ಬಳ್ಳಾರಿಯಲ್ಲಿ 5 ವರ್ಷಗಳ ಲಾ ಕೋರ್ಸ್ ಆರಂಭಕ್ಕೆ ಅನುಮತಿ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ಆ,31: ಇಲ್ಲಿನ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ವೀರಶೈವ ವಿದ್ಯಾವರ್ಧಕ ಸಂಘದ ಅಧೀನದ ವುಂಕಿ ಸಣ್ಣರುದ್ರಪ್ಪ ಕಾನೂನು ಮಹಾವಿದ್ಯಾಲಯದಲ್ಲಿ ಐದು ವರ್ಷಗಳ ಕಾನೂನು ಪದವಿ ಕೋರ್ಸ್ ನ್ನುಪ್ರಸಕ್ತ  2024-25  ಸಾಲಿನಿಂದ ಆರಂಭಿಸಲು ಭಾರತೀಯ ವಕೀಲರ ಪರಿಷ್  ಅನುಮತಿ ನೀಡಿದೆಂದು ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಮಿಂಚೇರಿ ನರೇಂದ್ರಬಾಬು ಅವರು ತಿಳಿಸಿದ್ದಾರೆ.
ನಗರದಲ್ಲಿ 1975ರಲ್ಲಿ ಆರಂಭಗೊಂಡ ಈ ಕಾನೂನು ಕಾಲೇಜ್ ಈಗ ಸುವರ್ಣ ಮಹೋತ್ಸವದ ಸಂಭ್ರಮಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಸಂದರ್ಭದಲ್ಲಿ ಐದು ವರ್ಷಗಳ ಈ ಕೋರ್ಸ್ ಆರಂಭಕ್ಕೆ ಅನುಮತಿ ದೊರೆತಿರುವುದು ಕಾಲೇಜಿನ ಮತ್ತು ನಮ್ಮ ಸಂಘದ ಕೀರ್ತಿಗೆ ಮತ್ತೊಂದು ಗರಿಯಾಗಿದೆ.
ಈ ವರೆಗೆ 3 ವರ್ಷದ ಕಾನೂನು ಪದವಿ ಕೋರ್ಸ್‌ ನಡೆಯುತ್ತಿತ್ತು. ಪದವಿ ನಂತರ ಕಾನೂನು ಪದವಿಗೆ ಪ್ರವೇಶ ನೀಡಲಾಗುತ್ತಿತ್ತು. 2023-24ನೇ ಸಾಲಿ ನಲ್ಲಿ ನ್ಯಾಕ್ ಸಮಿತಿಯಿಂದ ಏ* ಶ್ರೇಣಿಯನ್ನು ಈ ಕಾಲೇಜು ಪಡೆದು ಕೊಂಡಿದೆ. ಪದವಿ ನಂತರ 120 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿದೆ.
ಇದರ ಜೊತೆಗೆ ಪ್ರಸ್ತುತ 2024-25ನೇ ಸಾಲಿನಲ್ಲಿ 5 ವರ್ಷಗಳ ಕಾನೂನು ಪದವಿ (ಲಾ ಡಿಗ್ರಿ) ಕೋರ್ಸನ್ನು ಈ ಕಾಲೇಜಿನಲ್ಲಿ ಆರಂಭಿಸಲು ಅನುಮತಿ ದೊರೆತಿದೆ. 60 ವಿದ್ಯಾರ್ಥಿಗಳ ಪ್ರವೇಶಕ್ಕೆ ಅವಕಾಶವಿದೆ. ಪಿಯುಸಿ ಅಥವಾ 10-2 ಅಭ್ಯಾಸ ಮಾಡಿದವರು ಪ್ರವೇಶ ಪಡೆಯಬಹುದಾಗಿದೆ.
ಕಲ್ಯಾಣ ಕರ್ನಾಟಕ ಭಾಗದ, ರಾಯಚೂರು, ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಜಿಲ್ಲೆಗಳ ಪೈಕಿ ಐದು ವರ್ಷಗಳ ಕಾನೂನು ಪದವಿ ಕೋರ್ಸನ್ನು ಹೊಂದಿರುವ ಏಕೈಕ ಕಾಲೇಜು ಇದಾಗಿದೆ.
ಪ್ರಸಕ್ತ ಸಾಲಿನ ವರ್ಷದಲ್ಲಿ  ಐದು ವರ್ಷದ ಕಾನೂನು ಪದವಿಯ ಕೋರ್ಸನ್ನು ಆರಂಭಿಸುವ ಇಚ್ಛಾಶಕ್ತಿಗೆ ಪ್ರಸಕ್ತ ವರ್ಷದ ಸಾಲಿನಲ್ಲೇ ಆರಂಭಿಸಲು ವೀ ವಿ ಸಂಘದ ಪದಾಧಿಕಾರಿಗಳು , ಕಾರ್ಯಕಾರಿ ಸಮಿತಿ ಸದಸ್ಯರು, ಸಿಬ್ಬಂದಿ ವರ್ಗ, ವಿಎಸ್ಆರ್ ಲಾ ಕಾಲೇಜಿನ ಪ್ರಾಂಶುಪಾಲರು ಹಾಗೂ ಕಾಲೇಜಿನ ಸಿಬ್ಬಂದಿ ವರ್ಗ ಹಾಗೂ  ಸಂಘದ ಆಡಳಿತ  ಮತ್ತು ನಮ್ಮ ಎಲ್ಲಾ ವೀರಶೈವ ಲಿಂಗಾಯತ ಸಮಾಜ ಬಾಂಧವರು ಪ್ರತ್ಯಕ್ಷ ಹಾಗು ಪರೋಕ್ಷವಾಗಿ  ಸಹಕರಿಸಿದ ಹಿನ್ನೆಲೆಯಲ್ಲಿ ಇಂತಹ ಒಂದು ಕಾರ್ಯಸಾಧನೆಗೆ ಸಹಕಾರಿಯಾಗಿದೆ ಎಂದಿದ್ದಾರೆ ನರೇಂದ್ರಬಾಬು.
ಐದು ವರ್ಷಗಳ ಲಾ ಕೋರ್ಸ್ ಆರಂಭಕ್ಕೆ ಭಾರ್ ಕೌನ್ಸಿಲ್ ಆಫ್ ಇಂಡಿಯಾ ಅನುಮತಿ‌ ನೀಡಿದ್ದು. ವಿದ್ಯಾರ್ಥಿಗಳ ಪ್ರವೇಶಕ್ಕೆ ದಿನಾಂಕ ನೀಡುವಂತೆ ಈಗ ಹುಬ್ಬಳ್ಳಿಯಲ್ಲಿ ಕಾನೂನು ವಿಶ್ವ ವಿದ್ಯಾಲಯದ ಅನುಮತಿಗೆ ಕೋರಿದೆ ಒಂದೆರೆಡು ದಿನದಲ್ಲಿ ದೊರೆಯಲಿದ್ದು. ಈ ತಿಂಗಳ 15 ರೊಳಗೆ ಆಡ್ಮಿಷನ್ ಮುಗಿಸಲಿದೆ.
ನರೇಂದ್ರಬಾಬು(ಮಿಂಚೇರಿ),
ಅಧ್ಯಕ್ಷರು ಕಾನೂನು ಕಾಲೇಜ್, ಬಳ್ಳಾರಿ.