ಹಕ್ಕುಗಳು, ಕರ್ತವ್ಯಗಳು ಒಂದೇ ಮುಖದ ಎರಡು ಭಾಗಗಳು
ಕೋಲಾರ,ಆ,೩೧-ಭಾರತದ ಸಂವಿಧಾನದಲ್ಲಿಹಕ್ಕುಗಳು ಮತ್ತು ಜವಾಬ್ದಾರಿಗಳ ಕುರಿತು ಇಂದಿನ ಯುವಕರಿಗೆ ಅರಿವು ನೀಡುವುದು ಅವಶ್ಯಕವಾಗಿದೆ. ” ೧೫ ಎ ಮತ್ತು ಜಿ ” ಕಾಯ್ದೆಗಳ ಹಕ್ಕುಗಳು ಮತ್ತು ಕರ್ತವ್ಯಗಳು ಒಂದೇ ಮುಖದ ಎರಡು ಭಾಗಗಳು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸುನೀಲ್ ಎಸ್.ಹೊಸಮನಿ ಅಭಿಪ್ರಾಯ ಪಟ್ಟರು,
ನಗರದ ನೂತನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಸಾವಿತ್ರಿಬಾಯಿ ಪುಲೆ ಸಭಾಂಗಣದಲ್ಲಿ ಸಂವಾದ ಯುವ ಸಂಪನ್ಮೂಲ ಕೇಂದ್ರ, ಕರ್ನಾಟಕ ಯುವ ಮುನ್ನೆಡೆ, ನೂತನ ಸರ್ಕಾರಿ ಪದವಿ ಪೂರ್ವ ಕಾಲೇಜು ಸಹಭಾಗಿತ್ವದಲ್ಲಿ ಯುವ ಸಿರಿ ಸಂವಿಧಾನ ಸಂಭ್ರಮ-೨೦೨೪ ಪರಿಸರ ನ್ಯಾಯಕ್ಕಾಗಿ ಯುವ ಧ್ವನಿ ಎಂಬ ವಿಷಯಕ್ಕೆ ಸಂಬಂಧಿಸಿದ ಜಲ ಸಂಕುಲದ ಸಂರಕ್ಷಣೆಯಲ್ಲಿ ನಾವು-ನೀವು ಎಂಬ ಸಂವಾದ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು,
ಪರಿಸರವನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಅದರೆ ಇಂದು ಅರಣ್ಯಗಳು, ಬೆಟ್ಟಗುಡ್ಡಗಳು ಕಡಿದು ನಾಶಮಾಡಲಾಗುತ್ತಿದೆ , ಕೆರೆ ಕಾಲುವೆಗಳನ್ನು ಒತ್ತುವರಿ ಮಾಡಲಾಗುತ್ತಿದೆ ಹಾಗೂ ರಾಸಾಯನಿಕ ವಿಷ ಪದಾರ್ಥಗಳು ,ಕಸ ,ಪ್ರಾಣಿಗಳ ವಧೆಯ ತ್ಯಾಜ್ಯಗಳನ್ನು ಕೆರೆಗಳಿಗೆ ಎಸೆಯುವ ಮೂಲಕ ಕಲುಷಿತ ಮಾಡಲಾಗುತ್ತಿದೆ. ಪ್ಲಾಸ್ಟಿಕ್ ಮುಂತಾದವುಗಳನ್ನು ಸುಡುವ ಮೂಲಕ ವಾಯು ಮಾಲಿನ್ಯಕ್ಕೆ ಕಾರಣರಾಗಿ ಪ್ರಕೃತಿಯ ವಿಕೋಪಗಳಿಗೆ ತುತ್ತಾಗುತ್ತಿರುವುದು ಕಳವಳಕಾರಿಯಾಗಿದೆ ಎಂದರು,
