ಗ್ರೀನ್ ವಾರಿಯರ್ಸ್ ಅಭಿಯಾನಕ್ಕೆ ಚಾಲನೆ
ಕೋಲಾರ,ಆ.೩೧- ರೆಸ್ಟೆಲೆಸ್ ಡೆವಲಪ್ಮೆಂಟ್, ಗ್ರಾಮವಿಕಾಸ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಮಾಲಿನ್ಯ ನಿಯಂತ್ರಣ ಮಂಡಳಿ, ನಗರ ಸಭೆ ಮತ್ತು ಯಂಗ್ ಇಂಡಿಯಾ ಡೆವಲಪ್ಮೆಂಟ್ ಸೊಸೈಟಿ ವತಿಯಿಂದ ಕೋಲಾರ ನಗರದ ಹಳೇ ಬಸ್ ನಿಲ್ದಾಣದಲ್ಲಿ ಪ್ಲಾಸ್ಟಿಕ್ ಮುಕ್ತ ಜಿಲ್ಲೆಗಾಗಿ ಗ್ರೀನ್ ವಾರಿಯರ್ಸ್ ಅಭಿಯಾನಕ್ಕೆ ನ್ಯಾ.ಸದಸ್ಯ ಕಾರ್ಯದರ್ಶಿ ಸುನೀಲ್ ಎಸ್ ಹೊಸಮನಿ ಚಾಲನೆ ನೀಡಿದರು
ನಂತರ ಮಾತಾನಾಡಿದ ಅವರು, ಕೋಲಾರ ನಗರದ ಜಿಲ್ಲೆಯ ಶಾಲಾ ಕಾಲೇಜು, ಗ್ರಾಪಂ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ನಿಷೇಧದ ಕುರಿತು ಜನರಿಗೆ ಮಾಹಿತಿ ಡಲಾಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯ ಮುಕ್ತ ಜಿಲ್ಲೆಯಾಗಿಸಲು ಯಂಗ್ ಇಂಡಿಯಾ ಸಂಸ್ಥೆ ಪಣ ತೊಟ್ಟಿದೆ. ಪ್ಲಾಸ್ಟಿಕ್ ತ್ಯಜಿಸಿ ಪರಿಸರ ಉಳಿಸಿ ಎಂಬ ಘೋಷ ವಾಕ್ಯದಲ್ಲಿ ಜಿಲ್ಲೆಯ ಗ್ರಾಪಂಗಳಲ್ಲಿ, ನಗರ ಮಟ್ಟದಲ್ಲಿ ಪ್ಲಾಸ್ಟಿಕ್ ವಿರುದ್ಧ ಸಮರ ಸಾರುವ ಯೋಜನೆಗೆ ಚಾಲನೆ ನೀಡಲಾಗಿದೆ. ಮನೆ ಮನೆಗೆ ತೆರಳಿ ಪ್ಲಾಸ್ಟಿಕ್ ಸಂಗ್ರಹಿಸುವಂತೆ ನಗರ ಸಭೆ ಸಿಬ್ಬಂದಿಗೆ ಸೂಚನೆ ನೀಡಲಾಗುತ್ತಿದೆ.
ಪ್ಲಾಸ್ಟಿಕ್ ಮುಕ್ತ ಜಿಲ್ಲೆಗಾಗಿ ಸ್ಥಳೀಯ ಸಂಸ್ಥೆಗಳಿಂದ ಜನರಲ್ಲಿ ನಿರಂತರ ಜಾಗೃತಿ ಮೂಡಿಸುತ್ತಿದ್ದರೂ ನಿಷೇಧಿತ ಪ್ಲಾಸ್ಟಿಕ್ ವಸ್ತುಗಳ ಮಾರಾಟ ನಿರ್ಭೀತಿಯಿಂದ ನಡೆಯುತ್ತಿದೆ. ಪ್ಲಾಸ್ಟಿಕ್ ಬಳಕೆ ನಿಷೇಧ ಬಹುತೇಕ ಜವಾಬ್ದಾರಿ ಸ್ಥಳೀಯ ಸಂಸ್ಥೆಗಳ ಆಸಕ್ತಿಯನ್ನು ಅವಲಂಬಿಸಿದ್ದು, ಗ್ರಾಮೀಣ ಪ್ರದೇಶದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾಗಿದೆ. ನಗರದ ಸ್ಥಳೀಯ ಸಂಸ್ಥೆಗಳು ಈಗಾಗಲೇ ಸಭೆಗಳನ್ನು ನಡೆಸಿ ಜಾಗೃತಿ ಮೂಡಿಸಿದ್ದರೂ ಸಹ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಸರ್ಕಲ್ ಪೋಲಿಸ್ ಶ್ರೀನಿವಾಸಮೂರ್ತಿ ತಿಳಿಸಿದರು.
ಉತ್ತಮ ಪರಿಸರ ನಿರ್ಮಾಣಕ್ಕೆ ಆದ್ಯತೆ ನೀಡಲು ಪ್ರತಿಯೊಬ್ಬರು ಕೈಜೋಡಿಸಬೇಕು ಎಂದು ಈ ನಿಟ್ಟಿನಲ್ಲಿ ಗ್ರೀನ್ ವಾರಿಯರ್ಸ ತಂಡ ಕೆಲಸ ಮಾಡುತ್ತಿದೆ ಎಂದು ಗ್ರೀನ್ ವಾರಿಯರ್ಸ್ ಅಭಿಯಾನದ ಸಂಚಾಲಕಿ ಶ್ಯಾಮಲ ಆದಿಥಿ ತಿಳಿಸಿದರು
ಜಾಥಾದಲ್ಲಿ ಯಂಗ್ ಇಂಡಿಯಾ ಡೆವಲಪ್ಮೆಂಟ್ ಸೋಸೈಟಿ ಅಧ್ಯಕ್ಷ ನಾಗರಾಜ್, ನಗರಸಭೆಯ ಇಇ ದಿಲೀಪ್, ನಾಗಾರ್ಜುನ್, ಗ್ರೀನ್ ವಾರಿಯರ್ಸ್ ಮುಖ್ಯಸ್ಥರಾದ ತೇಜಶ್ವೀನಿ, ನಂದೀತ, ನಂದೀಶ್ ಮುಂತಾದವರು ಭಾಗವಹಿಸಿದರು.