ವೈಯಕ್ತಿಕ-ಗುಂಪು ಆಟಗಳಲ್ಲಿ ವಿದ್ಯಾರ್ಥಿಗಳ ಉತ್ತಮ ಸಾಧನೆ
ತಾಳಿಕೋಟೆ:ಆ.೩೧: ಪಟ್ಟಣದ ಎಂ.ಜಿ.ಎA.ಕೆ. ಆಗ್ಲ ಮಾಧ್ಯಮ ಪ್ರೌಢ ಶಾಲೆಯ ಸಹಯೋಗದಲ್ಲಿ ಪಟ್ಟಣದ ವಿದ್ಯಾಭಾರತಿ ಪ್ರೌಢ ಶಾಲೆಯ ಆವರಣದಲ್ಲಿ ನಡೆದ ತಾಳಿಕೋಟೆ ಪಶ್ಚಿಮ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸರ್ವಜ್ಞ ವಿದ್ಯಾಪೀಠ ಕನ್ನಡ ಮತ್ತು ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿಗಳು ವೈಯಕ್ತಿಕ ಮತ್ತು ಗುಂಪು ಆಟಗಳಲ್ಲಿ ಉತ್ತಮ ಸಾಧನೆ ಮೆರೆದಿದ್ದಾರೆ.
ವೈಯಕ್ತಿಕ ವಿಭಾಗದ ಕ್ರೀಡಾಕೂಟದಲ್ಲಿ ಮೆಹಬೂಬ್ ಬೆಪಾರಿ ೧೦೦ ಮೀಟರ ಓಟ ಪ್ರಥಮ, ಮೊಹಮ್ಮದ ಅಯಾನ ಕಾಳಗಿ ೮೦೦ ಮೀಟರ್ ಓಟ ಪ್ರಥಮ, ಸಚಿನ ಜಂಬಗಿ ಗುಂಡು ಎಸೆತ ಪ್ರಥಮ, ಕು: ಪದ್ಮಾವತಿ ಡಾವು ೨೦೦ ಮೀಟರ್ ಓಟದಲ್ಲಿ ಪ್ರಥಮ, ಅನಿಲ ಗುಂಡಳ್ಳಿ ೧೦೦ ಮೀಟರ್ ಓಟದಲ್ಲಿ ದ್ವಿತೀಯ, ಅನಿಲ ಗುಂಡಳ್ಳಿ ೨೦೦ ಮೀಟರ್ ಓಟದಲ್ಲಿ ದ್ವಿತೀಯ,
ಶ್ರೀರಕ್ಷ ಚಿಮ್ಮಲಗಿ ೪೦೦ ಮೀಟರ್ ದ್ವಿತೀಯ, ಶಶಾಂಕ ಮಾಲಿಪಾಟೀಲ ಚಕ್ರ ಎಸೆತ ದ್ವಿತೀಯ, ಬಸವರಾಜ ಅಗಸರ ೪೦೦ ಮೀಟರ್ ದ್ವಿತೀಯ, ಸಚಿನ ಜಂಬಗಿ ಚಕ್ರ ಎಸೆತ ತೃತೀಯ, ಶ್ರೀನಾಥ ಬಿರಾದಾರ ೨೦೦ ಮೀಟರ್ ಓಟ ತೃತೀಯ, ಸಹನಾ ಕುಲಕರ್ಣಿ ೧೦೦ ಮೀಟರ್ ಓಟ ತೃತೀಯ, ಉಷಾ ಹಿರೇಮಠ ಗುಂಡು ಎಸೆತ ತೃತೀಯ, ಕಾವೇರಿ ಹಿರೇಮಠ ಚಕ್ರ ಎಸೆತ ತೃತೀಯ ಸ್ಥಾನ ಪಡೆದುಕೊಂಡು ತಾಲೂಕ ಮಟ್ಟದ ಕ್ರೀಡಾಕೂಟಗಳಿಗೆ ಆಯ್ಕೆಯಾಗಿದ್ದಾರೆ.
