ಕ್ರೀಡಾ ಮನೋಭಾವನೆ ಪ್ರತಿಯೊಬ್ಬರಲ್ಲಿ ಬರಬೇಕಿದೆ:ಪಾಟೀಲ
ತಾಳಿಕೋಟೆ:ಆ.೩೧: ಕ್ರೀಡೆ ಮಾನಸಿಕವಾಗಿ ದೈಹಿಕವಾಗಿ ಸದೃಡಗೊಳಿಸಲು ಪ್ರೇರಣಾದಾಯಕ ಶಕ್ತಿ ಹೊಂದಿವೆ ಸೋಲು ಗೆಲುವು ಎರಡನ್ನು ಸಮಾನವಾಗಿ ಸ್ವೀಕರಿಸಬೇಕೆಂದು ಶ್ರೀ ಸಂಗಮಾರ್ಯ ವಿದ್ಯಾ ಸಂಸ್ಥೆಯ ಅಧ್ಯಕ್ಷ ಎಚ್.ಎಸ್.ಪಾಟೀಲ(ಬಾವೂರ) ಅವರು ಹೇಳಿದರು.
ಶುಕ್ರವಾರರಂದು ಎಸ್.ಎಸ್.ವಿದ್ಯಾ ಸಂಸ್ಥೆಯ ಎಚ್.ಎಸ್.ಪಾಟೀಲ ಆಂಗ್ಲ ಮಾಧ್ಯಮ ಪ್ರಾಥಮಿಕ ಮತ್ತು ಪ್ರೌಢ ಶಾಲಾ ಮೈಧಾನದಲ್ಲಿ ಶಾಲಾ ಶಿಕ್ಷಣ ಇಲಾಖೆ ಮತ್ತು ಜಿಲ್ಲಾ ಪಂಚಾಯತ ವಿಜಯಪುರ, .ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಸಮನ್ವಯಾಧಿಕಾರಿಗಳ ಕಾರ್ಯಾಲಯ ಮುದ್ದೇಬಿಹಾಳ, ಶ್ರೀ ಎಚ.ಎಸ್.ಪಾಟೀಲ ಆಂಗ್ಲ ಮಾದ್ಯಮ ಪ್ರಾಥಮಿಕ ಮತ್ತು ಪ್ರೌಢಶಾಲೆ ಇವರ ಸಂಯುಕ್ತ ಆಶ್ರಯದಲ್ಲಿ ೨೦೨೪-೨೫ನೇ ಸಾಲಿನ ತಾಳಿಕೋಟೆ ಹೋಬಳಿ ಮಟ್ಟದ ಪ್ರಾಥಮಿಕ ಶಾಲೆಗಳ ಹೋಬಳಿ ಮಟ್ಟದ ಕ್ರೀಡಾಕೂಟವನ್ನು ಕ್ರೀಡಾ ಜ್ಯೋತಿ ಬೆಳಗಿಸುವದರೊಂದಿಗೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು ಕ್ರೀಡೆಯಲ್ಲಿ ಗೆದ್ದೆ ಎಂಬ ಅಹಂಭಾವ ಬೇಡಾ ಸೋತೆ ಎಂಬ ಮಾನಸಿಕತೆ ಬೇಡಾ ಎಲ್ಲವನ್ನು ಸಮಾನವಾಗಿ ತೆಗೆದುಕೊಂಡು ಸೋಲೇ ಗೆಲುವಿನ ಮೆಟ್ಟಿಲನ್ನಾಗಿ ಮಾಡಿಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು ಮುಂದೋAದು ದಿನ ಉಜ್ವಲ ಭವಿಷ್ಯ ಕ್ರೀಡೆಯಲ್ಲಿ ಸಿಗಲಿದೆ ಕ್ರೀಡೆಯನ್ನು ಕ್ರೀಡೆಯನ್ನಾಗಿ ಆಡಬೆಕು ಅದರಲ್ಲಿ ಯಾವುದೇ ರೀತಿ ಬೇಧ ಭಾವವೆಂಬುದು ಇರಬಾರದು ಬೇರೆ ಬೇರೆ ಶಾಲೆಯವರು ಇದ್ದರೂ ಕೂಡಾ ಎಲ್ಲರೂ ಮುಂದೊAದು ದಿನ ಸ್ನೇಹಿತರಾಗಿ ಬಾಳಲಿದ್ದೀರಿ ಉತ್ತಮವಾಗಿ ಕ್ರೀಡೆಯನ್ನು ಆಡುವ ಮೂಲಕ ತಮ್ಮ ತಮ್ಮ ಆತ್ಮ ವಿಸ್ವಾಸ ಹಾಗೂ ಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೆಕೆಂದ ಅವರು ಶಿಕ್ಷಣ ಮತ್ತು ಕ್ರೀಡೆ ಒಂದು ನಾಣ್ಯದ ಎರಡು ಮುಖಗಳಿಂದ್ದAತೆ ಶಿಕ್ಷಣ ಬೌದ್ಧಿಕ ಶಿಕ್ಷಣಕ್ಕೆ ಪೂರಕವಾಗಿದ್ದರೆ ದೈಹಿಕ ಶಿಕ್ಷಣವು ದೈಹಿಕ ಬೆಳವಣಿಗೆಯ ಜೊತೆಗೆ ಮಾನಸಿಕತೆಯನ್ನು ದೂರಿಕರಿಸಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಸಚೀನ ಪಾಟೀಲ ಅವರು ಮಾತನಾಡಿ ಕ್ರೀಡಾಕೂಟದಲ್ಲಿ ಭಾಗವಹಿಸುವ ಎಲ್ಲಾ ಕ್ರೀಡಾಪಟುಗಳು ತಾಳಿಕೋಟೆಯ ಹೆಸರನ್ನು ರಾಜ್ಯ ಹಾಗೂ ರಾಷ್ಟç ಮಟ್ಟದಲ್ಲಿ ತೆಗೆದುಕೊಂಡು ಹೋಗಬೇಕು, ಸೋತಾಗ ಕುಗ್ಗಬಾರದು, ಗೆದ್ದಾಗ ಹಿಗ್ಗಬಾರದು ಕ್ರೀಡೆಯನ್ನು ಆಟವನ್ನಾಗಿ ಸ್ವೀಕರಿಸಿ ದೈಹಿಕವಾಗಿ ಹಾಗೂ ಮಾನಸಿಕವಾಗಿ ಸದೃಡತೆ ಹೊಂದಬೇಕೆAದರು.
