ಅನಧಿಕೃತ ಶೌಚಾಲಯ, ಸ್ನಾನದ ಗೃಹ ತೆರವು
ಕೋಲಾರ,ಆ.೩೧- ಅನಧಿಕೃತವಾಗಿ ಶೌಚಾಲಯ ಮತ್ತು ಸ್ನಾನದ ಗೃಹ ನಿರ್ಮಿಸಿರುವುದನ್ನು ನಗರಸಭೆ ಅಧಿಕಾರಿಗಳು ಗುರುವಾರ ಮುಂಜಾನೆ ಜೆ.ಸಿ.ಬಿ.ಯಿಂದ ತೆರವುಗೊಳಿಸುವ ಮೂಲಕ ಸಾರ್ವಜನಿಕರ ಪ್ರಶಂಸೆಗೆ ಪಾತ್ರರಾಗಿರುವ ಪ್ರಕರಣ ವಾರ್ಡ್ ನಂ. ೧೨ ರಲ್ಲಿ ನಡೆದಿದೆ.
ಎ.ಎನ್.ಪಿಳ್ಳಯ್ಯ ಎಂಬುವರು ನಗರಸಭೆಯ ೧೨ನೇ ವಾರ್ಡಿನಲ್ಲಿ ಅಕ್ರಮವಾಗಿ ಮೋರಿಯ ಮೇಲೆ ಮತ್ತು ನಗರಸಭೆ ಖಾಲಿ ಜಾಗವನ್ನು ಒತ್ತುವರಿ ಮಾಡಿ ಕೊಂಡು ಅನಧಿಕೃತವಾಗಿ ಶೌಚಾಲಯ ಮತ್ತು ಸ್ನಾನದ ಮನೆಯನ್ನು ನಿರ್ಮಿಸಿದ್ದರು.
ನಗರಸಭೆ ಅಧಿಕಾರಿ ಅಂಬಿಕ, ಜಿಲ್ಲಾ ನಗರಾಭಿವೃದ್ಧಿ ಯೋಜನಾ ಕೋಶ ನಿರ್ದೇಶಕರು, ೩ ನೋಟಿಸ್ ನೀಡಿದನ್ನು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಲು ಮುಂದಾಗಿರುವುದು ಸ್ಥಳೀಯ ಸಾರ್ವಜನಿಕರು ಸ್ವಾಗತಿಸಿದ್ದಾರೆ.
ಅಧಿಕಾರಿಗಳು ಸಿಬ್ಬಂದಿಯ ಸಹಕಾರದೊಂದಿಗೆ ಅನಧಿಕೃತ ಶೌಚಾಲಯ ಮತ್ತು ಸ್ನಾನದ ಗೃಹವನ್ನು ಜೆ.ಸಿ.ಬಿ ಮೂಲಕ ತೆರವುಗೊಳಿಸಿರುವುದು ಇತರರಿಗೆ ಎಚ್ಚರಿಕೆಯ ಪಾಠವಾಗಲಿದೆ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ.