ಅಧಿಕಾರಿಗಳು ಜನಪ್ರತಿನಿಧಿಗಳೊಂದಿಗೆ ಸಂರ್ಪಕದಲ್ಲಿರಲು ಸಚಿವ ಜಾರ್ಜ್ ಸೂಚನೆ
ಕೋಲಾರ,ಆ,೩೧-ಇಂದು ನಡೆದ ಪ್ರಗತಿ ಪರಿಶೀಲಾನ ಸಭೆಯಲ್ಲಿ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರ ಸೂಚಿಸಲಾಗಿದೆ. ಇದು ಪ್ರಥಮ ಸಭೆಯಾಗಿದೆ ಅಂತಿಮವಲ್ಲ. ಮುಂದಿನ ದಿನಗಳಲ್ಲಿ ನಿರಂತರವಾಗಿ ಪರಿಶೀಲನಾ ಸಭೆಗಳನ್ನು ನಡೆಸಲಾಗುವುದು. ಇಲಾಖೆಯ ಅಧಿಕಾರಿಗಳು ಜನಪ್ರತಿನಿಧಿಗಳಾದ ಶಾಸಕರು ವಿಧಾನ ಪರಿಷತ್ ಸದಸ್ಯರು ಹಾಗೂ ಲೋಕಸಭಾ ಸದಸ್ಯರೊಂದಿಗೆ ನಿರಂತವಾದ ಸಂಪರ್ಕದಲ್ಲಿದ್ದು ಸಮಸ್ಯೆಗಳನ್ನು ಬಗೆ ಹರಿಸಲು ಮುಂದಾಗ ಬೇಕು. ಅವರ ಮಾರ್ಗಸೂಚಿಗಳನ್ನು ಪಾಲಿಸುವಂತಾಗ ಬೇಕು, ಏನಾದರೂ ಬಗೆಹರಿಸಲಾಗದ ಸಮಸ್ಯೆಗಳಿದ್ದಲ್ಲಿ ನನ್ನ ಗಮನಕ್ಕೆ ತರಲು ಸೂಚಿಸಲಾಗಿದೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ತಿಳಿಸಿದರು,
ನಗರದ ಜಿಲ್ಲಾ ಪಂಚಾಯತ್‌ನಲ್ಲಿ ನಡೆದ ಪ್ರಗತಿ ಪರೀಶೀಲಾನ ಸಭೆಯ ನಂತರ ಅವರು ಮಾದ್ಯಮದವರೊಂದಿಗೆ ಮಾತನಾಡಿ ರಾಜ್ಯದಲ್ಲಿ ನೊತನವಾಗಿ ಕುಸುಮ ಬಿ. ಮತ್ತು ಕುಸುಬ ಸಿ ಎಂಬ ಯೋಜನೆಗಳನ್ನು ಪರಿಚಯಿಸಲಾಗಿದೆ. ಸರ್ಕಾರ ಮತ್ತು ಖಾಸಗಿ ಜಮೀನುಗಳಲ್ಲಿ ಸಬ್ ಸ್ಟೇಷನ್‌ಗಳು ಸ್ಥಾಪನೆ, ಸೋಲರ್ ಪ್ಲಾಂಟ್ ಯೋಜನೆಗಳಿಗೆ ಅದ್ಯತೆ ನೀಡಲಾಗುತ್ತಿದೆ. ಸೋಲರ್‌ಗೆ ಶೇ ೮೦ ರಷ್ಟು ಸಬ್ಸಿಡಿ ನೀಡಲಾಗುವುದು. ಗೃಹ ಜ್ಯೋತಿ ಯೋಜನೆಗೆ ೪,೧೨,೭೩೧ ಮಂದಿ ಪೈಕಿ ೩,೯೨,೯೬೫ ಮಂದಿ ಫಲಾನುಭವಿಗಳನ್ನು ಗುರುತಿಸಲಾಗಿದೆ.೩.