ಜ್ಞಾನಪೀಠ ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ
ಚಿಕ್ಕನಾಯಕನಹಳ್ಳಿ, ಆ. ೩೧- ಪಟ್ಟಣದ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆದ ಪ್ರೌಢಶಾಲಾ ವಿಭಾಗ ಮಟ್ಟದ ಕಸಬ ಹೋಬಳಿ ಕ್ರೀಡಾಕೂಟದ ಅಥ್ಲೆಟಿಕ್ಸ್‌ನಲ್ಲಿ ಜ್ಞಾನಪೀಠ ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ ಲಭಿಸಿದೆ.
ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ೧೨ ಪ್ರೌಢಶಾಲೆಗಳು ಭಾಗವಹಿಸಿದ್ದವು. ಇದರಲ್ಲಿ ಜ್ಞಾನಪೀಠ ಪ್ರೌಢಶಾಲೆಯ ವಿದ್ಯಾರ್ಥಿ ತಂಡದಲ್ಲಿನ ಸಿದ್ದರಾಜು ೧೦೦ ಮತ್ತು ೨೦೦ ಮೀಟರ್ ಓಟದಲ್ಲಿ ಪ್ರಥಮ, ಲಾಂಗ್‌ಜಂಪ್‌ನಲ್ಲಿ ದ್ವಿತೀಯ ಸ್ಥಾನಗಳಿಸಿದ್ದಾನೆ. ಕಿಶನ್‌ಕುಮಾರ್ ೮೦೦ ಮೀಟರ್ ಓಟದಲ್ಲಿ ಪ್ರಥಮ, ೪೦೦ ಮೀಟರ್ ಓಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾನೆ. ಹೇಮಂತ್ ಜಿ. ೮೦೦ ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನಗಳಿಸಿದ್ದಾನೆ. ನರಸಿಂಹಮೂರ್ತಿ ೧೫೦೦ ಹಾಗೂ ೩೦೦೦ ಮೀಟರ್ ಓಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾನೆ. ತೇಜು ತಟ್ಟೆ ಎಸೆತದಲ್ಲಿ ಪ್ರಥಮ, ಗುಂಡು ಎಸೆತ ಹಾಗೂ ೧೫೦೦ ಮೀಟರ್ ಓಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾನೆ.
ಪೃಥ್ವಿರಾಜ್ ಭರ್ಜಿ ಎಸೆತದಲ್ಲಿ ಪ್ರಥಮ, ೪೪೦೦ ರಿಲೇಯಲ್ಲಿ ಸಿದ್ದರಾಜು, ಹೇಮಂತ, ಪೃಥ್ವಿರಾಜ್, ಹಾಗೂ ಕಿಶನ್‌ತಂಡ ಪ್ರಥಮ ಸ್ಥಾನ ಹಾಗೂ ೪೧೦೦ ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.
ಕ್ರೀಡಾಕೂಟದಲ್ಲಿ ೩ ಓಟದಲ್ಲಿ ಪ್ರಥಮ ಸ್ಥಾನ ಪಡೆದ ಸಿದ್ದರಾಜು ಕಸಬ ಹೋಬಳಿ ಮಟ್ಟದ ಕ್ರೀಡಾಕೂಟದಲ್ಲಿ ಚಾಂಪಿಯನ್ ಶಿಪ್ ಪಡೆದಿದ್ದಾನೆ. ವಿದ್ಯಾರ್ಥಿಗಳ ಈ ಸಾಧನೆಗೆ ಜ್ಞಾನಪೀಠ ಪ್ರೌಢಶಾಲೆಯ ಎಲ್ಲ ಶಿಕ್ಷಕ ವರ್ಗ ಅಭಿನಂಧನೆ ಸಲ್ಲಿಸಿ ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗುವಂತೆ ಹಾರೈಸಿದ್ದಾರೆ.