ಜಗತ್ತಿನಲ್ಲಿ ಎಲ್ಲಾ ಪ್ರತಿಯೊಂದು ಜೀವಿಗಳಿಗೂ ಮಾನವನಂತೆ ಬದುಕುವ ಹಕ್ಕಿದೆ ಪರಿಸರ ನಾಶವಾದಲ್ಲಿ ಮಾನವನ ಭವಿಷ್ಯಕ್ಕೆ ಅಪಾಯಕಾರಿಯಾಗಲಿದೆ. ಪರಿಸರ ಉಳುವಿಗೆ ಹಲವಾರು ಕಾನೂನುಗಳನ್ನು ಸರ್ಕಾರವು ಜಾರಿ ಮಾಡಿ ಅನುಷ್ಟನಕ್ಕೆ ತರಲು ಹಲವಾರು ಇಲಾಖೆಗಳನ್ನು ಸ್ಥಾಪಿಸಿದ್ದರೂ ಸಹ ಸಮರ್ಪಕವಾಗಿ ಜಾರಿಗೆ ತರುವಲ್ಲಿ ನಿಯೋಜಿತ ಅಧಿಕಾರಿಗಳು ವಿಫಲವಾಗಿದ್ದಾರೆ ಇದರಿಂದ ಪರಿಸರವು ವಿನಾಶದಂಚಿನಲ್ಲಿ ಸಾಗುತ್ತಿದೆ ಯುವ ಪೀಳಿಗೆಗಳು ಜಾಗೃತರಾಗಿ ಪರಿಸರವನ್ನು ಉಳಿಸಲು ಪ್ರತಿಯೊಬ್ಬರೂ ತಮ್ಮ ತಾಯಿಯವರ ಹೆಸರಿನಲ್ಲಿ ಒಂದೊಂದು ಸಸಿಯನ್ನು ನೆಟ್ಟು ಬೆಳೆಸುವಂತಾಗ ಬೇಕು ಆಗಾ ಮಾತ್ರ ನಿಮ್ಮ ಜೀವನವು ಅರ್ಥಪೂರ್ಣವಾಗಲು ಸಾಧ್ಯ. ಪರಿಸರ ಮತ್ತು ಭವಿಷ್ಯವು ಸುಧಾರಣೆಯಾಗಲು ಪೂರಕವಾಗಲಿದೆ ಎಂದು ತಿಳಿಸಿದರು.
ಇಂದಿನ ಯುವಕರು ಮಾದಕ ವಸ್ತುಗಳಾದ ಡ್ರಾಗ್ಸ್, ಮದ್ಯ, ಅಪೀಮು, ಗಾಂಜಾ, ಮುಂತಾದವುಗಳಿಗೆ ದಾಸರಾಗಿ ತಮ್ಮ ಜೀವನವನ್ನು ಹಾಳಾಗುತ್ತಿದ್ದಾರೆ. ಇವರಿಗೆ ಮಾದಕ ವಸ್ತುಗಳಿಂದ ಉಂಟಾಗುವ ದುಷ್ಟರಿಣಾಮದ ಬಗ್ಗೆ ಅರಿವು ಮೂಢಿಸುವಂತಾಗ ಬೇಕು. ದೇಶದಲ್ಲಿ ಕೋಲಾರ ಜಿಲ್ಲೆಯನ್ನು ವ್ಯಸನ ಮುಕ್ತ, ಮಾದರಿ ಜಿಲ್ಲೆಯಾಗಿ ಪರಿವರ್ತಿಸಲು ಹಾಗೂ ಆರೋಗ್ಯವಂತ ಸಮಾಜ ನಿರ್ಮಾಣ ಮಾಡಲು ಯುವಕರು ಪಣ ತೊಡುವಂತಾಗಬೇಕು ಇದರ ಜೊತೆಗೆ ಪರಿಸರಕ್ಕೆ ಧಕ್ಕೆಯುಂಟಾಗದಂತೆ ಪ್ಲಾಸ್ಟಿಕ್ ಮುಕ್ತ ಮತ್ತು ಸ್ವಚ್ಚಾತ ಇಂಥಹ ಅಭಿಯಾನ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚಾಗಿ ಆಯೋಜಿಸುವ ಮೂಲಕ ಯಶಸ್ವಿ ಗೊಳಿಸ ಬೇಕು.