೬೬ ಲಕ್ಷ ನೊಂದಣಿ ಮಾಡಿಸಿದ್ದಾರೆ. ಶೇ ೯೩ ರಷ್ಟು ಫಲಾನುಭವಿಗಳು ಗೃಹಲಕ್ಷ್ಮೀ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ , ೧೫೦ ಕೋಟಿ ರೂ ಸಬ್ಸಿಡಿಯಲ್ಲಿ ರೈತರಿಗೆ ಸೋಲರ್ ವಿದ್ಯುತ್ ಸಂಪರ್ಕ ನೀಡುತ್ತಿದೆ ಎಂದರು,
ಪ್ರಸ್ತುತ ನಮಗೆ ವಿದ್ಯುತ್ ಬೇಡಿಕೆ ಕಡಿಮೆಯಾಗಿದೆ. ಮುಂದಿನ ೨-೩ ತಿಂಗಳಲ್ಲಿ ಯಾಥಸ್ಥಿತಿಗೆ ಬಂದು ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಇದೆ. ಅಕ್ರಮ ಮತ್ತು ಸಕ್ರಮ ಕುರಿತದಂತೆ ೪ ಲಕ್ಷ ಪಂಪ್‌ಸೆಟ್‌ಗಳು ೫೦೦ ಮೀಟರ್ ಅಂತರ ಇದ್ದರೆ ಇದಕ್ಕೆ ಯಾವೂದೇ ಶುಲ್ಕ ವಿಧಿಸುವುದಿಲ್ಲ ಅದಕ್ಕಿಂತ ಹೆಚ್ಚಾಗಿದ್ದರೆ ಮಾತ್ರ ಶುಲ್ಕ ನಿಗಧಿ ಪಡೆಸಲಾಗುವುದು ಸಂರ್ಪಕ ಅದಿಕೃತ ಗೊಳಿಸ ಬೇಕಾಗಿದೆ ಎಂದು ಕುಸಮ ಬಿ ಮತ್ತು ಸಿ ಯೋಜನೆಗಳನ್ನು ವಿವರಿಸಿದರು,
ಪ್ರಶ್ನೆಯೊಂದಕ್ಕೆ ಸರ್ಕಾರದಲ್ಲಿ ಯಾವೂದೇ ಯೋಜನೆಗಳಿಗೆ ಅನುದಾನ ಕೊರತೆ ಇಲ್ಲ. ಗೃಹ ಜ್ಯೋತಿಯ ವೆಚ್ಚವನ್ನು ಭರಿಸಲು ತೊಂದರೆ ಇಲ್ಲ ಎಂದರು,
ಜನರೇಟರ್‌ಗೆ ಪ್ಯೋಸ್ ಟ್ರಿಪ್
ಜಿಲ್ಲಾ ಪಂಚಾಯತ್ ಪ್ರಗತಿ ಪರಿಶೀಲಾನ ಸಭೆಯಲ್ಲಿ ೨ ಭಾರಿ ವಿದ್ಯುತ್ ಕಡಿತ ಗೊಂಡ ಬಗ್ಗೆ ಸಚಿವರೇ ಅಧಿಕಾರಿಗಳಿಂದ ಸ್ವಷ್ಟನೆಯಲ್ಲಿ ವಿದ್ಯುತ್ ಪವರ್‌ನಲ್ಲಿ ಯಾವೂದೇ ರೀತಿ ಲೋಡ್ ಶೆಡ್ಡಿಂಗ್ ಇರಲಿಲ್ಲ. ಒಂದು ವೇಳೆ ಪವರ್ ಕಟ್ ಅದರೆ ಎಂಬ ಮುಂಜಾಗೃತ ಕ್ರಮದಿಂದ ಜನರೇಟರ್ ಸಂರ್ಪಕವನ್ನು ಕಲ್ಪಿಸಲಾಗಿತ್ತು. ಅದರೆ ಜನರೇಟರ್‌ಗೆ ಓವರ್ ಪವರ್ ಉಂಟಾಗಿದ್ದರಿಂದ ಪ್ಯೋಸ್ ಟ್ರಿಪ್ ಅಗಿದೆ ಹೊರತಾಗಿ ಪವರ್ ಕಟ್ ಅಗಿಲ್ಲ ಎಂದು ಸ್ವಷ್ಟ ಪಡೆಸಿದರು.