ಗುಂಪು ಆಟಗಳ ಸ್ಪರ್ಧೆಯಲ್ಲಿ ಬಾಲಕರ ವಾಲಿಬಾಲ ರೋಷನ್ ಕಾಳ್ಳಗಿ ತಂಡ ಪ್ರಥಮ, ಬಾಲಕರ ರಿಲೇ ಅನಿಲ ಗುಂಡಳ್ಳಿ ತಂಡ ಪ್ರಥಮ, ಬಾಲಕರ ತ್ರೋಬಾಲ ಮಹೇಶ್ ತಳವಾರ ತಂಡ ಪ್ರಥಮ, ಬಾಲಕಿಯರ ವಾಲಿಬಾಲ ಶಿವಾನಿ ಕದಂ ತಂಡ ಪ್ರಥಮ, ಬಾಲಕರ ಕಬಡ್ಡಿ ಶಶಾಂಕ ಮಾಲಿಪಾಟೀಲ ತಂಡ ದ್ವಿತೀಯ, ಬಾಲಕರ ತ್ರೋಬಾಲ ಸಚಿನ ಜಂಬಗಿ ದ್ವಿತೀಯ ಸ್ಥಾನ,
ಬಾಲಕರ ರಿಲೇ ಮೈಬುಬ ಬೆಪಾರಿ ತಂಡ ದ್ವಿತೀಯ ಸ್ಥಾನ, ಬಾಲಕಿಯರ ರಿಲೇ, ಸನ್ನತಿ ಜೋಶಿ ತಂಡ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ.
ವೈಯಕ್ತಿಕ ಮತ್ತು ಗುಂಪು ಆಟಗಳನ್ನು ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಪಡೆದುಕೊಳ್ಳುವದರೊಂದಿಗೆ ಉತ್ತಮ ಸಾಧನೆ ಮೇರೆದ ವಿದ್ಯಾರ್ಥಿಗಳಿಗೆ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷರಾದ ಸಿದ್ದನಗೌಡ ಮಂಗಳೂರ, ಮುಖ್ಯ ಗುರುಗಳಾದ ಸಂತೋಷ ಪವಾರ, ದೈಹಿಕ ಶಿಕ್ಷಕರಾದ ಬಸವರಾಜ ಚಳಗಿ, ಶಾಂತಗೌಡ ಬಿರಾದಾರ, ಶಿಕ್ಷಕರಾದ ರಾಜು ಜವಳಗೇರಿ, ಎಂ.ಬಿ. ಹಿರೇಗೌಡರ, ಭೀಮನಗೌಡ ಸಾಸನೂರ, ಬಸವರಾಜ ತಳವಾರ, ವಿಜಯಕುಮಾರ ಹಳಿಯಾಳ, ರಸೂಲಸಾ ತುರ್ಕಣಿಗೇರಿ, ಸಿದ್ದನಗೌಡ ಚೌದರಿ, ಶರಣಗೌಡ ಕಾಚಾಪುರ, ಸಂಜುಕುಮಾರ ಭಜಂತ್ರಿ, ರಮೇಶ ಪಾಸೋಡಿ, ರೂಪಾ ಪಾಟೀಲ, ಚುಂಚನೂರ, ಪುಷ್ಪ ನಾಡಗೌಡ, ಪಲ್ಲವಿ ಕಸ್ತೂರಿ, ಲಕ್ಷ್ಮೀ ಚುಂಚುರ, ದೇವೇಂದ್ರ ಗುಳೆದ, ಅನಿತಾ ಚೌದ್ರಿ, ಅಂಬುಜಾ ಹಜೇರಿ, ರಾಣಿ, ರಾಜಬಿ ಬಿದರಿ, ಪುಷ್ಪ ನಾಡಗೌಡರ, ಕಲ್ಪನಾ ಹಜೇರಿ, ನಾಗರತ್ನ ಮೈಲೇಶ್ವರ, ನಾಗಶ್ರೀ ನಾಯಕ, ಶಂಕ್ರಮ್ಮ, ಮೇಘಾ ಪಾಟೀಲ, ಮುಬಿನ್ ಮುರಾಳ, ಅವರು ಅಭಿನಂದಿಸಿದ್ದಾರೆ.