ಯುವ ಪೀಳಿಗೆಗಳನ್ನು ಜಾಗೃತಗೊಳಿಸಿ ಭವಿಷ್ಯದಲ್ಲಿ ಸಮಾಜಮುಖಿಗಳಾಗಿ ಸಮಾಜ ಸೇವೆಯಲ್ಲಿ ತೊಡಗಿಸುವಂತೆ ಮಾಡ ಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಶಾಶ್ವತ ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ಆರ್. ಅಂಜನೇಯ ರೆಡ್ಡಿ ಅವರು ಮಾತನಾಡಿ ಶಿಕ್ಷಣವೆಂದರೆ ಓದು ಬರಹ ಅಂಕಗಳು ಪಡೆಯುವುದು ಮಾತ್ರವಲ್ಲ ನಮ್ಮ ನಿತ್ಯ ಜೀವನದಲ್ಲಿನ ಪ್ರತಿಯೊಂದನ್ನು ಭಾಗವು ಶಿಕ್ಷಣ ಎನ್ನಬಹುದಾಗಿದೆ, ಮಾನವನ ಜೀವನಕ್ಕೆ ಗುಣಮಟ್ಟದ ಆಹಾರ,ಶುದ್ಧ ನೀರು ಮತ್ತು ಗಾಳಿ ಹೇಗೆ ಮುಖ್ಯವು ಅದೆ ರೀತಿ ನಿರ್ಮಲವಾದ ಪರಿಸರವು ಮುಖ್ಯ ಎಂಬುದು ಒಂದು ಪಾಠವಾಗಿದೆ ಇದನ್ನು ಎಲ್ಲರೂ ಅಧ್ಯಾಯನ ಮಾಡಿ ಪರಿಸರವನ್ನು ಉಳಿಸಿ ಬೆಳೆಸುವುದು ನಮ್ಮ ಹಕ್ಕು ಮತ್ತು ಜವಾಬ್ದಾರಿಯಾಗಿದೆ ಇದು ಸಹ ಶಿಕ್ಷಣದ ಒಂದು ಭಾಗವೆಂದು ಪರಿಗಣಿಸ ಬಹುದಾಗಿದೆ ಎಂದರು.
ದಕ್ಷಿಣ ಏಷ್ಯದಲ್ಲಿಯೇ ಅಖಂಡ ಕೋಲಾರ ಜಿಲ್ಲೆಯು ಅತಿ ಹೆಚ್ಚು ಕೆರೆಗಳನ್ನು ಹೊಂದಿದ ಜಿಲ್ಲೆಯಾಗಿತ್ತು, ಈ ಜಿಲ್ಲೆಯ ಭೂಪಟದಲ್ಲಿ ೫ ನದಿಗಳು ಹುಟ್ಟಿ ಹರಿಯುತ್ತಿದ್ದವು. ಕೆರೆಗಳು ಸರಪಳಿಯ ಮಾದರಿಯಲ್ಲಿ ತುಂಬಿ ಕೋಡಿ ಹರಿದು ಹೋಗುತ್ತಿದ್ದವು. ಅರಣ್ಯವು ಸಂವೃದ್ದವಾಗಿ ಬೆಳೆದಿತ್ತು. ವನ್ಯ ಜೀವಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದು ನೆಮ್ಮದಿಯ ಜೀವನ ನಡೆಸುತ್ತಿದ್ದವು. ಕೋಲಾರ ಕೆರೆಗಳ ತವರು ಜಿಲ್ಲೆಯಾಗಿತ್ತು. ಅದರೆ ೮೦ರ ದಳಕದ ನಂತರ ಕೋಲಾರ ಜಿಲ್ಲೆಯು ಬರದ ಜಿಲ್ಲೆಯಾಗಿ ಕೆರೆ, ಬಾವಿ,ಕಲ್ಯಾಣಿ, ಕುಂಟೆಗಳಲ್ಲಿ ಜೀವ ಜಲವು ಬತ್ತಿ ಹೋದವು ಸಾವಿರಾರು ಅಡಿ ಅಳದ ಕೊಳವೆ ಬಾವಿಗಳನ್ನು ಕೊರೆಸಿದರೂ ಪ್ರಾರಂಭದಲ್ಲಿ ಸಿಕ್ಕ ನೀರು ಕೆಲ ಕಾಲದ ನಂತರ ಬತ್ತಿಹೋದ ಅವಿಶೇಷಗಳಾಗಿರುವುದನ್ನು ಕಾಣ ಬಹುದಾಗಿದೆ ಕಾಲ ಬದಲಾದಂತೆ ಹನಿ ನೀರಾವರಿಗೆ ಮೊರೆ ಹೋಗಿ ಈಗಾ ತ್ಯಾಜ್ಯ ನೀರು ಸಂಸ್ಕರಿಸಿ ಬಳಿಸುವಂತ ದುಃಸ್ಥಿತಿ ಉಂಟಾಗಿದೆ ಎಂದು ಹೇಳಿದರು.
