ಹುಳಿಯಾರು ಬ್ರಹ್ಮಕುಮಾರಿ ಕೇಂದ್ರದಲ್ಲಿ ರಕ್ಷಾ ಬಂಧನ
ಹುಳಿಯಾರು, ಆ. ೩೧- ಪಟ್ಟಣದ ಪ್ರಜಾಪಿತ ಬ್ರಹ್ಮಾಕುಮಾರಿ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ರಕ್ಷಾ ಬಂಧನ ಹಾಗೂ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು ದಾದಿ ಪ್ರಕಾಶ್ ಮಣಿಜಿಯವರ ಸ್ಮತಿ ದಿವಸದ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಧಾರವಾಡದ ಬ್ರಹ್ಮಕುಮಾರಿ ರಾಜಯೋಗಿನಿ ಜಯಂತಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ರಕ್ಷಾ ಬಂಧನ ಹಬ್ಬವು ವಿಶಿಷ್ಟವಾಗಿದ್ದು, ಭಾರತದ ಸಂಸ್ಕೃತಿ ಮತ್ತು ಮಾನವೀಯ ಮೌಲ್ಯಗಳನ್ನು ಎತ್ತಿ ತೋರಿಸುವ ಆಚರಣೆಯಾಗಿದೆ. ಸಹೋದರತೆಯನ್ನು ಗಟ್ಟಿಗೊಳಿಸುತ್ತದೆ. ಇದು ಮಾನವ ಜನಾಂಗದ ರಕ್ಷಣೆ ಪ್ರೇರಣೆ ನೀಡುತ್ತದೆ ಅಲ್ಲದೆ, ಮನಸ್ಸಿನ ಶುದ್ಧೀಕರಣ ಮಾಡುತ್ತದೆ ಎಂದರು.
ಹುಳಿಯಾರು ಬ್ರಹ್ಮ ಕುಮಾರಿ ಕೇಂದ್ರದ ಪ್ರಧಾನ ಸಂಚಾಲಕಿ ಗೀತಕ್ಕ ಮಾತನಾಡಿ, ಸೌಹಾರ್ದತೆಯ ಸಂಕೇತವೇ ರಕ್ಷಾ ಬಂಧನವಾಗಿದೆ. ಸರ್ವರನ್ನೂ ಸದ್ಭಾವನೆಯಿಂದ ಕಂಡು ಅವರಿಗೂ ಭಗವಂತನ ಶಕ್ತಿ ಇರಲಿ, ಎಲ್ಲ ಕ್ಷೇತ್ರಗಳಲ್ಲಿ ಬಲಿಷ್ಠವಾಗಿ ಬೆಳೆಯಲಿ ಎಂಬ ಒಳ್ಳೆಯ ಭಾವನೆಯಿಂದ ಕಟ್ಟುವ ರಾಖಿಯು ಅವರಿಗೆ ರಕ್ಷಣೆಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನಯ್ಯ, ತಿಮ್ಮಯ್ಯ, ನಿಜಲಿಂಗಪ್ಪ, ಮರಿಯಣ್ಣ, ರಾಮಚಂದ್ರ, ಲಕ್ಷ್ಮಿ, ರೇಣುಕಾ, ಉಮಾ, ಗೌರಮ್ಮ, ಲಲಿತಮ್ಮ, ರಾಜಣ್ಣ, ದುರ್ಗರಾಜು ಮತ್ತಿತರರು ಉಪಸ್ಥಿತರಿದ್ದರು.