10ನೇ ಶೈಕ್ಷಣಿಕ ಸಾಲಿನ ಉದ್ಘಾಟನಾ ಸಮಾರಂಭ
ಸಂಜೆವಾಣಿ ವಾರ್ತೆ
ಬಳ್ಳಾರಿ,ಅ,31- ಶ್ರೀಮೇಧಾ ಪದವಿ ಮಹಾವಿದ್ಯಾಲಯವು 10ನೇ ಶೈಕ್ಷಣಿಕ ಸಾಲಿನ ಉದ್ಘಾಟನಾ ಸಮಾರಂಭ”ದೀಕ್ಷಾರಂಬ್” ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ2024-25ನೇ ಸಾಲಿನ ಬಿಕಾಂ, ಬಿಬಿಎ, ಬಿಸಿಎ ಮತ್ತು ಬಿಹೆಚ್‍ಎಂ ಪದವಿ ಕೋರ್ಸ್‍ಗಳಿಗೆ ಪ್ರವೇಶ ಪಡೆದ ವಿದ್ಯಾರ್ಥಿಗಳು ಮತ್ತುಅವರ ಪೋಷಕರು ಪಾಲ್ಗೊಂಡಿದ್ದರು.
ಇಂದಿನ ಕಾರ್ಯಕ್ರಮದಲ್ಲಿ ಶ್ರೀ ವೀರಭದ್ರೇಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ .ಎಸ್‍ರಮೇಶ್ ಇವರುಗಳು ಅಧ್ಯಕ್ಷತೆಯನ್ನುವಹಿಸಿದ್ದರು.
ಮುಖ್ಯ ಅಥಿತಿಗಳಾಗಿ ಮತ್ತು ಕಾರ್ಯಕ್ರಮದ ಉದ್ಘಾಟಕರಾಗಿ ಜೆಎಸ್‍ಡಬ್ಲ್ಯೂ (JSW) ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ಹಿರಿಯ ಉಪಾಧ್ಯಕ್ಷರಾದ ದೇಬಬ್ರತ್ ಮಿಶ್ರ  ಮಾತನಾಡಿ, ಈ ಪ್ರಸ್ತುತ ಉದ್ಯೋಗ ಅವಕಾಶಗಳ ಬಗ್ಗೆ ಮತ್ತು ಆ ಅವಕಾಶಗಳನ್ನು ಪಡೆದುಕೊಳ್ಳಲು ಬೇಕಾಗುವ ಕೌಶಲ್ಯ ಮತ್ತುಕೌಶಲ್ಯಾಭಿವೃದ್ದಿಯ ಬಗ್ಗೆ ತಿಳಿಸಿದರು.
ಶ್ರೀಮೇಧಾ ಸಂಸ್ಥೆಯ ಸಂಸ್ಥಾಪಕರು ಮತ್ತು ಪ್ರಾಂಶುಪಾಲರಾದ ಡಾ.ರಾಮ್‍ಕಿರಣ್ ಕೆ ಸ್ವಾಗತಿಸಿ ಪೋಷಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಕಾಲೇಜಿನ ಸಾಧನೆಗಳ ಬಗ್ಗೆ ಮತ್ತು ಮುಂದಿನ ಮೂರು ವರ್ಷಗಳ ಪಕ್ಷಿನೋಟದ ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಬಿಬಿಎ, ಬಿಸಿಎ, ಬಿಕಾಂ ಮತ್ತು ಬಿಹೆಚ್‍ಎಂ ವಿಭಾಗದ ಮುಖ್ಯಸ್ಥರುಗಳು ಹಾಗೂ ಭಾಷಾ ವಿಭಾಗದ ಮುಖ್ಯಸ್ಥರುಗಳು, ಉಪನ್ಯಾಸಕರುಗಳು ಮತ್ತುಕಾಲೇಜಿನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
ಬಿಬಿಎ ಮುಖ್ಯಸ್ಥರಾದ ಡಾ.ಮನುಪತ್ತಾರ್‍ ಕಾರ್ಯಕ್ರಮವನ್ನು ನಡೆಸಿ ಕೊನೆಯಲ್ಲಿ ವಂದಿಸಿದರು.