆರಾ ಇರುವ ಎಲ್ಲಾ ಪ್ರದೇಶಗಳಲ್ಲಿನ ಅಪರಾಧ ಕೃತ್ಯಗಳನ್ನು ಪತ್ತೆಹಚ್ಚಲು ಇಲಾಖೆಗೆ ಅನುಕೂಲವಾಗಲಿದೆ.
ಈಗಾಗಲೇ ತಾಲೂಕಿನ ಶಿಗ್ಲಿ ಬಾಲೆಹೊಸೂರು ಮತ್ತು ಗೊಜನೂರು ಗ್ರಾಮ ಪಂಚಾಯಿತಿಗಳಲ್ಲಿ ಪ್ರಮುಖ ರಸ್ತೆಗಳಲ್ಲಿ ಸಿಸಿ ಕ್ಯಾಮೆರಾ ಗಳನ್ನು ಅಳವಡಿಸಲಾಗಿದೆ ಅಕ್ಕಿ ಗುಂದದಲ್ಲಿ 4 ಶಿಗ್ಲಿ ಗ್ರಾಮದಲ್ಲಿ 4 ಬಾಲೆ ಹೊಸೂರು ಗ್ರಾಮದಲ್ಲಿ ನಾಲ್ಕು 4 ಸಿ ಸಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.
ಸಿ ಸಿ ಕ್ಯಾಮೆರಾ ಅಳವಡಿಕೆಯಿಂದ ಕಳುವು ಅಪರಾಧಗಳು ಮನೆಗಳ್ಳತನ ಹಿಟ್ ಅಂಡ್ ರನ್ ದರೋಡೆ ಮತ್ತಿತರ ಅಪರಾಧಗಳನ್ನು ಪತ್ತೆಹಚ್ಚಲು ಅನುಕೂಲವಾಗಲಿದೆ ಎಂದು ಪೊಲೀಸ್ ಇಲಾಖೆ ಅಭಿಪ್ರಾಯ ವ್ಯಕ್ತಪಡಿಸಿದೆ.
ಪೊಲೀಸ್ ಠಾಣಾ ವ್ಯಾಪ್ತಿಯ ಅಂತರ ಜಿಲ್ಲಾ ಸಂಪರ್ಕಿಸುವ ರಾಮಗಿರಿ ಕ್ರಾಸು ಗೋನಾಳ ಈ ರಸ್ತೆಗಳು ಧಾರ್ವಾಡ್ ಜಿಲ್ಲೆ ಮತ್ತು ಹಾವೇರಿ ಜಿಲ್ಲೆಯನ್ನು ಸಂಪರ್ಕಿಸಲಿವೆ ಆದ್ದರಿಂದ ಈ ಎರಡು ಗ್ರಾಮ ಪಂಚಾಯಿತಿಗಳು ಹೆಚ್ಚು ಆಸಕ್ತಿಯಿಂದ ಸಿಸಿ ಕ್ಯಾಮೆರಾ ಅಳವಡಿಸುವ ಅವಶ್ಯಕತೆ ಹೊಂದಿವೆ.
ಈ ಕುರಿತು ಪಿಎಸ್‍ಐ ಈರಣ್ಣ ರಿತ್ತಿ ಅವರು ಪಟ್ಟಣದ ಜನವಸತಿ ಪ್ರದೇಶಗಳಾದ ವಿನಾಯಕ ನಗರ ಲಕ್ಷ್ಮಿನಗರ ಜನತ್ ನಗರ ಸೇರಿದಂತೆ ಹೊರವಲಯದಲ್ಲಿ ಇರುವ ಮನೆಗಳು ಪ್ರತಿಯೊಬ್ಬರು ಸಿಸಿ ಕ್ಯಾಮೆರಾ ಅಳವಡಿಸಿದರೆ ನಡೆಯಬಹುದಾದ ಅಪರಾಧ ಕೃತ್ಯಗಳನ್ನು ಪತ್ತೆಹಚ್ಚಲು ಸಾಧ್ಯವಾಗುತ್ತದೆ ಅದೇ ರೀತಿ ಈಗಾಗಲೇ ಬಾಲೆ ಹೊಸ ರು ಶಿಗ್ಲಿ ಗೊಜನೂರು ಗ್ರಾಮ ಪಂಚಾಯಿತಿಗಳು ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿದ್ದು ಅದೇ ರೀತಿ ಎಲ್ಲ ಗ್ರಾಮ ಪಂಚಾಯಿತಿಗಳು ತಮ್ಮ ತಮ್ಮ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಗ್ರಾಮ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಸದಸ್ಯರು ಹೆಚ್ಚು ಮುತುವರ್ಜಿ ವಹಿಸಬೇಕು ಎಂದು ಹೇಳಿದರು ಅದೇ ರೀತಿ ಈಗಾಗಲೇ ಅಕ್ಕಿ ಗುಂದದಲ್ಲಿ ಸಿ ಸಿ ಕ್ಯಾಮೆರಾ ಅಳವಡಿಸಿದ್ದು ಲಕ್ಷ್ಮೇಶ್ವರ ಗದಗ್ ರಾಜ್ಯ ಹೆದ್ದಾರಿ ಹೊಂದಿದ್ದು ಇಲ್ಲಿಯೂ ಸಹ ಸಿಸಿ ಕ್ಯಾಮೆರಾ ಅಳವಡಿಸುವ ಅವಶ್ಯಕತೆಯನ್ನು ಪಿಎಸ್‍ಐ ಅವರು ವ್ಯಕ್ತಪಡಿಸಿದ್ದಾರೆ.