ಅಕ್ಷರ ದಾಸೋಹ ಅಧಿಕಾರಿ ಎಂ.ಎA.ಬೆಳಗಲ್, ಅವರು ಮಾತನಾಡಿ ಕ್ರೀಡಾಪಟುಗಳಿಗೆ ಕ್ರೀಡೆಯಲ್ಲಿ ಸೋಲು ಗೆಲವು ಮುಖ್ಯವಲ್ಲ ಆಟವಾಡುವದರಿಂದ ವಿದ್ಯಾರ್ಥಿಗಳ ದೇಹ ಸದೃಢವಾಗುವುದು ಎಂದು ಹೇಳಿದರು.
ಶ್ರೀಮತಿ ಮೀರಾ ದೇಶಪಾಂಡೆ ಪ್ರಾಸ್ಥಾವಿಕ ಮಾತನಾಡಿದರು.
ವೇದಿಕೆಯ ಮೇಲೆ ಕಿರಣ.ಎಚ್.ಪಾಟೀಲ, ಸುರೇಶ.ಹಿರೇಮಠ, ಇಸಿಓ. ಕಾಶೀನಾಥ ಸಜ್ಜನ, ಇಸಿಓ. ಎಮ್.ಕೆ.ಬಾಗವಾನ, ಪುರಸಭೆಯ ಮುಖ್ಯಾಧಿಕಾರಿ ಮೋಹನ .ಜಾಧವ, ಎಮ್.ಎಮ್. ಬೆಳಗಲ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಟಿ.ವಜ್ಜಲ, ದೈಹಿಕ ಶಿಕ್ಷಣ ಶಿಕ್ಷಕರ ಅಧ್ಯಕ್ಷ ರಾವುತ .ಪೂಜಾರಿ, ಉಪಾಧ್ಯಕ್ಷ ಟಿ.ಎಸ್.ಲಮಾಣಿ, ಅನುದಾನಿತ ಪ್ರಾಥಮಿಕ ಶಾಲಾ ನೌಕರರ ಸಂಘದ ಅಧ್ಯಕ್ಷ ವೆಂಕೋಬಾ. ನಾಯ್ಕೋಡಿ, ಎಸ್.ಎಸ್.ತೀರ್ಥ, ಅರ್.ಎಸ್.ಮೂರಮಾನ, ಸಿಆರ್‌ಪಿ ಎಸ್.ಎಮ್.ಪಾಲ್ಕಿ, ಎಸ್.ಎಸ್ ಯಾಳವಾರ, ಬಿ.ಎ.ವಿಜಾಪುರ, ಎಲ್.ಜಿ.ಬಾಗೇವಾಡಿ, ಐ.ಎಲ್.ಆಲಮೇಲ, ಯಕೀನ, ಎಸ್.ಎನ್. ಕಡಕಲ್ಲ, ಧರ್ಮಣ್ಣ ಕಟ್ಟಿಮನಿ, ಹಾಗೂ ಎಲ್ಲಾ ದೈಹಿಕ ಶಿಕ್ಷಕರು, ನಿರ್ಣಾಯಕರು, ಐದು ವಲಯದ ಕ್ರೀಡಾಪಟುಗಳು. ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕ್ರೀಡಾಕೂಟಕ್ಕೂ ಮೊದಲು ಕ್ರೀಡಾಪಟುಗಳಿಂದ ಪಥ ಸಂಚಲನವನ್ನು ನಡೆಸಲಾಯಿತು.
ದೈಹಿಕ ಶಿಕ್ಷಕ ಎಮ್.ಎಸ್.ರಾಯಗೊಂಡ ಪ್ರತಿಜ್ಞಾ ವಿಧಿ ಬೋಧಿಸಿದರು.
ಶಿಕ್ಷಕ ಬಿ.ಐ.ಹಿರೇಹೊಳಿ ನಿರೂಪಿಸಿದರು. ಎಸ್.ಸಿ.ಗುಡಗುಂಟಿ ಸ್ವಾಗತಿಸಿದರು. ಆರ್.ಎ.ವಿಜಾಪುರ. ವಂದಿಸಿದರು.