ಪಪಂ ಸದಸ್ಯ ಅಪಹರಣ: ಧರಣಿ
ಚನ್ನಮ್ಮನ ಕಿತ್ತೂರು-31, ಸ್ಥಳಿಯ ಪಪಂಗೆ ಸೆಪ್ಟಂಬರ 3ರಂದು ನಡೆಲಿರುವ ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ ಹಿನ್ನೆಲೆಯಲ್ಲಿ ಅಪಹರಣಕ್ಕೊಳಗಾದ ಪಪಂ ಸದಸ್ಯ ನಾಗರಾಜ ಅಸುಂಡಿ ಅವರನ್ನು ಕೂಡಲೇ ಕರೆತರಬೇಕೆಂದು ಆಗ್ರಹಿಸಿ ಕಿತ್ತೂರು ಪೋಲಿಸ್ ಠಾಣೆ ಎದುರುಗಡೆ ಬಿಜೆಪಿ ಮುಖಂಡರು ಧರಣಿ ನಡೆಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸುಬಾಸ್ ಪಾಟೀಲ, ಮಂಡಳ ಅಧ್ಯಕ್ಷ ಬಸವರಾಜ ಪರವಣ್ಣವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ ನೇತೃತ್ವದಲ್ಲಿ ಧರಣಿ ನಡೆಸಲಾಯಿತು.
ಪೋಲಿಸರು ಚುನಾವಣೆ ನಿಗದಿತ ದಿನದ ಒಳಗಾಗಿಯೇ ಅಪಹರಿಸಿದ ಸದಸ್ಯರನ್ನು ಕರೆತರಬೇಕು. ಇಲ್ಲದಿದ್ದರೆ ಪ್ರತಿಭಟನೆ ಮುಂದುವರೆಯುತ್ತದೆ ಎಂದು ಎಚ್ಚರಿಸಿದರು.
ಸಿಪಿಐ ಶಿವಾನಂದ ಗುಡಗಟ್ಟಿ, ಪಿಎಸ್‍ಐ ಪ್ರವೀಣ ಗಂಗೋಳ ಮಾತನಾಡಿ ಪತ್ತೆಗಾಗಿ ತಂಡ ರಚಿಸಿ ಶೋಧ ನಡೆಸಿದ್ದು, ಪ್ರತಿಭಟನೆ ಕೈಬಿಡಿ ಎಂದರು.
ಈ ವೇಳೆ ಬಿಜೆಪಿ ಮುಖಂಡರುಗಳಾದ ಲಕ್ಷ್ಮೀ ಇನಾಮದಾರ, ಶ್ರೀಕರ ಕುಲಕರ್ಣಿ, ಉಳವಪ್ಪ ಉಳ್ಳಾಗಡ್ಡಿ, ಬಸನಗೌಡ ಕೊಳದೂರ, ಬಸನಗೌಡ ಸಿದ್ರಾಮನಿ, ಸುಬಾಸ್ ರಾವಳ, ಸಚಿನ್ ಅಂಗಡಿ, ಅಪ್ಪಣ್ಣಾ ಪಾಗಾದ, ಸರಸ್ವತಿ ಹೈಬತ್ತಿ, ಬಿಜೆಪಿ ಪಪಂ ಸದಸ್ಯರು, ಇನಾಮದಾರ ಸೇರಿದಂತೆ ನೂರಾರು ಕಾರ್ಯಕರ್ತರು, ಮುಖಂಡರು ಇದ್ದರು.