ನಗರಸಭಾ ಅಧಿಕಾರಿಗಳ ನಿರ್ಲಕ್ಷ ಬೊಕ್ಕಸಕ್ಕ ನಷ್ಟ
ಕೋಲಾರ,ಆ-,೩೧: ನಗರಸಭಾ ಅಧಿಕಾರಿಗಳ ನಿರ್ಲಕ್ಷದಿಂದ ಕೋಲಾರ ನಗರಸಭೆಗೆ ತಮ್ಮ ಒಡೆತನದ ಆಸ್ತಿಗಳಿಂದ ಬರಬೇಕಾಗಿದ್ದ ಆದಾಯವನ್ನು ಪಡೆಯುವಲ್ಲಿ ವಿಫಲರಾಗಿರುವುದಕ್ಕೆ ಆಮ್ ಆದ್ಮಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ ರಮೇಶ್ ಆಕ್ರೋಶ ವಕ್ತಪಡಿಸಿದರು.
ಪತ್ರಿಕಾ ಹೇಳಿಕೆಯಲ್ಲಿ ಅವರು ಮಾತನಾಡಿ ನಗರದ ಜನನಿಬಿಡ, ಅತೀ ಹೆಚ್ಚು ವ್ಯಾಪಾರ ವಹಿವಾಟು ನಡೆಯುವ ಹಾಗೂ ಹೃದಯ ಭಾಗದಲ್ಲಿರುವ ಆಸ್ತಿಗಳಾದ ಎಂ.ಜಿ.ರಸ್ತೆಯಲ್ಲಿನ ಶತಶೃಂಗ ಮತ್ತು ಚಂದ್ರಮೌಳೇಶ್ವರ ವಾಣಿಜ್ಯ ಸಂಕೀರ್ಣ, ಪ್ರಭಾತ್ ಟಾಕೀಸ್ ರಸ್ತೆ, ಸೆಂಟ್ರಲ್ ಲಾಡ್ಜ್ ಮುಂಭಾಗದ ಮಳಿಗೆಗಳು ಹಾಗೂ ಹವೇಲಿ ಮೊಹಲ್ಲಾದಲ್ಲಿರುವ ಮಟ್ಟನ್ ಮಾರುಕಟ್ಟೆ, ಹೊಸ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹತ್ತಿರ, ಅಂತರಗಂಗೆ ರಸ್ತೆ, ಐ.ಡಿ.ಎಸ್.ಎಂ.ಟಿ ಹಾಗೂ ಆಚಾರಿ ಬೀದಿ ಮಳಿಗೆಗಳು, ಗಂಗೋತ್ರಿ, ಹಳೇ ತರಕಾರಿ ಮಾರುಕಟ್ಟೆ, ಹೊಸ ತರಕಾರಿ ಮಾರುಕಟ್ಟೆ, ದೊಡ್ಡಪೇಟೆ ತರಕಾರಿ ಮಾರುಕಟ್ಟೆ ಹಾಗೂ ಆಚಾರಿ ಬೀದಿ ವಾಣಿಜ್ಯ ಸಂಕೀರ್ಣ ಇವುಗಳನ್ನು ಬಾಡಿಗೆಗೆ ಕೊಡುವ, ಸಾರ್ವಜನಿಕ ಹರಾಜು ಪ್ರಕ್ರಿಯೆ ಜೂನ್ ೨೦೨೦ ರಲ್ಲಿ ನಡೆದಿದ್ದು, ಇವುಗಳಲ್ಲಿ ಈಗಲೂ ಸುಮಾರು ಮಳಿಗೆಗಳು ಖಾಲಿಯಿದ್ದು, ೨೦೨೪ ರಲ್ಲಿ ಖಾಲಿಯಿರುವ ಮಳಿಗೆಗಳ ಮೇಲೆ ಮುಂಗಡ ಠೇವಣಿ ಪಾವತಿಸಿ, ಉಳಿಕೆ ಠೇವಣಿ ಮೊತ್ತವನ್ನು ಪಾವತಿಸದೆ ಇರುವುದರಿಂದ ನಿಮ್ಮ ಮುಂಗಡ ಠೇವಣಿ ಮೊತ್ತವನ್ನು ಮುಟ್ಟುಗೊಲು ಹಾಕಿಕೊಳ್ಳಲಾಗುವುದು ಎಂಬ ತಿಳುವಳಿಕೆ ಪತ್ರವನ್ನು ಹಂಟಿಸಿರುವುದು ಹಾಸ್ಯಾಸ್ಪದ ಎಂದು ಕಳವಳ ವ್ಯಕ್ತಪಡಿಸಿದರು.
ಸರಿಸುಮಾರು ನಾಲ್ಕು ವರ್ಷಗಳಿಂದ ಖಾಲಿಯಿರುವ ಮಳಿಗೆಗಳನ್ನು ನಗರಸಭೆ ಅಧಿಕಾರಿಗಳು ಎಚ್ಚೆತ್ತು ಸರಿಯಾದ ಸಮಯಕ್ಕೆ ಮರು ಹರಾಜು ಪ್ರಕ್ರಿಯೆ ನಡೆಸಿ ಯಾರಾದರೂ ನಿರುದ್ಯೋಗ ಯುವಕರು, ವಿದ್ಯಾವಂತ ನಿರುದ್ಯೋಗಿಗಳು, ಬಡವರು, ವಿಕಲಚೇತನರಿಗೆ ಹಂಚಿದ್ದರೆ ಅವರ ಜೀವನ ಮಟ್ಟನು ಸುಧಾರಿಸುತ್ತಿತ್ತು ಹಾಗೂ ಸರ್ಕಾರದ ಬೊಕ್ಕಸಕ್ಕೂ ಒಳ್ಳೆಯ ಆದಾಯ ಬರುತ್ತಿತ್ತು. ಇನ್ನಾದರೂ ನಗರಸಭಾ ಅಧಿಕಾರಿಗಳು ಹಾಗೂ ನಗರಸಭೆಯ ಆಡಳಿತಾಧಿಕಾರಿಯು ಆಗಿರುವ ಜಿಲ್ಲಾಧಿಕಾರಿಗಳು ಇದನ್ನು ಸರಿಪಡಿಸುವಲ್ಲಿ ಗಮನ ಹರಿಸಬೇಕೆಂದು ಒತ್ತಾಯಿಸಿದರು.