ರಾಸಾಯನಿಕ ಮಿಶ್ರಿತ ನೀರು ಸೇವಿಸಿ ಕುರಿಗಳ ಸಾವು: ಖಂಡಿಸಿ ಪ್ರತಿಭಟನೆ
ಸಂಜೆವಾಣಿ ವಾರ್ತೆ
ಹುಮನಾಬಾದ್: ಆ.೩೧:ರಾಸಾಯನಿಕ ಮಿಶ್ರಿತ ನೀರು ಸೇವಿಸಿ ಸುಮಾರು ೧೫ ಕುರಿಗಳು ಮೃತಪಟ್ಟಿವೆ ಎಂದು ಆರೋಪಿಸಿ ಬ್ಯಾಂಕ್ ರೆಡ್ಡಿ, ಪವನ್ ಗೊಂಡ, ಆಕಾಶ, ಶಿವಾರೆಡ್ಡಿ, ಸೋಮು ಡಾಂಗೆ, ಅರುಣ್ ಮಲ್ಲಗೊಂಡ ಸೇರಿ ಇತರರು ಕಲಬುರಗಿ-ಬೀದರ್ ರಸ್ತೆಯಲ್ಲಿ ವಾಹನ ತಡೆದು ಪ್ರತಿಭಟನೆ ನಡೆಸಿದರು.
ವಿಷಯ ತಿಳಿದು ಸ್ಥಳಕ್ಕೆ ಭೇಟಿ ನೀಡಿದ ಸಿಪಿಐ ಗುರು ಪಾಟೀಲ ತನಿಖೆ ನಡೆಸಿ ಸಂಬAಧಿತರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ ನಂತರ ಪ್ರತಿಭಟನೆ ಕೈಬಿಡಲಾಯಿತು.
ನಂತರ ಗೊಂಡ ಸಮಾಜದ ಮುಖಂಡ ಪವನ್ ಗೊಂಡ ಮಾತನಾಡಿ,’ಪಟ್ಟಣ ಹೊರವಲಯದ ಚಿದ್ರಿ ಪೆಟ್ರೋಲ್ ಬಂಕ್ ಹಿಂಭಾಗದಲ್ಲಿ ಕುರಿಗಳು ಮೇಯಲು ಹೋದಾಗ ಅಲ್ಲಿಯ ರಾಸಾಯನಿಕ ಮಿಶ್ರಿತ ನೀರು ಸೇವಿಸಿ ಸುಮಾರು ೧೫ ಕುರಿಗಳು ಮೃತಪಟ್ಟಿವೆ. ಹೀಗಾಗಿ ಸಂಬAಧಪ- ಟ್ಟವರ ಮೇಲೆ ಕ್ರಮ ಜರುಗಿಸಿ ಕುರಿಗಳ ಮಾಲೀಕರಿಗೆ ಪರಿಹಾರ ಒದಗಿಸಬೇಕು’ ಎಂದು ಆಗ್ರಹಿಸಿದರು.
‘ಪರಿಸರ ಮಾಲಿನ್ಯ ನಿಯಂತ್ರಣ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ರಾಸಾಯನಿಕ ಯಾವ ಕಾರ್ಖಾನೆಯದ್ದು ಎಂಬುದನ್ನು ಪತ್ತೆ ಹಚ್ಚಿ ವರದಿ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಹಶೀಲ್ದಾರ್ ಅಂಜುA ತಬಸುಮ್ ತಿಳಿಸಿದರು.