ಕನ್ನಡ ಶಿಕ್ಷಕಿ ಶ್ವೇತಾರಿಗೆ ಗಡಿನಾಡ ಪ್ರಶಸ್ತಿ ಪ್ರಧಾನ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಆ.31-ಚಾಮರಾಜನಗರ ತಾಲೂಕಿನ ಗಡಿ ಭಾಗದಲ್ಲಿರುವ ಚಿಕ್ಕಹೊಳೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ತಮಿಳು ಶಾಲೆಯಲ್ಲಿ ಕನ್ನಡ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿರುವ ಶ್ವೇತಾ ಬಿ.ಎನ್. ಅವರಿಗೆ ಮಂಡ್ಯದಲ್ಲಿ ಜಿ.ವಿ.ಕೆ. ಪ್ರತಿಷ್ಠಾನ ಗಡಿನಾಡ ಉತ್ತಮ ಕನ್ನಡ ಶಿಕ್ಷಕಿ ಎಂದು ಗುರುತಿಸಿ ಇತ್ತೀಚೆಗೆ ಸನ್ಮಾನ ಮಾಡಲಾಯಿತು.
ಕಳೆದ 14 ವರ್ಷಗಳಿಂದ ಮಕ್ಕಳಿಗೆ ಕನ್ನಡ ಕಲಿಸುವ ಮೂಲಕ ಉತ್ತಮ ಸೇವೆ ಸಲ್ಲಿಸುತ್ತಿರುವ ಚಾಮರಾಜನಗರದ ಶ್ವೇತಾ. ಬಿ.ಎನ್. ಅವರನ್ನು ಗುರುತಿಸಿದ ಪ್ರತಿಷ್ಠಾನ ತನ್ನ 9ನೇ ವಾರ್ಷಿಕೋತ್ಸವದ ಅಂಗವಾಗಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಆವರಣದಲ್ಲಿ ಸನ್ಮಾನಿಸಿ ಪ್ರಶಸ್ತಿ ನೀಡಿ ಗೌರವಿಸಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರತಿಷ್ಠಾನದ ಅಧ್ಯಕ್ಷರೂ ಹಾಗೂ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ವಿಜೇತರು ಆದ ಆರ್.ವಾಸು ವಹಿಸಿದ್ದರು. ಪದ್ಮಶ್ರೀ ಪ್ರಶಸ್ತಿ ಪುರಸ್ಕøತರಾದ ಕೆ.ಎನ್. ರಾಜಣ್ಣ ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ ಪ್ರಶಸ್ತಿ ಪ್ರಧಾನ ಮಾಡಿದರು.