ಇತ್ತೀಚೆಗೆ ಬೆಂಗಳೂರಿನ ತ್ಯಾಜ್ಯವನ್ನು ಕೋಲಾರ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಸುರಿಯುವಂತ ಹುನ್ನಾರಗಳು ಖಂಡನೀಯ ಇದನ್ನು ನಾವುಗಳು ವಿರೋಧಿಸದಿದ್ದರೆ ಮುಂದಿನ ಜೀವನಕ್ಕೆ ಕೋಲಾರ ಜಿಲ್ಲೆಯು ಯೋಗ್ಯವಲ್ಲ ಎಂಬ ಅಪವಾದಕ್ಕೆ ಗುರಿಯಾಗ ಬೇಕಾಗುತ್ತದೆ ಹಾಗಾಗಿ ನಾವುಗಳು ಶಿಕ್ಷಣದ ಜೂತೆಗೆ ನಮ್ಮಗಳ ಜವಾಬ್ದಾರಿಯನ್ನು ಅರಿಯುವಂತಾಗ ಬೇಕು, ಅರೋಗ್ಯಕರ ಜೀವನಕ್ಕೆ ಪರಿಸರ, ಅರಣ್ಯ, ಕೆರೆ ಕಟ್ಟೆಗಳು, ಬೆಟ್ಟಗಳು ನಾಶವಾಗದಂತೆ ಪ್ರಕೃತಿಯನ್ನು ಉಳಿಸಿ ಕೊಂಡು ಉತ್ತಮವಾದ ಪರಿಸರವನ್ನು ಅಭಿವೃದ್ದಿ ಪಡೆಸುವುದು ನಮ್ಮೆಲ್ಲರ ಹೊಣೆಗಾರಿಕೆಯಾಗಿದೆ ಎಂದರು.
ಬೆಂಗಳೂರು ಸಂವಾದ ಸಹ ಕಾರ್ಯನಿರ್ವಾಹಕ ನಿರ್ದೇಶಕ ಜನಾರ್ಧನ್.ಕೆ. ಆಶಯ ನುಡಿಗಳಾಡಿದರು, ಮಂಜುನಾಥ್ ಪ್ರಸ್ತಾವಿಕ ನುಡಿ. ಶಿವಾಜಿ ತಂಡದಿಂದ ಆಶಯಗೀತೆ, ಈ ಜಲ -ಈ ನೆಲ ವೆಂಕಟಚಲಪತಿ ಅವರಿಂದ ಹಾಡುಗಳು, ಭೂಮಿಕಾ ಕಾರ್ಯಕ್ರಮ ನಿರೂಪಿಸಿದರು,
ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ಕಾಲೇಜಿನ ಪ್ರಭಾರಿ ಪ್ರಾಂಶುಪಾಲೆ ದಾಕ್ಷಯಿಣಿ.ಎ. ಮುಖ್ಯ ಅತಿಥಿಗಳಾಗಿ ರಂಗಕರ್ಮಿ ಗಾಯಕಿ ವೈ.ಜಿ.ಉಮಾ, ರೈತ ಮುಖಂಡ ಅಬ್ಬಣಿ ಶಿವಪ್ಪ, ಪ್ರೋ.ಅರಿವು ಶಿವಪ್ಪ. ಮಹಿಳಾ ವಿಮೋಚನ ಸಂಘಟನೆಯ ಸಂಚಾಲಕಿ ಶಾಂತಮ್ಮ, ಮುಂತಾದವರು ಉಪಸ್ಥಿತರಿದ್ದರು,