ದಬ್ಬಗುಂಟೆ ಸರ್ಕಾರಿ ಶಾಲೆಗೆ ಸಮಗ್ರ ಪ್ರಶಸ್ತಿ
ಹುಳಿಯಾರು, ಆ. ೩೧- ಹೋಬಳಿ ಮಟ್ಟದ ಬಿ ವಿಭಾಗದ ಕ್ರೀಡಾಕೂಟದಲ್ಲಿ ಹೋಬಳಿಯ ದಬ್ಬಗುಂಟೆ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಗೆ ಸಮಗ್ರ ಪ್ರಶಸ್ತಿ ಲಭಿಸಿದೆ.
ಬಾಲಕರ ವಿಭಾಗದ ೧೦೦ ಮೀ. ಓಟದಲ್ಲಿ ರಂಗನಾಥ್ (ಪ್ರ), ತರುಣ್ (ದ್ವಿ), ೪೦೦ ಮೀ. ಓಟದಲ್ಲಿ ಡಿ.ಕೆ.ಜೀವನ್ (ತೃ), ೬೦೦ ಮೀ.ಓಟದಲ್ಲಿ ವಸಂತ (ದ್ವಿ), ಚಕ್ರೆಎಸೆತ ರಂಗನಾಥ್ (ಪ್ರ), ಎತ್ತರ ಜಿಗಿತದಲ್ಲಿ ತರುಣ್ (ಪ್ರ), ಉದ್ದಜಿಗಿತದಲ್ಲಿ ತರುಣ್ (ಪ್ರ) ಬಹುಮಾನ ಪಡೆದಿದ್ದಾರೆ.
ಬಾಲಕಿಯರ ವಿಭಾಗದಲ್ಲಿ ೧೦೦ ಮೀ. ಓಟ ಕೀರ್ತನ (ಪ್ರ), ಶ್ರೇಯ (ದ್ವಿ), ೪೦೦ ಮೀ. ಓಟದಲ್ಲಿ ಲಿಖಿತಪ್ರಿಯ (ಪ್ರ), ೬೦೦ ಮೀ. ಓಟದಲ್ಲಿ ರಚನಾ (ಪ್ರ), ಖುಷಿ (ದ್ವಿ), ಗುಂಡು ಎಸೆತದಲ್ಲಿ ಕೆ.ಖುಷಿ (ಪ್ರ), ಚಕ್ರ ಎಸೆತದಲ್ಲಿ ಯಾಸ್ಮೀನ್‌ಬಾನು (ಪ್ರ), ಎತ್ತರ ಜಿಗಿತದಲ್ಲಿ ಕೀರ್ತನಾ (ಪ್ರ), ಶ್ರೇಯ (ದ್ವಿ), ಉದ್ದಜಿಗಿತದಲ್ಲಿ ವಿ.ಕೀರ್ತನ (ದ್ವಿ) ಬಹುಮಾನ ಪಡೆದಿದ್ದಾರೆ.
ಬಾಲಕ ಮತ್ತು ಬಾಲಕಿಯರ ರಿಲೇಯಲ್ಲಿ ಪ್ರಥಮ ಸ್ಥಾನ, ಕಬ್ಬಡಿಯಲ್ಲಿ ಪ್ರಥಮ ಸ್ಥಾನ, ಬಾಲಕಿಯರ ಖೋಖೋದಲ್ಲಿ ಪ್ರಥಮ, ಷಟಲ್‌ನಲ್ಲಿ ಪ್ರಥಮ, ಥ್ರೋಬಾಲ್‌ನಲ್ಲಿ ದ್ವಿತೀಯ, ಬಾಲಕ, ಬಾಲಕಿಯರ ಬಾಲ್‌ಬ್ಯಾಡ್ಮಿಂಟನ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.