ಪ್ರತಿಭಾ ಕಾರಂಜಿ ಪ್ರತಿಭೆ ಅನಾವರಣಕ್ಕೆ ಸಹಕಾರಿ
ಕೋಲಾರ,ಆ.೩೧:ಮಕ್ಕಳಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರತರಲು ಶಾಲಾ ಶಿಕ್ಷಣ ಇಲಾಖೆ ರೂಪಿಸಿರುವ ಪ್ರತಿಭಾ ಕಾರಂಜಿ ಮತ್ತು ಕಲೋತ್ಸವ ಸ್ಪರ್ಧೆಗಳು ಪ್ರತಿವರ್ಷವೂ ನವ ನವೀನ ಆಯಾಮವನ್ನು ಪಡೆಯುತ್ತಿದೆ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಎಸ್. ರಮೇಶ್ ಅಭಿಪ್ರಾಯಪಟ್ಟರು.
ಮುಳಬಾಗಿಲು ತಾಲೂಕಿನ ಮಲ್ಲನಾಯಕನಹಳ್ಳಿ ಸಂಕೀರ್ಣದ ದೊಮ್ಮಸಂದ್ರ ಶಾಲೆಯಲ್ಲಿ ವ್ಯಾಪ್ತಿಯ ಮಕ್ಕಳಿಗೆ ಹಮ್ಮಿಕೊಂಡಿದ್ದ ಸದರಿ ಸಾಲಿನ ಪ್ರತಿಭಾ ಕಾರಂಜಿ ಸ್ಪರ್ಧೆಗಳನ್ನು ಉದ್ಘಾಟಿಸಿ ಮಾತನಾಡಿದರು.
ಪ್ರತಿಭೆ ದೈವದತ್ತವಾದದ್ದು ಹಾಗು ತಲೆ ತಲೆಮಾರುಗಳಿಂದ ರಕ್ತಗತವಾಗಿ ಮಕ್ಕಳ ಮೂಲಕ ಹೂರ ಪ್ರಪಂಚಕ್ಕೆ ಪರಿಚಯವಾಗುತ್ತದೆ. ಇಂತಹ ಕಲಾಪ್ರಕಾರಗಳು ಹಾಗೂ ಜ್ಞಾನದ ಹೋರಣಗಳು ಸದ್ಯದ ಕಾರ್ಯಕ್ರಮದಲ್ಲಿ ಅರಳಲು ಉತ್ತಮ ವೇದಿಕೆ ನಿರ್ಮಾಣವಾಗಿದೆ ಎಂದರು.
ಶಿಕ್ಷಣ ಸಂಯೋಜಿತ ಪಿ.ಆರ್.ಕಾರ್ತಿಕ್ ಮಾತನಾಡಿ, ಇಲ್ಲಿನ ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಗಳ ತಾಳ್ಮೆ ಮತ್ತು ಸಹನೆ ಎಲ್ಲರಿಗೂ ಮಾದರಿಯಾದದ್ದು ಎಂದರು. ಸಮಾರಂಭದಲ್ಲಿ ವಾರಧಿ ಡಾ. ಮಂಜುನಾಥ್ ರೆಡ್ಡಿ, ಹಿರಿಯರಾದ ಗೋಪಾಲಕೃಷ್ಣ, ಪಂಚಾಯಿತಿ ಸದಸ್ಯ ಹರೀಶ್, ಸಿ.ಆರ್.ಪಿ.ರುದ್ರಪ್ಪ,ಪ್ರೌಢಶಾಲಾ ಮುಖ್ಯ ಶಿಕ್ಷಕ ಬಿ.ಎಂ ಮುನಿರಾಮಯ್ಯ, ನೌಕರ ಸಂಘದ ಕ್ರೀಡಾ ಕಾರ್ಯದರ್ಶಿ ಆನಂದ್, ಶಿಕ್ಷಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಓಬಳರೆಡ್ಡಿ, ಶಿಕ್ಷಕರ ಸಂಘದ ಸಂಘಟನಾ ಕಾರ್ಯದರ್ಶಿ ಬಟವಾರಹಳ್ಳಿ ಮಂಜುನಾಥ್, ಸಹ ಕಾರ್ಯದರ್ಶಿ ಮಂಜುನಾಥ್, ಕೆಜಿಬಿವಿ ಮುಖ್ಯ ಶಿಕ್ಷಕಿ ವನಜ, ಮಲ್ಲನಾಯಕನಹಳ್ಳಿ ಮುಖ್ಯ ಶಿಕ್ಷಕ ರಾಮಕೃಷ್ಣಪ್ಪ, ಗುಮ್ಲಾಪುರ ಸುಬ್ರಮಣಿ ಮತ್ತಿತರರು ಭಾಗವಹಿಸಿದ್ದರು.
ಸ್ಥಳೀಯ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಲತಾ ಕಾರ್ಯಕ್ರಮ ರೂಪಿಸಿ, ನಿವೃತ್ತಿ ಅಂಚಿನಲ್ಲಿರುವ ರವೀಂದ್ರ ಬಾಬು ಅತ್ಯುತ್ತಮ ನಿರೂಪಣೆ, ಮಕ್ಕಳ ವಿವಿಧ ವೇಶಗಳು ನಾಟ್ಯಗಳು ಕಾರ್ಯಕ್ರಮಕ್ಕೆ ಮೆರುಗು ನೀಡಿದವು. ವಿಜೇತರಿಗೆ ಸೊಣ್ಣವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ನವೀನ್ ಕುಮಾರ್ ನೀಡಿದ ಬಹುಮಾನಗಳನ್ನು ನೀಡಿ ಗೌರವಿಸಲಾಯಿತು.