ತಾಲ್ಲೂಕು ಮಟ್ಟದ ಕ್ರೀಡಾಕೂಟ: ವಿಜೇತ ವಿದ್ಯಾರ್ಥಿಗಳಿಗೆ ಅಭಿನಂದನೆ
ತುಮಕೂರು, ಆ. ೩೧- ಇತ್ತೀಚೆಗೆ ನಡೆದ ತಾಲ್ಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ವಿಜೇತರಾದ ಕಾಳಿದಾಸ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿ ಕಾಳಿದಾಸ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ಭೀಮರಾಜು, ಪ್ರಾಚಾರ್ಯ ಕೆ. ಶಿವಶಂಕರ್, ಉಪಪ್ರಾಚಾರ್ಯ ಕೆ. ಚಂದ್ರಶೇಖರ್, ಕ್ರೀಡಾ ಉಸ್ತುವಾರಿ ಜಗದೀಶ್ ಕುರಿಯವರ್, ರಾಕೇಶ್ ವಿಜೇತ ವಿದ್ಯಾರ್ಥಿಗಳನ್ನು ಅಭಿನಂದಿಸಿದ್ದಾರೆ.
ಈ ಸಂದರ್ಭದಲ್ಲಿ ಕ್ರೀಡಾಪಟುಗಳಾದ ಜೀವನ್ ಜಾರ್ಜ್, ಕ್ರಿಸ್ತ್ ಸಂದೇಶ್, ಅನಿಷ್ ಜಾಯ್ಸನ್, ಜಾಯ್ಸನ್ ಬೆಂಡಿಕ್ಟ್, ಎಡ್ವರ್ಡ್ ಆಂಡ್ರೋ, ಇಮ್ಯಾನುಯಲ್ ರೋಡಿಗ್ಯಸ್, ಫೆಬಿನ್ ಜೋಷ್, ಲೂಯಿಸ್ ರಾಜ್, ಉಲ್ಲಾಸ್ ಮತ್ತಿತರರು ಉಪಸ್ಥಿತರಿದ್ದರು.